Sharmeen Segal: ಸಾಮಾನ್ಯವಾಗಿ ಎಲ್ಲರೂ ರಾಜಕಾರಣದಲ್ಲಿ ಇರುವ ‘ಡೈನಾಸ್ಟಿ’ ಮತ್ತು ‘ನೆಪೋಟಿಸಂ’ ಬಗ್ಗೆ ಮಾತನಾಡುತ್ತಾರೆ. ಆದರೆ ಇವು ಎಲ್ಲಾ ಕ್ಷೇತ್ರಗಳಲ್ಲ್ಲೂ ಇವೆ. ಚಿತ್ರರಂಗದಲ್ಲಂತೂ ತುಂಬಾ ಇವೆ. ನಟ-ನಟಿಯರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ತಾವು ಹೀರೊ-ಹೀರೋಯಿನ್ ಆಗಬೇಕು ಅಂತಾ ಸೈಕಲ್ ಹೊಡೀತಾನೆ ಇದಾರೆ. ಗೆದ್ದವರಿಗಿಂತ ಬಿದ್ದವರೇ ಹೆಚ್ಚು. ಆದ್ರೆ ಇಲ್ಲೊಬ್ಬರು 10 ವರ್ಷದಿಂದ ಇಂಡಸ್ಟ್ರಿಯಲ್ಲಿ ಇದ್ದರೂ ಒಂದೂ ಹಿಟ್ ಕೊಟ್ಟಿಲ್ಲ. ಹಾಗಂತ ಅವರ ಆಸ್ತಿ ಮಾತ್ರ ಅವರಂತೆಯೇ ತೆಳ್ಳಗಿದೆ ಎಂದುಕೊಳ್ಳಬೇಡಿ. ಅದು ಜಸ್ಟ್ 53,800 ಕೋಟಿ ರೂಪಾಯಿ.
ನಟ-ನಟಿಯರ ಮಕ್ಕಳು ಸಿನಿಮಾ ರಂಗಕ್ಕೆ ಬಂದಾಗ ಅವರ ಮೇಲೆ ಅಪಾರವಾದ ನಿರೀಕ್ಷೆ ಇರುತ್ತೆ. ಆ ನಿರೀಕ್ಷೆಯ ಭಾರಕ್ಕೋ, ಅವರಿಗೆ ಅರ್ಹತೆ, ನಟನಾ ಸಾಮರ್ಥ್ಯ ಇಲ್ಲದೆಯೋ, ಚಿತ್ರಗಳ ಆಯ್ಕೆಯಲ್ಲಿ ಆಗುವ ತಪ್ಪುಗಳಿಂದಲೋ ಒಟ್ಟಿನಲ್ಲಿ ಚಿತ್ರರಂಗದಲ್ಲಿ ಈ ‘ಸನ್ ಆಫ್’ ಮತ್ತು ‘ಡಾಟರ್ ಆಫ್’ ಎಂಬ ಸಂಗತಿಗಳು ಅಷ್ಟು ವರ್ಕ್ ಆಗೊಲ್ಲ. ಉದಾಹರಣೆಗೆ ಶರ್ಮಿನ್ ಸೆಹೆಗಲ್.
ಶರ್ಮಿನ್ ಸೆಹೆಗಲ್ ಅವರೇ ಉದಾಹರಣೆ ಯಾಕಾಗಬೇಕು ಅಂತಾ ನೀವು ಕೇಳಬಹುದು. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್, ಹೇಮಮಾಲಿನಿ ಪುತ್ರಿ ಈಶಾ ಡಿಯೋಲ್, ಒಬ್ಬರಾ, ಇಬ್ಬರಾ… ಫುಲ್ ಪೋಸ್ ಕೊಟ್ಟು ಫೇಲ್ ಆದ ಬಡೇ ಬಾಪ್ ಕಾ ಬೇಟಾ-ಬೇಟಿಯರು… ನಟರ ವಿಷಯದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ನಿರೀಕ್ಷಿತ ಯಶಸ್ಸು ಕಾಣಲಿಲ್ಲ ಎನ್ನುವುದು ಕೆಣ್ಣೆದುರಿಗಿರುವ ವಾಸ್ತವ.
ಇದನ್ನೂ ಓದಿ- ನಿರೂಪಕಿ ಅನುಶ್ರೀಗೆ ಕೂಡಿಬಂತಾ ಕಂಕಣಭಾಗ್ಯ? ಯಾರದು ವರ? ವೈರಲ್ ಆಯ್ತು ಪ್ರೀ ವೆಡ್ಡಿಂಗ್ ಶೂಟ್!
ಸ್ಯಾಂಡಲ್ ವುಡ್ ವಿಚಾರಕ್ಕೆ ಬರುವುದಾದರೆ ಬ್ಯುಟಿ ಕ್ವೀನ್ ರಮ್ಯಾ, ಕ್ರೇಜಿ ಕ್ವೀನ್ ರಕ್ಷಿತಾ, ಗುಳಿಕೆನ್ನೆಯ ಸುಂದರಿ ರಚಿತಾ ಇವರೆಲ್ಲಾ ದಶಕಗಳ ಕಾಲ ಚಿತ್ರರಂಗದಲ್ಲಿ ಇದ್ದಾರೆ. ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇವರ ಆಸ್ತಿ ಖಂಡಿತಾ 53,800 ಕೋಟಿ ರೂಪಾಯಿಗಳಷ್ಟು ಇರಲಾರದು. ಇವರು ಡೈನಾಸ್ಟ್ ಗಳೋ, ನೆಪೋಟಿಸಂ ಮಾಡಿದ್ದಾರೋ ಇಲ್ಲವೋ ಅದು ಬೇರೆಯದೇ ವಿಚಾರ. ಆದರೆ ಕನ್ನಡದ ಕುವರಿಯರಾದ ಇವರೆಲ್ಲಾ ಇವತ್ತಿಗೂ ತುಂಬಾ ಸಿಂಪಲ್ಲಾಗಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಮತ್ತೆ ಶರ್ಮಿನ್ ಸೆಹೆಗಲ್ ಬರೋಣ. ಶರ್ಮಿನ್ ಸೆಹೆಗಲ್ 2014ರಲ್ಲಿ ಅಂದರೆ ಬರೋಬ್ಬರಿ 10 ವರ್ಷಗಳ ಹಿಂದೆ ‘ಮೇರಿಕೋಮ್’ ಚಿತ್ರದ ಮೂಲಕ ಹಿಂದಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ರು. ‘ಮೇರಿಕೋಮ್’ ಚಿತ್ರದಲ್ಲಿ ಅವರದು ಸಹಾಯಕ ನಿರ್ದೇಶಕನ ಪಾತ್ರ. ನಂತರ 2015ರಲ್ಲಿ ‘ಬಾಜಿರಾವ್ ಮಸ್ತಾನಿ’ ಚಿತ್ರದಲ್ಲೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 2019ರಲ್ಲಿ ‘ಮಲಾಲ್’ ಚಿತ್ರದ ಮೂಲಕ ನಟನೆಯನ್ನೂ ಮಾಡಿದರು. ಇದಾದ ಮೇಲೆ 2022ರಲ್ಲಿ ‘ಅತಿಥಿ ಭೂತೋ ಭವ’ ಎನ್ನುವ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಓಟಿಟಿಯಲ್ಲಿ ಮಾತ್ರ ತೆರೆಕಂಡಿತು. ಹೀಗೆ ಸಿನಿಮಾ ರಂಗಕ್ಕೆ ಬಂದು 10ವರ್ಷವಾದರೂ ಶರ್ಮಿನ್ ಸೆಹೆಗಲ್ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ.
ಶರ್ಮಿನ್ ಸೆಹೆಗಲ್ ಮಾಡಿದ ಸಿನಿಮಾಗಳು ಸಕ್ಸಸ್ ಆಗದೇ ಇರಬಹುದು. ಅವರ ವೈಯಕ್ತಿಕ ಜೀವನದ ಬೆಳವಣಿಗೆ ಮಾತ್ರ ಸಖತ್ತಾಗಿದೆ. ಏಕೆಂದರೆ ಶರ್ಮಿನ್ ಸೆಹೆಗಲ್ ಈಗ ಬರೋಬ್ಬರಿ 53,800 ಕೋಟಿ ರೂಪಾಯಿಗಳ ಒಡತಿ. ಅದು ಹೇಗೆ ಸಾಧ್ಯವಾಯಿತು ಎನ್ನುವುದು ಇನ್ನೂ ಇಂಟರೆಸ್ಟಿಂಗ್. ಸಿನಿಮಾ ರಂಗ ಕೈ ಹಿಡಿಯುವುದಿಲ್ಲ ಎನ್ನುವುದು ಖಾತರಿಯಾಗುತ್ತಿದ್ದಂತೆ ಶರ್ಮಿನ್ ಸೆಹೆಗಲ್ 2023ರಲ್ಲಿ ಟೊರೊಂಟೊ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಅಮನ್ ಮೆಹ್ತಾ ಅವರ ಕೈ ಹಿಡಿದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಈಗ ಶರ್ಮಿನ್ ಸೆಹೆಗಲ್ 53,800 ಕೋಟಿ ರೂಪಾಯಿಗಳ ಆಸ್ತಿ ಹೊಂದಲು ಸಾಧ್ಯವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.