India vs New Zealand 1st ODI : ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ODI ಆಡುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಪ್ಲೇಯಿಂಗ್ 11 ನಲ್ಲಿ ಸ್ಟಾರ್ ಆಟಗಾರನಿಗೆ ಅವಕಾಶ ನೀಡಿಲ್ಲ. ಈ ಆಟಗಾರ ಉತ್ತಮ ಫಾರ್ಮ್‌ನಲ್ಲಿದ್ದು, ಅವಕಾಶ ಸಿಗದಿರುವುದು ತುಂಬಾ ಆಘಾತಕಾರಿ ವಿಷಯವಾಗಿದೆ. ಹಾಗಿದ್ರೆ, ಈ ಆಟಗಾರ ಯಾರು? ಅವಕಾಶ ಯಾಕೆ ಸಿಗುತ್ತಿಲ್ಲ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..


COMMERCIAL BREAK
SCROLL TO CONTINUE READING

ಈ ಆಟಗಾರನಿಗೆ ನೀಡಿಲ್ಲ ಅವಕಾಶ


ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ XI ನಲ್ಲಿ ಶಹಬಾಜ್ ಅಹ್ಮದ್‌ಗೆ ಸ್ಥಾನ ನೀಡಿಲ್ಲ. ಶಹಬಾಜ್ ಮಾಂತ್ರಿಕ ಬೌಲಿಂಗ್‌ನಲ್ಲಿ ಪರಿಣತರಾಗಿದ್ದಾರೆ. ಇದಲ್ಲದೇ ಕೆಳ ಕ್ರಮಾಂಕದಲ್ಲಿ ಇಳಿದು ಬಿರುಸಿನ ಬ್ಯಾಟ್ ಬಿಸುವುದರಲ್ಲಿ ನಿಪುಣನಾಗಿದ್ದಾರೆ.


ಇದನ್ನೂ ಓದಿ : IND vs NZ: 4 ವರ್ಷಗಳ ಬಳಿಕ ನಡೆಯಲಿದೆ ಏಕದಿನ ಪಂದ್ಯ: ಈ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ದಾಖಲೆಗಳೆಷ್ಟು ಗೊತ್ತಾ?


ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ


ಐಪಿಎಲ್ 2022 ರಲ್ಲಿ ಶಹಬಾಜ್ ಅಹ್ಮದ್ ಅದ್ಭುತ ಪ್ರದರ್ಶನ ನೀಡಿದರು. ಅವರು ಐಪಿಎಲ್ 2022 ರಲ್ಲಿ RCB ಗಾಗಿ 16 ಪಂದ್ಯಗಳನ್ನು ಆಡಿದರು, ಅದರಲ್ಲಿ ಅವರು ನಾಲ್ಕು ವಿಕೆಟ್ಗಳನ್ನು ಪಡೆದರು. ಅದೇ ಸಮಯದಲ್ಲಿ, ಅವರು ಈ 16 ಪಂದ್ಯಗಳಲ್ಲಿ 219 ರನ್ ಗಳಿಸಿದರು. ಅಹ್ಮದ್ ಈ ರನ್‌ಗಳನ್ನು 27.38 ಸರಾಸರಿಯಲ್ಲಿ ಗಳಿಸಿದರು ಮತ್ತು ಅವರ ಸ್ಟ್ರೈಕ್ ರೇಟ್ 120.99 ಆಗಿತ್ತು.


ಅಹ್ಮದ್ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ್ದಾರೆ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಆಟದ ಮೂಲಕ ಎಲ್ಲರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೂ ಪ್ಲೇಯಿಂಗ್ XI ನಲ್ಲಿ ಅವಕಾಶ ಸಿಕ್ಕಿಲ್ಲ.


ಮೊದಲ ಏಕದಿನ ಪಂದ್ಯಕ್ಕೆ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.


ಇದನ್ನೂ ಓದಿ : IND vs NZ 2023: ಮೊದಲ ಏಕದಿನ ಪಂದ್ಯದಲ್ಲಿ ಈ ಮೂವರಿಗಿದೆ ಅತೀ ಹೆಚ್ಚು ರನ್ ಗಳಿಸುವ ಅವಕಾಶ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.