Sania Mirza retirement: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ ಗೆ ವಿಚ್ಛೇದನ ನೀಡುವ ಸುದ್ದಿಯ ನಡುವೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟೆನಿಸ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಗಾಯದ ವಿಚಾರವಾಗಿ ಸಾನಿಯಾ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಮುಂದಿನ ತಿಂಗಳು ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಆಡುವುದಾಗಿ ಸಾನಿಯಾ ಹೇಳಿದ್ದಾರೆ. ಈ ಚಾಂಪಿಯನ್‌ಶಿಪ್ ಸಾನಿಯಾ ವೃತ್ತಿಜೀವನದ ಕೊನೆಯ ಪಂದ್ಯಾವಳಿಯಾಗಿದೆ. ಈ ದುಬೈ ಟೆನಿಸ್ ಚಾಂಪಿಯನ್‌ಶಿಪ್ ಫೆಬ್ರವರಿ 19 ರಂದು ಆರಂಭವಾಗಲಿದೆ. ಇದು WTA 1000 ಈವೆಂಟ್ ಆಗಿರುತ್ತದೆ. ಈ ಟೂರ್ನಿಯಲ್ಲಿ ಸಾನಿಯಾ ಕೊನೆಯ ಬಾರಿಗೆ ತಮ್ಮ ಅಭಿಮಾನಿಗಳ ಜೊತೆ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ: ರಿಶಬ್ ಪಂತ್ ದಾಖಲಾಗಿರುವ ಆಸ್ಪತ್ರೆ ಫೋಟೋ ಶೇರ್ ಮಾಡಿದ ನಟಿ ಊರ್ವಶಿ ರೌಟೆಲಾ..!


36 ವರ್ಷ ವಯಸ್ಸಿನ ಸಾನಿಯಾ ಮಿರ್ಜಾ ಡಬಲ್ಸ್‌ನಲ್ಲಿ ವಿಶ್ವದ ನಂಬರ್-1 ಆಗಿದ್ದಾರೆ. 2022ರ ಅಂತ್ಯದಲ್ಲಿ ನಿವೃತ್ತಿ ಹೊಂದುವುದಾಗಿ ಸಾನಿಯಾ ಕಳೆದ ವರ್ಷವೇ ಘೋಷಿಸಿದ್ದರು. ಇದೀಗ ಸಾನಿಯಾ ಮಿರ್ಜಾ ಈ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಆಡಲಿದ್ದಾರೆ. ಇದಾದ ಬಳಿಕ ಯುಎಇಯಲ್ಲಿ ಚಾಂಪಿಯನ್ ಶಿಪ್ ಆಡಿದ ಬಳಿಕ ಟೆನಿಸ್ ಗೆ ವಿದಾಯ ಹೇಳಲಿದ್ದಾರೆ.


ಕಳೆದ ವರ್ಷ ನಿವೃತ್ತಿಯ ಸೂಚನೆಯನ್ನು ಸಾನಿಯಾ wtatennis.com ಗೆ ನೀಡಿದ್ದರು. 'ಕಳೆದ ವರ್ಷ WTA ಫೈನಲ್‌ನ ನಂತರವೇ ನಾನು ನಿವೃತ್ತಿಯ ಯೋಜನೆಯನ್ನು ಮಾಡಿದ್ದೆ. ಬಲ ಮೊಣಕೈ ಗಾಯದಿಂದಾಗಿ, ಯುಎಸ್ ಓಪನ್ ಮತ್ತು ಉಳಿದ ಪಂದ್ಯಾವಳಿಯಿಂದ ಹೆಸರನ್ನು ಹಿಂತೆಗೆದುಕೊಳ್ಳಬೇಕಾಯಿತು. ನಾನು ನನ್ನ ಸ್ವಂತ ನಿಯಮಗಳ ಮೇಲೆ ಬದುಕುವ ವ್ಯಕ್ತಿ. ಇದೇ ಕಾರಣಕ್ಕೆ ನಾನು ಗಾಯದ ಸಮಸ್ಯೆಯಿಂದ ಹೊರಗುಳಿಯಲು ಬಯಸದೆ ಇನ್ನೂ ತರಬೇತಿ ಪಡೆಯುತ್ತಿದ್ದೇನೆ. ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ನಂತರ ನಾನು ನಿವೃತ್ತಿ ಹೊಂದಲು ಯೋಜಿಸಿರುವ ಕಾರಣವೂ ಇದೇ” ಎಂದು ಹೇಳಿದ್ದಾರೆ.


ಸಾನಿಯಾ ಮಿರ್ಜಾ ಐದು ತಿಂಗಳ ಕಾಲ ಡೇಟಿಂಗ್ ನಡೆಸಿ ಬಳಿಕ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು 2010 ರಲ್ಲಿ ವಿವಾಹವಾದರು. ಬಳಿಕ 30 ಅಕ್ಟೋಬರ್ 2018ರಂದು ಮಗ ಇಜಾನ್ ಮಿರ್ಜಾ ಮಲಿಕ್ ಗೆ ಸಾನಿಯಾ ಜನ್ಮ ನೀಡಿದರು. ಆದರೆ ಇದೀಗ ಪಾಕಿಸ್ತಾನದ ಮಾಧ್ಯಮಗಳಲ್ಲಿ ಸಾನಿಯಾ ಮತ್ತು ಶೋಯೆಬ್ ವಿಚ್ಛೇದನದ ಸುದ್ದಿ ಭಾರೀ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ, ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: India vs Sri Lanka: ವಿಶಿಷ್ಟ ದಾಖಲೆ ನಿರ್ಮಿಸಿದ ಆರ್ಶ್ದೀಪ್ ಸಿಂಗ್


ಸಾನಿಯಾ ಗೆದ್ದಿರುವ ಪ್ರಶಸ್ತಿಗಳ ಪಟ್ಟಿ:


ಸಾನಿಯಾ ಅವರು, ಅರ್ಜುನ ಪ್ರಶಸ್ತಿ (2004), ಪದ್ಮಶ್ರೀ ಪ್ರಶಸ್ತಿ (2006), ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (2015) ಮತ್ತು ಪದ್ಮಭೂಷಣ ಪ್ರಶಸ್ತಿ (2016) ಗೌರವಕ್ಕೆ ಪಾತ್ರರಾಗಿದ್ದಾರೆ. ಸಾನಿಯಾ ಇದುವರೆಗೆ 6 ಪ್ರಮುಖ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದಿದ್ದಾರೆ. ಆಸ್ಟ್ರೇಲಿಯನ್ ಓಪನ್ (2016), ವಿಂಬಲ್ಡನ್ (2015) ಮತ್ತು ಯುಎಸ್ ಓಪನ್ (2015) ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಇದಲ್ಲದೆ, ಅವರು ಮಿಶ್ರ ಡಬಲ್ಸ್‌ನಲ್ಲಿ ಮೂರು ಗ್ರಾಂಡ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ (2009), ಫ್ರೆಂಚ್ ಓಪನ್ (2012) ಮತ್ತು ಯುಎಸ್ ಓಪನ್ (2014) ಪ್ರಶಸ್ತಿಗಳನ್ನು ಗೆದ್ದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ