ಮುಖೇಶ್ ಅಂಬಾನಿ ಸೊಸೆಯರಿಗಿಂತಲೂ ಶ್ರೀಮಂತೆ ಈ ಆಟಗಾರ್ತಿ, ಈಕೆ ಎಷ್ಟು ಕೋಟಿ ಸಂಪತ್ತಿನ ಒಡತಿ ಗೊತ್ತಾ?
Sania Mirza Net Worth: ಮುಕೇಶ್ ಅಂಬಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸೇರಿದ್ದಾರಾದರೂ ಮತ್ತು ಅವರ ಸೊಸೆಯರಾದ ರಾಧಿಕಾ ಮರ್ಚೆಂಟ್ ಹಾಗು ಶ್ಲೋಕಾ ಮೆಹ್ತಾ ಕೂಡ ಶ್ರೀಮಂತ ಉದ್ಯಮಿಗಳ ಕುಟುಂಬದಿಂದಲೇ ಬಂದಿದ್ದರೂ ವೈಯಕ್ತಿಕವಾಗಿ ನೋಡಿದರೆ ರಾಧಿಕಾ ಮರ್ಚೆಂಟ್ ಮತ್ತು ಶ್ಲೋಕಾ ಮೆಹ್ತಾ ಅವರಿಗೆ ಹೋಲಿಸಿಕೊಂಡರೆ ಈ ಆಟಗಾರ್ತಿಯೇ ಹೆಚ್ಚು ಸಿರಿವಂತೆ.
Sania Mirza Net Worth: ಇತ್ತೀಚಿಗೆ ಶ್ರೀಮಂತಿಕೆ ಬಗ್ಗೆ ಮಾತು ಶುರುವಾಯ್ತು ಅಂದ್ರೆ ಮುಖೇಶ್ ಅಂಬಾನಿ ಹೆಸರು ಉಲ್ಲೇಖ ಆಗೇ ಆಗುತ್ತೆ. ಮುಖೇಶ್ ಅಂಬಾನಿ ಅಷ್ಟೇಯಲ್ಲ, ಅವರ ಪತ್ನಿ ನೀತಾ ಅಂಬಾನಿ, ಅವರ ಮಕ್ಕಳಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ ಬಗ್ಗೆಯೂ ಚರ್ಚೆಯಾಗುತ್ತೆ. ಅಷ್ಟೇ ಏಕೆ, ಸೊಸೆಯರಾದ ರಾಧಿಕಾ ಮರ್ಚೆಂಟ್ ಮತ್ತು ಶ್ಲೋಕಾ ಮೆಹ್ತಾ ಬಗ್ಗೆಯೂ ಮಾತು ಬೆಳೆಯುತ್ತೆ. ಆದ್ರೆ ಒಂದು ಇಂಟರಸ್ಟಿಂಗ್ ಸ್ಟೋರಿ ಏನು ಗೊತ್ತಾ? ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಮುಕೇಶ್ ಅಂಬಾನಿ ಸೊಸೆಯರಾದ ರಾಧಿಕಾ ಮರ್ಚೆಂಟ್ ಮತ್ತು ಶ್ಲೋಕಾ ಮೆಹ್ತಾ ಅವರಿಗಿಂತಲೂ ಶ್ರೀಮಂತೆ! ಸಾನಿಯಾ ಮಿರ್ಜಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಹೌದು, ಇದು ನಿಜ. ಮುತ್ತಿನ ನಗರಿಯ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರು ಮುಕೇಶ್ ಅಂಬಾನಿ ಸೊಸೆಯರಾದ ರಾಧಿಕಾ ಮರ್ಚೆಂಟ್ ಮತ್ತು ಶ್ಲೋಕಾ ಮೆಹ್ತಾ ಅವರಿಗಿಂತಲೂ ಹೆಚ್ಚು ಸಿರಿವಂತೆ. ಮುಕೇಶ್ ಅಂಬಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಸೇರಿದ್ದಾರಾದರೂ ಮತ್ತು ಅವರ ಸೊಸೆಯರಾದ ರಾಧಿಕಾ ಮರ್ಚೆಂಟ್ ಹಾಗು ಶ್ಲೋಕಾ ಮೆಹ್ತಾ ಕೂಡ ಶ್ರೀಮಂತ ಉದ್ಯಮಿಗಳ ಕುಟುಂಬದಿಂದಲೇ ಬಂದಿದ್ದರೂ ವೈಯಕ್ತಿಕವಾಗಿ ನೋಡಿದರೆ ರಾಧಿಕಾ ಮರ್ಚೆಂಟ್ ಮತ್ತು ಶ್ಲೋಕಾ ಮೆಹ್ತಾ ಅವರಿಗೆ ಹೋಲಿಸಿಕೊಂಡರೆ ಸದ್ಯಕ್ಕೆ ಸಾನಿಯಾ ಮಿರ್ಜಾ ಅವರೇ ಶ್ರೀಮಂತೆ.
ಸಾನಿಯಾ, ರಾಧಿಕಾ, ಶ್ಲೋಕಾ ಅವರ ಆಸ್ತಿ ವಿವರ ಏನು?
ಮುಕೇಶ್ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿ ಅವರ ಪತ್ನಿ ಶ್ಲೋಕಾ ಮೆಹ್ತಾ ಹೆಸರಿನಲ್ಲಿ ಇರುವ ಆಸ್ತಿಯ ನಿವ್ವಳ ಮೌಲ್ಯ 18 ಮಿಲಿಯನ್ ಡಾಲರ್. ರೂಪಾಯಿಗಳಲ್ಲಿ ಹೇಳುವುದಾದರೆ 120 ಕೋಟಿ. ಇನ್ನು ಮುಕೇಶ್ ಅಂಬಾನಿ ಅವರ ಮತ್ತೋರ್ವ ಮಗ ಅನಂತ್ ಅಂಬಾನಿ ಅವರ ಮಡದಿ ರಾಧಿಕಾ ಮರ್ಚೆಂಟ್ ಅವರ ಹೆಸರಿನಲ್ಲಿ ಇರುವ ಆಸ್ತಿಯ ನಿವ್ವಳ ಮೌಲ್ಯ ಸುಮಾರು 10 ಕೋಟಿ ರೂಪಾಯಿಗಳು. ಆದರೆ ಸಾನಿಯಾ ಮಿರ್ಜಾ ಅವರ ಆಸ್ತಿಯ ನಿವ್ವಳ ಮೌಲ್ಯ 26 ಮಿಲಿಯನ್ ಡಾಲರ್. ರೂಪಾಯಿಗಳಲ್ಲಿ ಹೇಳುವುದಾದರೆ 216 ಕೋಟಿ.
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಅವರ ತಂದೆ ಖ್ಯಾತ ಉದ್ಯಮಿ ರೆಸೆಲ್ ಮೆಹ್ತಾ. ರೆಸೆಲ್ ಮೆಹ್ತಾ ಅವರ ಒಟ್ಟು ಆಸ್ತಿಯ ಮೌಲ್ಯ 1,844 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತದೆ. ಹಾಗೆಯೇ ಇನ್ನೊಬ್ಬ ಸೊಸೆ ರಾಧಿಕಾ ಮರ್ಚೆಂಟ್ ಅವರ ತಂದೆ ವೀರೇನ್ ಮರ್ಚೆಂಟ್. ವೀರೇನ್ ಮರ್ಚೆಂಟ್ ಅವರ ಒಟ್ಟು ಆಸ್ತಿಯ ಮೌಲ್ಯ 750 ಕೋಟಿ ರೂಪಾಯಿಗಳು ಎನ್ನಲಾಗಿದೆ. ಇಂಥ ಹಿನ್ನೆಲೆಯಿಂದ ಬಂದು ಮುಕೇಶ್ ಅಂಬಾನಿ ಸೊಸೆಯರಾಗಿರುವ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಅವರಿಗಿಂತಲೂ ಸಾನಿಯಾ ಮಿರ್ಜಾ ಶ್ರೀಮಂತೆ ಎನ್ನುವುದು ಇಂದು ಅವರ ಹುಟ್ಟುಹಬ್ಬದ ದಿನವೇ ಗೊತ್ತಾಗಿದೆ.
ಸಾನಿಯಾ ಮಿರ್ಜಾ ಶ್ರೀಮಂತೆಯಾಗಿದ್ದೇಗೆ?
ಸಾನಿಯಾ ಮಿರ್ಜಾ ಆರ್ಡಿನರಿ ಟೆನಿಸ್ ಆಟಗಾರ್ತಿಯಲ್ಲ. ಭಾರತದ ಟೆನಿಸ್ ಇತಿಹಾಸದಲ್ಲಿ ತನ್ನದೇಯಾದ ಪುಟಗಳನ್ನೂ ಬರೆದ ಅಪರೂಪದ ಆಟಗಾರ್ತಿ. ಹಲವು ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೂಡ ಮಿಂಚಿದ್ದಾರೆ. ತನ್ನದೆಯಾದ ಟೆನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಟೆನಿಸ್ ಡಬಲ್ಸ್ ನಲ್ಲಿ ವಿಶ್ವದಲ್ಲೇ ನಂಬರ್ 1 ಆಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮೂರು ಮಹಿಳಾ ಡಬಲ್ಸ್ ಮೂರು ಮಿಶ್ರ ಡಬಲ್ಸ್ ಗೆದ್ದಿದ್ದಾರೆ. ಅರ್ಜುನ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳೂ ಅವರ ಮುಡಿಗೇರಿವೆ. ಹಾಗಾಗಿಯೇ ಬಾಲಿವುಡ್ ಸೆಲಬ್ರಿಟಿಗಳನ್ನೂ ಮೀರಿಸುವಂತಹ ಸ್ಟೇಟಸ್ ಸಾನಿಯಾ ಮಿರ್ಜಾ ಅವರದಾಗಿದೆ.
ಸಾನಿಯಾ ಮಿರ್ಜಾ ಅವರು ಹರ್ಷೇಸ್, ಏಷ್ಯನ್ ಪೇಂಟ್ಸ್ ಮತ್ತು ಡ್ಯಾನ್ಯೂಬ್ ಪ್ರಾಪರ್ಟಿಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. DNA ವರದಿಯ ಪ್ರಕಾರ ಸಾನಿಯಾ ಮಿರ್ಜಾ ಅವರು ಪ್ರತಿ ಬ್ರ್ಯಾಂಡ್ ಪ್ರೊಮೋಷನ್ ಗೆ ಸರಿ ಸುಮಾರು 60ರಿಂದ 70 ಲಕ್ಷ ರೂಪಾಯಿ ಚಾರ್ಚ್ ಮಾಡುತ್ತಾರೆ. ಇವುಗಳ ಮುಖಾಂತರವೇ ಅವರು ಪ್ರತಿ ವರ್ಷ ಸುಮಾರು 25 ಕೋಟಿ ರೂಪಾಯಿ ದುಡಿಯುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಐಷಾರಾಮಿ ಮನೆಯಲ್ಲಿ ವಾಸ:
ಸಾನಿಯಾ ಮಿರ್ಜಾ ಅವರು ಹೈದಾರಾಬಾದ್ ಮತ್ತು ದುಬೈಗಳಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ‘ಝೀ ನ್ಯೂಸ್’ ವರದಿ ಪ್ರಕಾರ ಹೈದಾರಾಬಾದಿನಲ್ಲಿ ಇರುವ ಅವರ ಮನೆಯ ಮೌಲ್ಯ 13 ಕೋಟಿ ರೂಪಾಯಿ. ದುಬೈನಲ್ಲಿ ಇರುವ ಮನೆ ಇನ್ನೂ ಐಷಾರಾಮಿಯಾಗಿದೆ ಎಂದು ಹೇಳಲಾಗುತ್ತದೆ. ಸಾನಿಯಾ ಮಿರ್ಜಾ ಬಳಿ BMW 7 ಸರಣಿ ಕಾರುಗಳು, ರೇಂಜ್ ರೋವರ್ ಇವೋಕ್, ಜಾಗ್ವಾರ್ XE, ಮರ್ಸಿಡಿಸ್ ಬೆಂಜ್, Porsche ಮತ್ತು Audi ಕಾರುಗಳ ಸಂಗ್ರಹವೇ ಇದೆ.
ಸಾನಿಯಾ ಮಿರ್ಜಾ ವ್ಯಾಪಾರ-ವ್ಯವಹಾರ:
ಭಾರತ ಮತ್ತು ದುಬೈನಲ್ಲಿ ಸಾನಿಯಾ ಮಿರ್ಜಾ ಅವರು ವ್ಯಾಪಾರ ಮತ್ತು ವ್ಯವಹಾರ ಹೊಂದಿದ್ದಾರೆ. ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿ (SMTA)ಯಲ್ಲಿ ಉದಯೋನ್ಮುಖ ಟೆನಿಸ್ ಆಟಗಾರರಿಗೆ ಅರ್ಹ ಮತ್ತು ಅನುಭವಿ ಟೆನಿಸ್ ಆಟಗಾರರಿಂದ ತರಬೇತಿ ಕೊಡಿಸುತ್ತಾರೆ. ಅವರ ವೆಬ್ ಸೈಟ್ ಪ್ರಕಾರ ಅವರು ವಿವಿಧ ಕಾರ್ಯಕ್ರಮಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 20ರಿಂದ 75 ಸಾವಿರ ರೂಪಾಯಿ ಶುಲ್ಕ ಪಡೆಯುತ್ತಾರೆ. ಇದು ಕೂಡ ಅವರ ಆದಾಯದ ಮೂಲಗಳಲ್ಲಿ ಒಂದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ