ನವದೆಹಲಿ : ವಿಶ್ವದ ಶ್ರೇಷ್ಠ ಸ್ಪಿನ್ನರ್ ಶೇನ್ ವಾರ್ನ್ ತಮ್ಮ 52ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ (Shane Warne death). ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಥಾಯ್ಲೆಂಡ್‌ನಲ್ಲಿ ಮೃತಪಟ್ಟಿದ್ದಾರೆ. ಶೇನ್ ವಾರ್ನ್ ಸಾವಿನ ಸಂದರ್ಭದಲ್ಲಿ ಅವರ ಜೊತೆ ಮೂವರು ಸ್ನೇಹಿತರು ಕೂಡ ಇದ್ದರು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. 


COMMERCIAL BREAK
SCROLL TO CONTINUE READING

 ಜೀವ ಉಳಿಸಲು ಪ್ರಯತ್ನಿಸಿದ ಸ್ನೇಹಿತರು : 
ಪೊಲೀಸರ ಪ್ರಕಾರ, ನಾಲ್ವರು ಸ್ನೇಹಿತರ ಅದ್ಭುತ ಪ್ರಯತ್ನದ ಹೊರತಾಗಿಯೂ ಶೇನ್ ವಾರ್ನ್‌ನ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ (Shane Warne death). ವಾರ್ನ್‌ನ ಸ್ನೇಹಿತರು 20 ನಿಮಿಷಗಳ ಕಾಲ ಅವರ ಪ್ರಾಣವನ್ನು ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ.  ಇತಿಹಾಸದಲ್ಲಿ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂದು ಪರಿಗಣಿಸಲಾದ ಶೇನ್ ವಾರ್ನ್ ಶುಕ್ರವಾರ ಥೈಲ್ಯಾಂಡ್‌ನ ಕೊಹ್ ಸಮುಯಿ ರೆಸಾರ್ಟ್‌ನಲ್ಲಿರುವ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ (Shane Warne Friends). ಶೇನ್ ವಾರ್ನ್ ಸ್ನೇಹಿತರು ಅವರನ್ನು ಊಟಕ್ಕೆ  ಕರೆದೊಯ್ಯಲು ಬಂದಾಗ ವಾರ್ನ್ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಈ ವೇಳೆ ಅವರ ಸ್ನೇಹಿತರು ಮೊದಲ 20 ನಿಮಿಷಗಳ ಕಾಲ ಸಿಪಿಆರ್  ನೀಡಿ ಶೇನ್ ವಾರ್ನ್ ಅವರ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಶೇನ್ ವಾರ್ನ್ ಸ್ನೇಹಿತರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. CPR ಅಂದರೆ Cardiopulmonary resuscitation . ಇದು ಒಂದು ರೀತಿಯ ವೈದ್ಯಕೀಯ ಚಿಕಿತ್ಸೆಯಾಗಿದ್ದು, ರೋಗಿಯ ಜೀವವನ್ನು ಉಳಿಸಲು ತುರ್ತು ಪರಿಸ್ಥಿತಿಯಲ್ಲಿ ನೀಡಲಾಗುತ್ತದೆ. 


ಇದನ್ನೂ ಓದಿ : Ind Vs SL : ಟೀಂ ಇಂಡಿಯಾಗೆ ಭಾರಿ ತಲೆನೋವಾಗಿ ಪರಿಣಮಿಸಿದ ಈ ಆಟಗಾರ : ರೋಹಿತ್ ಮಾಡ್ತಾರಾ ಕಿಕ್ ಔಟ್?


ಟೆಸ್ಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ : 
ಶೇನ್ ವಾರ್ನ್ ತಮ್ಮ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್‌ಗಳನ್ನು ಪಡೆದರೆ, 194 ODIಗಳಲ್ಲಿ 293 ವಿಕೆಟ್‌ಗಳನ್ನು ಕಬಳಿಸಿದ್ದರು.  ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್‌ಗಳನ್ನು ಪಡೆಯುವ ವಿಷಯದಲ್ಲಿ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ, ಎರಡನೇ ಸ್ಥಾನದಲ್ಲಿರುವ ಆಟಗಾರ ವಾರ್ನ್ (Shane Warne Career).  


ಶತಕವಿಲ್ಲದೆ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ :
ವಾರ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ 3154 ರನ್ ಗಳಿಸಿದ್ದರು.  ಶತಕ ಬಾರಿಸದೆ ಇಷ್ಟು ರಂ ಗಳಿಸುವ ಮೂಲಕ ಮಾಡಿರುವ ವಿಶ್ವದಾಖಲೆಯಾಗಿದೆ. ವಾರ್ನ್ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಅರ್ಧಶತಕಗಳನ್ನು ಗಳಿಸಿದ್ದರು. ಅವರು ಏಕದಿನದಲ್ಲಿ 1018 ರನ್ ಗಳಿಸಿದ್ದಾರೆ. 


ಇದನ್ನೂ ಓದಿ : ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟ್ ಜಗತ್ತು ..


ವಿಶ್ವಕಪ್ ಗೆದ್ದುಕೊಂಡ ಆಸ್ಟ್ರೇಲಿಯಾ : 
ಶೇನ್ ವಾರ್ನ್ ಅವರ ಬೌಲಿಂಗ್‌ನ ವರ್ಚಸ್ಸಿನಿಂದಲೇ ಆಸ್ಟ್ರೇಲಿಯ 1999 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ (ICC) ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. 12 ವರ್ಷಗಳ ನಂತರ ತಮ್ಮ ಹೆಸರಿನ ಮುಂದೆ ಮತ್ತೊಮ್ಮೆ ವಿಶ್ವ ಚಾಂಪಿಯನ್ ಎಂದು ಬರೆಯುವ ಸಾಧನೆ ಮಾಡಿತ್ತು.  ಆ ಪಂದ್ಯದಲ್ಲಿ  ವಾರ್ನ್ ಕೇವಲ 33 ರನ್ ನೀಡಿ 4 ವಿಕೆಟ್ ಗಳಿಸಿ ತಡದ ಗೆಲುವಿಗೆ ಕಾರಣರಾಗಿದ್ದರು.  ಈ ಪ್ರದರ್ಶನಕ್ಕಾಗಿ ವಾರ್ನ್‌ಗೆ ಮನ್ ಆಫ್ ದಿ ಮ್ಯಾಚ್ ಫೈನಲ್  ಪ್ರಶಸ್ತಿಯನ್ನು ನೀಡಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.