IND vs NZ: 4 ವರ್ಷಗಳ ಬಳಿಕ ನಡೆಯಲಿದೆ ಏಕದಿನ ಪಂದ್ಯ: ಈ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ದಾಖಲೆಗಳೆಷ್ಟು ಗೊತ್ತಾ?

Rajiv Gandhi Stadium: ಭಾರತವು ಆತಿಥೇಯ ರಾಷ್ಟ್ರವಾಗಿರುವ ಕಾರಣ ಇಲ್ಲಿಯವರೆಗೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಿದ ಎಲ್ಲಾ ಆರು ODIಗಳ ಭಾಗವಾಗಿದೆ. ನ್ಯೂಜಿಲೆಂಡ್ ಇಲ್ಲಿ ಕೇವಲ ಒಂದೆರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಇಂದು ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಆಡಲಿದೆ.

Written by - Bhavishya Shetty | Last Updated : Jan 18, 2023, 01:16 PM IST
    • ನಾಲ್ಕು ವರ್ಷಗಳ ಬಳಿಕ ಹೈದರಾಬಾದ್‌ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಏಕದಿನ ಪಂದ್ಯ ನಡೆಯುತ್ತಿದೆ
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಏಕದಿನ ಪಂದ್ಯವು ಇಲ್ಲಿ ನಡೆದಿತ್ತು
    • ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ಮಧ್ಯಾಹ್ನ 1.30 ರಿಂದ ಪ್ರಾರಂಭವಾಗಲಿದೆ
IND vs NZ: 4 ವರ್ಷಗಳ ಬಳಿಕ ನಡೆಯಲಿದೆ ಏಕದಿನ ಪಂದ್ಯ: ಈ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ದಾಖಲೆಗಳೆಷ್ಟು ಗೊತ್ತಾ? title=
Rajiv Gandhi Stadium

IND vs NZ: ಇಂದಿನಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ಮಧ್ಯಾಹ್ನ 1.30 ರಿಂದ ಪ್ರಾರಂಭವಾಗಲಿದೆ. ಸುಮಾರು ನಾಲ್ಕು ವರ್ಷಗಳ ಬಳಿಕ ಹೈದರಾಬಾದ್‌ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಏಕದಿನ ಪಂದ್ಯ ನಡೆಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಏಕದಿನ ಪಂದ್ಯವು ಇಲ್ಲಿ ನಡೆದಿತ್ತು. ಒಂದೆರಡು T20I ಗಳನ್ನು ಆಯೋಜಿಸಿದ್ದರೂ ಸಹ, ಹಗಲು-ರಾತ್ರಿ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.

ಇದನ್ನೂ ಓದಿ: Saina Nehwal: 'ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ'.. ಆಘಾತಕಾರಿ ಹೇಳಿಕೆ ನೀಡಿದ ಸೈನಾ ನೆಹ್ವಾಲ್

ಭಾರತವು ಆತಿಥೇಯ ರಾಷ್ಟ್ರವಾಗಿರುವ ಕಾರಣ ಇಲ್ಲಿಯವರೆಗೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಿದ ಎಲ್ಲಾ ಆರು ODIಗಳ ಭಾಗವಾಗಿದೆ. ನ್ಯೂಜಿಲೆಂಡ್ ಇಲ್ಲಿ ಕೇವಲ ಒಂದೆರಡು ಟೆಸ್ಟ್ ಪಂದ್ಯಗಳನ್ನು ಆಡಿದೆ. ಇಂದು ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಆಡಲಿದೆ.

ರಾಜೀವ್ ಗಾಂಧಿ ಸ್ಟೇಡಿಯಂ ಹೈದರಾಬಾದ್ ನಲ್ಲಿ ODI ದಾಖಲೆಗಳು:

ಅತಿ ಹೆಚ್ಚು ರನ್ ಕಲೆ ಹಾಕಿದ ಭಾರತೀಯರು:

ಯುವರಾಜ್ ಸಿಂಗ್ (233), ಸಚಿನ್ ತೆಂಡೂಲ್ಕರ್ (220), ಎಂಎಸ್ ಧೋನಿ (202), ಸುರೇಶ್ ರೈನಾ (138) ಮತ್ತು ವಿರಾಟ್ ಕೊಹ್ಲಿ (134) ಈ ಮೈದಾನದಲ್ಲಿ ಅತಿ ಹೆಚ್ಚು ODI ರನ್ ಗಳಿಸಿದವರು. ಕೊಹ್ಲಿಯ ಹೊರತಾಗಿ, ಸಕ್ರಿಯ ಕ್ರಿಕೆಟಿಗರಲ್ಲಿ ಇಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದವರು ಶಿಖರ್ ಧವನ್ (91), ಕೇದಾರ್ ಜಾಧವ್ (81), ಉಸ್ಮಾನ್ ಖವಾಜಾ (50) ಮತ್ತು ರವೀಂದ್ರ ಜಡೇಜಾ (50)

ಹೈದರಾಬಾದ್ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ಉಮೇಶ್ ಯಾದವ್ (6), ರವಿಚಂದ್ರನ್ ಅಶ್ವಿನ್ (4), ಬ್ರೆಟ್ ಲೀ (3), ಅಕ್ಷರ್ ಪಟೇಲ್ (3), ಬ್ರಾಡ್ ಹಾಗ್ (3), ಶೇನ್ ವ್ಯಾಟ್ಸನ್ (3), ಕ್ಲಿಂಟ್ ಮೆಕೆ (3), ಪ್ರವೀಣ್ ಕುಮಾರ್ (3) ಮತ್ತು ಜಡೇಜಾ (3).

ಹೈದರಾಬಾದ್ ODIಗಳಲ್ಲಿ ಅತ್ಯಧಿಕ ಇನ್ನಿಂಗ್ಸ್ ಮೊತ್ತ

ಸ್ಕೋರ್ ಓವರ್ಸ್  ತಂಡ   ಎದುರಾಳಿ   ವರ್ಷ
350/4  50 ಆಸ್ಟ್ರೇಲಿಯಾ ಭಾರತ 2009
347 49.4 ಭಾರತ ಆಸ್ಟ್ರೇಲಿಯಾ 2009
300/7  50 ಭಾರತ ಇಂಗ್ಲೆಂಡ್ 2011
290/7  50 ಆಸ್ಟ್ರೇಲಿಯಾ ಭಾರತ 2005
252/5 48.5 ದಕ್ಷಿಣ ಆಫ್ರಿಕಾ ಭಾರತ 2007

ಇದನ್ನೂ ಓದಿ: IND vs NZ 2023: ಮೊದಲ ಏಕದಿನ ಪಂದ್ಯದಲ್ಲಿ ಈ ಮೂವರಿಗಿದೆ ಅತೀ ಹೆಚ್ಚು ರನ್ ಗಳಿಸುವ ಅವಕಾಶ!

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 12 ODI ಇನ್ನಿಂಗ್ಸ್‌ಗಳಲ್ಲಿ 300 ಕ್ಕೂ ಹೆಚ್ಚು ಇನ್ನಿಂಗ್ಸ್ ಮೊತ್ತವನ್ನು ಮೂರು ಬಾರಿ ನೋಂದಾಯಿಸಲಾಗಿದೆ. ಈ ಕ್ರೀಡಾಂಗಣದಲ್ಲಿ ಮೂರು ಏಕದಿನ ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿದ್ದರೆ, ಉಳಿದ ಮೂರರಲ್ಲಿ ಚೇಸಿಂಗ್ ತಂಡಗಳು ಗೆದ್ದಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News