Sarfaraz Khan: ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಫಿಟ್ ಆಟಗಾರರಲ್ಲಿ ಒಬ್ಬರು. ವಿರಾಟ್ ತಂಡಕ್ಕೆ ಸೇರಿದ ನಂತರ ಭಾರತೀಯ ಕ್ರಿಕೆಟ್‌ನ ಫಿಟ್‌ನೆಸ್ ಮಟ್ಟವು ಸಾಕಷ್ಟು ಏರಿದೆ. ಆದರೆ 25 ವರ್ಷದ ಭಾರತೀಯ ಆಟಗಾರನಿಗೆ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ವಿರಾಟ್ ತಂಡದಲ್ಲಿ ಯಾವಾಗ ಫಿಟ್ನೆಸ್ ಫ್ರೀಕ್ ಆಗಿ ಕಾಣಿಸಿಕೊಂಡರೋ ಅಂದಿನಿಂದ ಈ ಆಟಗಾರನನ್ನು ತಂಡದಿಂದ ಹೊರಗಿಡಲಾಯಿತು. ಆದರೆ ಈ ಆಟಗಾರ ಈ ಹಿಂದೆ ದೇಶೀಯ ಕ್ರಿಕೆಟ್‌ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದ ಬಾಗಿಲು ತಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 1000 ಕೋಟಿ ದಾಟಿತು ವಿರಾಟ್ ಆಸ್ತಿ ಮೌಲ್ಯ… ‘ಕಿಂಗ್ ಕೊಹ್ಲಿ’ Instagram ಪೋಸ್ಟ್ ಒಂದಕ್ಕೆ ಎಷ್ಟು ಬೆಲೆ ಗೊತ್ತಾ?


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ (ಡಬ್ಲ್ಯುಟಿಸಿ ಫೈನಲ್) ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲಿನ ನಂತರ ಆಟಗಾರರು ಸುಮಾರು ಒಂದು ತಿಂಗಳ ವಿರಾಮದಲ್ಲಿದ್ದಾರೆ. ಈ ವಿರಾಮದ ನಂತರ ಜುಲೈ 12 ರಿಂದ ಭಾರತದ ವೆಸ್ಟ್ ಇಂಡೀಸ್ ಪ್ರವಾಸ ಆರಂಭವಾಗಲಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್ ಜುಲೈ 12-16 ರವರೆಗೆ ಮೊದಲ ಟೆಸ್ಟ್ ಅನ್ನು ಆಯೋಜಿಸುತ್ತದೆ. ಎರಡನೇ ಟೆಸ್ಟ್ ಜುಲೈ 20-24 ರವರೆಗೆ ಟ್ರಿನಿಡಾಡ್‌ ನ ಕ್ವೀನ್ಸ್ ಪಾರ್ಕ್ ಓವಲ್‌ ನಲ್ಲಿ ನಡೆಯಲಿದೆ. ಈ ಎರಡು ಟೆಸ್ಟ್ ಪಂದ್ಯಗಳಿಗೆ ಕೆಲವು ಯುವ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಬಹುದು. 25 ವರ್ಷಗಳ ಆಟಗಾರ ಈ ರೇಸ್‌ ನಲ್ಲಿ ಭಾಗಿಯಾಗುವ ಸಾಧ್ಯತೆ ಕೂಡ ಹೆಚ್ಚಿದೆ.


ಮುಂಬೈ ಪರ ದೇಶೀಯ ಕ್ರಿಕೆಟ್ ಆಡುತ್ತಿರುವ ಉತ್ತರ ಪ್ರದೇಶ ಮೂಲದ ಸರ್ಫರಾಜ್ ಖಾನ್, ಟೀಂ ಇಂಡಿಯಾದಲ್ಲಿ ಚೊಚ್ಚಲ ಪ್ರವೇಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಸರ್ಫರಾಜ್ ಖಾನ್ ಅವರನ್ನು ವಿರಾಟ್ ಕೊಹ್ಲಿ 5 ವರ್ಷಗಳ ಹಿಂದೆ ಹೊರಹಾಕಿದ್ದರು. ಇದರ ಹಿಂದಿರುವ ಪ್ರಮುಖ ಕಾರಣವೆಂದರೆ ಅವರ ಬೊಜ್ಜು. ಆದರೆ ಇದೀಗ, ಸರ್ಫರಾಜ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ತುಂಬಾ ಕಷ್ಟಪಡುತ್ತಿದ್ದಾರೆ.


ಇದನ್ನೂ ಓದಿ: “Team India ಕ್ಯಾಪ್ಟನ್ ಸ್ಥಾನಕ್ಕೆ ಅರ್ಹತೆ ಇತ್ತು.. ಆದ್ರೆ ಓವರ್ ಥಿಂಕರ್ ಪಟ್ಟ ಕಟ್ಟಿದರು!”


ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ:


ಸರ್ಫರಾಜ್ ಖಾನ್ ಇಲ್ಲಿಯವರೆಗೆ 37 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 79.65 ಸರಾಸರಿಯಲ್ಲಿ 3505 ರನ್ ಗಳಿಸಿದ್ದಾರೆ. 26 ಲಿಸ್ಟ್ ಎ ಪಂದ್ಯಗಳಲ್ಲಿ ಅವರು 39.08 ಸರಾಸರಿಯಲ್ಲಿ 469 ರನ್ ಗಳಿಸಿದ್ದಾರೆ. ಸರ್ಫರಾಜ್ ಖಾನ್ ಕೂಡ 88 ಟಿ20 ಪಂದ್ಯಗಳನ್ನಾಡಿದ್ದು, 1124 ರನ್ ಗಳಿಸಿದ್ದಾರೆ. ಸರ್ಫರಾಜ್ ಖಾನ್ ಐಪಿಎಲ್ 2023 ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ