ಮೊದಲ ಓವರ್’ನಲ್ಲೇ 4 ವಿಕೆಟ್ ಉಡೀಸ್! ಕ್ರಿಕೆಟ್ ದಿಗ್ಗಜನ ಅಳಿಯನ ಸ್ಫೋಟಕ ಬೌಲಿಂಗ್’ಗೆ ವಿಶ್ವದಾಖಲೆ ಸೃಷ್ಟಿ
Shaheen Shah Afridi world Record: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ T20 ಬ್ಲಾಸ್ಟ್ ನಲ್ಲಿ ಶಾಹೀನ್ ಶಾ ಆಫ್ರಿದಿ ಅವರ ಬೌಲಿಂಗ್ ಕಮಾಲ್’ಗೆ ವಿಶ್ವದಾಖಲೆಯೇ ನಿರ್ಮಾಣಗೊಂಡಿದೆ. ಅದರ ಒಂದು ನೋಟ ಇಲ್ಲಿದೆ.
Shaheen Shah Afridi world Record: ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ನಲ್ಲಿ ತಮ್ಮ ವೇಗದ ಬೌಲಿಂಗ್ ನಿಂದ ವಿಧ್ವಂಸಕ ಪ್ರದರ್ಶನ ನೀಡುತ್ತಿದ್ದಾರೆ. 23 ವರ್ಷದ ಯುವ ವೇಗದ ಬೌಲರ್ ಈಗ ಸಂಪೂರ್ಣವಾಗಿ ತನ್ನ ಫಾರ್ಮ್ ಗೆ ಬಂದಿದ್ದು, ಎದುರಾಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ.
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ T20 ಬ್ಲಾಸ್ಟ್ ನಲ್ಲಿ ಶಾಹೀನ್ ಶಾ ಆಫ್ರಿದಿ ಅವರ ಬೌಲಿಂಗ್ ಕಮಾಲ್’ಗೆ ವಿಶ್ವದಾಖಲೆಯೇ ನಿರ್ಮಾಣಗೊಂಡಿದೆ. ಅದರ ಒಂದು ನೋಟ ಇಲ್ಲಿದೆ.
ಟೀಂ ಇಂಡಿಯಾ ನಾಯಕನ ನಿವೃತ್ತಿ! ಕ್ಯಾಪ್ಟನ್ ಮಾತಿನಿಂದ ಕ್ರೀಡಾ ಜಗತ್ತಿನಲ್ಲಿ ತಲ್ಲಣ…
ನಾಟಿಂಗ್ ಹ್ಯಾಮ್‌ಶೈರ್ ಗಾಗಿ ಆಡುತ್ತಿರುವ ಆಫ್ರಿದಿ ಶುಕ್ರವಾರ ವಾರ್ವಿಕ್ ಶೈರ್ ವಿರುದ್ಧ ಮೈದಾನಕ್ಕಿಳಿದರು. ಈ ಸಂದರ್ಭದಲ್ಲಿ ಮೊದಲ ಓವರ್’ನಲ್ಲಿಯೇ 4 ವಿಕೆಟ್ ಕಬಳಿಸಿ ಸುದ್ದಿಯಾಗಿದ್ದಾರೆ.
ನಾಟಿಂಗ್ ಹ್ಯಾಮ್‌ಶೈರ್ ಪರ ಅಂಗಣಕ್ಕೆ ಇಳಿದ ಆಫ್ರಿದಿ ಇನ್ನಿಂಗ್ಸ್ ನ ಮೊದಲ ಓವರ್ ನ ಮೊದಲ ಎಸೆತದಲ್ಲಿ ವೈಡ್ ಬಾಲ್ ಎಸೆದರು. ಅದನ್ನು ವಿಕೆಟ್ ಕೀಪರ್ ಗೂ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಇಲ್ಲಿ ವಾರ್ವಿಕ್ ಶೈರ್ 5 ರನ್ ಗಳಿಸಿತು. ನಂತರ ಅಫ್ರಿದಿ ಮುಂದಿನ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು. ಓವರ್ ನ ಮುಂದಿನ 2 ಎಸೆತಗಳಲ್ಲಿ ಎರಡು ಸಿಂಗಲ್ ಪಡೆಯಿತು. ಇದರ ನಂತರ, ತನ್ನ ಓವರ್ ನ ಕೊನೆಯ 2 ಎಸೆತಗಳಲ್ಲಿ ಈ ಪಾಕಿಸ್ತಾನಿ ಬೌಲರ್ ವಿಕೆಟ್ ಗಳನ್ನು ಪಡೆದರು. ಹೀಗೆ ಎದುರಾಳಿ ತಂಡದ ಒಟ್ಟು 4 ವಿಕೆಟ್ ಗಳನ್ನು ಪಡೆದರು.
ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ವಾರ್ವಿಕ್‌ಶೈರ್ ತಂಡವು 169 ರನ್ ಗಳ ಗುರಿಯನ್ನು ಬೆನ್ನಟ್ಟಿತು. ಇನಿಂಗ್ಸ್ ನ ಮೊದಲ ಓವರ್‌ನಲ್ಲಿ ಅಫ್ರಿದಿ ಅವರು, ನಾಯಕ ಅಲೆಕ್ಸ್ (0), ಕ್ರಿಸ್ ಬೆಂಜಮಿನ್ (0), ಡೇನ್ ಮೂಸ್ಲಿ (1) ಮತ್ತು ಎಡ್ವರ್ಡ್ ಬರ್ನಾರ್ಡ್ (0) ಅವರನ್ನು ಔಟ್ ಮಾಡಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ.
ಮೊದಲ ಓವರ್ ನ ನಂತರ, ವಾರ್ವಿಕ್ ಶೈರ್ ನ ಸ್ಕೋರ್ 4 ವಿಕೆಟ್ ಗೆ 7 ರನ್ ಆಗಿತ್ತು, ಇದರಲ್ಲಿ 5 ರನ್ ಗಳು ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಅಫ್ರಿದಿ ಅವರ ವೈಡ್ ಬಾಲ್ ಅನ್ನು ವಿಕೆಟ್ ಕೀಪರ್ ಕ್ಯಾಚ್ ಮಾಡಲು ಸಾಧ್ಯವಾಗದೆ ಬೌಂಡರಿ ದಾಟಿದ ಹಿನ್ನೆಲೆಯಲ್ಲಿ ಸಿಕ್ಕಿದ್ದು.
ಆದರೆ, ಈ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ನಾಟಿಂಗ್ಹ್ಯಾಮ್ಶೈರ್ ಗೆಲ್ಲಲು ಸಾಧ್ಯವಾಗಲಿಲ್ಲ. ರಾಬರ್ಟ್ ಯೇಟ್ಸ್ ವಾರ್ವಿಕ್ ಶೈರ್ ಪರ 65 ರನ್ ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಯೇಟ್ಸ್ ಹೊರತಾಗಿ ಗ್ಲೆನ್ ಮ್ಯಾಕ್ಸ್‌ವೆಲ್ (19), ಜೇಕಬ್ ಬೆಥೆಲ್ (27) ಮತ್ತು ಜೇಕ್ ಲಿಂಟೊಟ್ (27*) ವಾರ್ವಿಕ್‌ಶೈರ್ ತಂಡಕ್ಕೆ ಗೆಲುವು ನೀಡುವಲ್ಲಿ ಪಾತ್ರ ವಹಿಸಿದರು.
ನಾಟಿಂಗ್ ಹ್ಯಾಮ್‌ಶೈರ್ ನಲ್ಲಿ ಅಫ್ರಿದಿ ಹೊರತುಪಡಿಸಿ, ಜಾಕ್ ಬಾಲ್ 4 ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿದ್ದರು. ಆದರೆ ಇತರ ಯಾವುದೇ ಬೌಲರ್ ಗಳು ತಂಡಕ್ಕೆ ವಿಕೆಟ್ ತಂದುಕೊಡುವಲ್ಲಿ ವಿಫಲವಾದರು. ಮೊದಲ ಓವರ್ ನಲ್ಲಿ 4 ವಿಕೆಟ್ ಕಬಳಿಸಿದ ಅಫ್ರಿದಿಗೆ ಮುಂದಿನ 3 ಓವರ್ ಗಳಲ್ಲಿ ಬೇರೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: Team Indiaದ ಸ್ಟಾರ್ ಆಟಗಾರನ ವೃತ್ತಿಜೀವನ ಹಾಳಾಗಲು ಕಾರಣ ಹಾರ್ದಿಕ್ ಪಾಂಡ್ಯ!
ಶಾಹೀನ್ ಶಾ ಆಫ್ರಿದಿ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಮಗಳು ಅನ್ಶಾ ಅಫ್ರಿದಿಯವರನ್ನು ಇತ್ತೀಚಿಗೆ ವಿವಾಹವಾಗಿದ್ದಾರೆ. ಇನ್ನು ಮೊದಲ ಓವರ್ ಗೆ ನಾಲ್ಕು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಶಾಹೀನ್ ಶಾ ಆಫ್ರಿದಿ ಪಾತ್ರರಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.