ಏಳನೇ ವಯಸ್ಸಿನಲ್ಲೇ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಬೆಂಗಳೂರು ಬಾಲೆ
ಬೆಂಗಳೂರು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಭೂಪಾಲ್ ನಲ್ಲಿ ಇತ್ತೀಚಿಗೆ ನಡೆದ ಸಿಬಿಎಸ್ಇ ವಿಭಾಗದ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬೆಂಗಳೂರಿನ ಏಳು ವರ್ಷದ ಬಾಲಕಿ ಕುಸುಮಾ.ಎಸ್.ಗೌಡ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾಳೆ.
ಭೂಪಾಲ್ ನಲ್ಲಿ ಇತ್ತೀಚಿಗೆ 6 ರಿಂದ 8 ನೇ ವಯೋಮಾನದವರ ನಡುವೆ ಏರ್ಪಡಿಸಲಾಗಿದ್ದ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವ ಕುಸುಮಾ.ಎಸ್.ಗೌಡ ಬೆಂಗಳೂರಿನ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ.
ಸ್ಕೇಟಿಂಗ್ ಎಂಬ ಕಾಲ್ಚಳಕದ ಕ್ರೀಡೆ ಅಷ್ಟು ಸುಲಭವಾಗಿ ದಕ್ಕುವಂತದಲ್ಲ. ಆದರೂ ಇಂತಹ ಮಾಂತ್ರಿಕತೆಯ ಆಟದಲ್ಲಿ ಪಳಗಿದ ಬಾಲೆಯ ರಾಷ್ಟ್ರಮಟ್ಟದ ಸಾಧನೆ ರಾಜ್ಯಕ್ಕೆ ಹೆಮ್ಮೆಯ ವಿಷಯ. ಸಣ್ಣ ವಯಸ್ಸಿನಲ್ಲೇ ಇಂತಹ ಸಾಧನೆ ಮಾಡಲು ಕಠಿಣ ಪರಿಶ್ರಮ, ಸತತ ಅಭ್ಯಾಸ ಜೊತೆಗೆ ಪೋಷಕರ ಪ್ರೋತ್ಸಾಹ ಕಾರಣ. ಕುಸುಮಾಳ ಉಜ್ವಲ ಭವಿಷ್ಯಕ್ಕೆ ನಾವು ಶುಭಹಾರೈಸೋಣ. ಆಲ್ ದ ಬೆಸ್ಟ್ ಕುಸುಮಾ.ಎಸ್.ಗೌಡ.