ನವದೆಹಲಿ: ಕೇಂದ್ರ ಸರ್ಕಾರವು ತನ್ನ ಲಾಕ್‌ಡೌನ್ 4.0 ಮಾರ್ಗಸೂಚಿಗಳಲ್ಲಿ ಅನುಮತಿ ಮೇರೆಗೆ ಪ್ರೆಕ್ಷಕರಿಲ್ಲದೆ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ.ಈ ಹಿನ್ನಲೆಯಲ್ಲಿ ನಿನ್ನೆ ಭಾರತದ ಆಟಗಾರ ಶಾರ್ದುಲ್ ಠಾಕೂರ್ ಮೈದಾನಕ್ಕೆ ಸ್ವಯಂ ಪ್ರೇರಿತರಾಗಿ ತರಬೇತಿಗೆ ಇಳಿದಿದ್ದರು.


COMMERCIAL BREAK
SCROLL TO CONTINUE READING

ಈ ಹಿನ್ನಲೆಯಲ್ಲಿ ಈಗ ಶಾರ್ದುಲ್ ಠಾಕೂರ್ ಅವರ ಈ ನಡೆಗೆ ಬಿಸಿಸಿಐ ಕಿಡಿ ಕಾರಿದೆ, ಶಾರ್ದುಲ್ ಠಾಕೂರ್ ಗುತ್ತಿಗೆ ಆಟಗಾರನಾಗಿರುವುದರಿಂದಾಗಿ ತರಬೇತಿಗಾಗಿ ಅವರು ಬೋರ್ಡ್ ನಿಂದ ಅನುಮತಿಯನ್ನು ಪಡೆಯಬೇಕು. ಈಗ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು “ಅವನಿಗೆ ಗುತ್ತಿಗೆ ಇರುವುದರಿಂದ ಅವನನ್ನು ಅನುಮತಿಸಲಾಗುವುದಿಲ್ಲ. ದುಃಖಕರ ಸಂಗತಿ ಎಂದರೆ ,ಅವನು ತನ್ನದೇ ಸ್ವಂತ ಇಚ್ಚೆಯ ಮೇಲೆ ಹೋಗಿದ್ದಾನೆ, ಹಾಗೆ ಮಾಡಬಾರದು,ಇದು ಸೂಕ್ತ ನಡೆಯಲ್ಲ ಎಂದು ಅಧಿಕಾರಿ ಹೇಳಿದ್ದಾರೆ .


ವಿಶೇಷವೆಂದರೆ, ತಂಡದ ಭಾರತೀಯ ನಾಯಕ ವಿರಾಟ್ ಕೊಹ್ಲಿ ಮತ್ತು ಸೀಮಿತ ಓವರ್‌ಗಳ ಡೆಪ್ಯೂಟಿ ರೋಹಿತ್ ಶರ್ಮಾ ಇಬ್ಬರೂ ಶ್ರೇಯಾಸ್ ಅಯ್ಯರ್ ಅವರೊಂದಿಗೆ ಮುಂಬೈನಲ್ಲಿದ್ದಾರೆ. ಆದರೆ ಎಲ್ಲಾ ಆಟಗಾರರು ತಾವು ಮನೆಯೊಳಗೇ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ ಮತ್ತು ಸರ್ಕಾರವು ಭಾನುವಾರದ ಒಟ್ಟಾರೆ ನಿರ್ಬಂಧವನ್ನು ಸಡಿಲಿಸಿದ ನಂತರವೂ ಯಾವುದೇ ಕ್ರೀಡಾ ಸಂಕೀರ್ಣಕ್ಕೆ ತೆರಳಿಲ್ಲ. 


ಶಾರ್ದುಲ್ ಬಿಸಿಸಿಐನ ಗುತ್ತಿಗೆ ಪಡೆದ ಕ್ರಿಕೆಟಿಗ ಮತ್ತು ಪ್ರಸ್ತುತ ಒಪ್ಪಂದದ ಪ್ರಕಾರ ಅವರದ್ದು ಗ್ರೇಡ್ ಸಿ ಯ ಭಾಗವಾಗಿದೆ. ಅದಕ್ಕಿಂತ ಮುಖ್ಯವಾಗಿ, ಅವರು ದೇಶದಲ್ಲಿ ಅತಿ ಹೆಚ್ಚು ಕರೋನವೈರಸ್ ಪ್ರಕರಣಗಳಿರುವ ರಾಜ್ಯದಲ್ಲಿದ್ದಾರೆ.