23 ಬೌಂಡರಿ, 8 ಸಿಕ್ಸರ್… ಟೆಸ್ಟ್’ನಲ್ಲಿ ದ್ವಿಶತಕ ಬಾರಿಸಿ ವಿಶ್ವದಾಖಲೆ ಸೃಷ್ಟಿಸಿದ ಶೆಫಾಲಿ! ವೀರೇಂದ್ರ ಸೆಹ್ವಾಗ್ ರೆಕಾರ್ಡ್ ಉಡೀಸ್
IND W vs SA W: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶೆಫಾಲಿ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ದ್ವಿಶತಕದಲ್ಲಿ 23 ಬೌಂಡರಿ ಮತ್ತು 8 ಸಿಕ್ಸರ್’ಗಳು ಸೇರಿವೆ. ಮಹಿಳಾ ಟೆಸ್ಟ್ ಕ್ರಿಕೆಟ್’ನಲ್ಲಿ ಅತಿವೇಗದ ದ್ವಿಶತಕ ಬಾರಿಸಿದ್ದಾರೆ.
IND W vs SA W: ಭಾರತ ಮಹಿಳಾ ತಂಡದ ಯುವ ಆಟಗಾರ್ತಿ ಶೆಫಾಲಿ ವರ್ಮಾ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್’ನಲ್ಲಿ ದ್ವಿಶತಕನ್ನು ಗಳಿಸಿದ್ದಲ್ಲದೆ, ಅವರ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಗಜಕೇಸರಿ ಯೋಗ… ಈ 5 ರಾಶಿಗೆ ಅತ್ಯಂತ ಶುಭಫಲ: ಅಷ್ಟ ದಿಕ್ಕುಗಳಿಂದಲೂ ಅಗಾಧ ಭಾಗ್ಯ ಕರುಣಿಸಲಿದ್ದಾನೆ ಚಂದ್ರದೇವ
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶೆಫಾಲಿ ವರ್ಮಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಈ ದ್ವಿಶತಕದಲ್ಲಿ 23 ಬೌಂಡರಿ ಮತ್ತು 8 ಸಿಕ್ಸರ್’ಗಳು ಸೇರಿವೆ. ಮಹಿಳಾ ಟೆಸ್ಟ್ ಕ್ರಿಕೆಟ್’ನಲ್ಲಿ ಅತಿವೇಗದ ದ್ವಿಶತಕ ಬಾರಿಸಿದ್ದಾರೆ. ಇದಕ್ಕೂ ಮುನ್ನ 256 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಈ ದಾಖಲೆ ನಿರ್ಮಿಸಿದ್ದರು. ಸದ್ಯ ವೀರೇಂದ್ರ ಸೆಹ್ವಾಗ್ ಅವರನ್ನು ಸರಿಗಟ್ಟಿದ ಶೆಫಾಲಿ, 16 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಸೆಹ್ವಾಗ್ ಕೇವಲ 194 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು.
ಶೆಫಾಲಿ ವರ್ಮಾ 20 ವರ್ಷ ಮತ್ತು 152 ದಿನಗಳ ವಯಸ್ಸಿನಲ್ಲಿ ದ್ವಿಶತಕ ಗಳಿಸಿದ್ದಾರೆ. ಶೆಫಾಲಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. 2002ರಲ್ಲಿ ಮಿಥಾಲಿ ರಾಜ್ ಕೇವಲ 19ನೇ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ್ದರು. ಶೆಫಾಲಿ ವರ್ಮಾ 197 ಎಸೆತಗಳಲ್ಲಿ 205 ರನ್’ಗಳ ಅಮೋಘ ಇನ್ನಿಂಗ್ಸ್ ಆಡಿದ್ದಾರೆ.
ಇದನ್ನೂ ಓದಿ: 9 ವರ್ಷಗಳಿಂದ ಯಾರ ಜೊತೆಯೂ ಸೆ** ಮಾಡಿಲ್ಲ, ಇರ್ಫಾನ್ ಪಠಾಣ್ ಜೊತೆಯೇ ಕೊನೆ ಎಂದ ದಕ್ಷಿಣದ ಖ್ಯಾತ ನಟಿ
ಶೆಫಾಲಿ ವರ್ಮಾ ಅವರ ದ್ವಿಶತಕ ಮತ್ತು ಸ್ಮೃತಿ ಮಂಧಾನ ಶತಕದಿಂದಾಗಿ ಟೀಂ ಇಂಡಿಯಾ 450 ರನ್ ಪೂರೈಸಿದೆ. ಸ್ಮೃತಿ ಮಂಧಾನ 149 ರನ್’ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ