‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!
Shikhar Dhawan-Mithali Raj Marriage Rumour: ಮಿಥಾಲಿ ರಾಜ್ ರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯರಲ್ಲಿ ಒಬ್ಬರು. ಇನ್ನು ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ. 2022ರ ವಿಶ್ವಕಪ್’ನಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ಕೊನೆಯ ಬಾರಿಗೆ ಭಾರತ ಪರ ಜೆರ್ಸಿ ಧರಿಸಿದ್ದರು.
Shikhar Dhawan-Mithali Raj Marriage Rumour: ಭಾರತದ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಮದುವೆ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಒಂದೊಮ್ಮೆ ಹಿರಿಯ ಆಟಗಾರ್ತಿ ಮತ್ತು ಟೀಂ ಇಂಡಿಯಾ ವನಿತಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಜೊತೆ ಧವನ್ ಮದುವೆಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು ಎಂದು ಹೇಳಿದ್ದಾರೆ
ಇದನ್ನೂ ಓದಿ: ಸೊಂಟದ ಸುತ್ತ ತುಂಬಿದ ಬೊಜ್ಜು ಕರಗಿಸಲು ಪಪ್ಪಾಯಿ ಎಲೆ ಸಾಕು! ಹೀಗೆ ಸೇವಿಸಿದರೆ 5 ದಿನದಲ್ಲಿ ಸ್ಲಿಮ್ ಆಗುವುದು ಗ್ಯಾರಂಟಿ
ಮಿಥಾಲಿ ರಾಜ್ ರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿಯರಲ್ಲಿ ಒಬ್ಬರು. ಇನ್ನು ಮಹಿಳಾ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ. 2022ರ ವಿಶ್ವಕಪ್’ನಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ಕೊನೆಯ ಬಾರಿಗೆ ಭಾರತ ಪರ ಜೆರ್ಸಿ ಧರಿಸಿದ್ದರು.
ಪ್ರಸ್ತುತ, ಮಿಥಾಲಿ ರಾಜ್ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (WPL) ಗುಜರಾತ್ ಜೈಂಟ್ಸ್’ನ ಮಾರ್ಗದರ್ಶಕರಾಗಿದ್ದಾರೆ. ಮತ್ತೊಂದೆಡೆ, ಧವನ್ ಇತ್ತೀಚೆಗೆ ಐಪಿಎಲ್ 2024 ರಲ್ಲಿ ಪಿಬಿಕೆಎಸ್ (ಪಂಜಾಬ್ ಕಿಂಗ್ಸ್) ಪರ ಆಡಿದ್ದರು. ಜಿಯೋ ಸಿನಿಮಾದ 'ಧವನ್ ಕರೆಂಗೆ' ಕಾರ್ಯಕ್ರಮದ ಸಂದರ್ಶನದಲ್ಲಿ ಧವನ್ ಮಿಥಾಲಿ ಜೊತೆಗಿನ ವದಂತಿಯ ಬಗ್ಗೆ ಬಹಿರಂಗಪಡಿಸಿದ್ದಾರೆ.
“ನಾನು ಮಿಥಾಲಿ ರಾಜ್ ಅವರನ್ನು ಮದುವೆಯಾಗುತ್ತೇನೆ ಎಂಬ ವದಂತಿ ಹಬ್ಬಿತ್ತು” ಎಂದು ಧವನ್ ಹೇಳಿದ್ದಾರೆ. ಇದನ್ನು ಕೇಳಿ, ಕಾರ್ಯಕ್ರಮಕ್ಕೆ ಮತ್ತೋರ್ವ ಅತಿಥಿಯಾಗಿ ಬಂದಿದ್ದ ಮಿಥಾಲಿ ಕೂಡ ಜೋರಾಗಿ ನಕ್ಕಿದ್ದಾರೆ.
ಇದನ್ನೂ ಓದಿ: ಆರೋಗ್ಯ ನಿಧಿ ನುಗ್ಗೆ ಸೊಪ್ಪು: ಇದರ ನೀರು ಕುಡಿದರೆ ಈ 5 ಕಾಯಿಲೆಗಳಿಂದ ಶಾಶ್ವತ ಪರಿಹಾರ ಸಿಗುತ್ತೆ
ಇನ್ನೊಂದೆಡೆ ಕಾರ್ಯಕ್ರಮದ ವೇಳೆ ಶಿಖರ್ ಧವನ್ ರಿಷಬ್ ಪಂತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಅಪಘಾತದ ನಂತರ ಅವರು ತಮ್ಮನ್ನು ತಾವು ನಿಭಾಯಿಸಿದ ರೀತಿಯನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಐಪಿಎಲ್‌ನಲ್ಲಿ ಕಂಬ್ಯಾಕ್ ಮಾಡಿ ಆಡಿದ ರೀತಿ ಮತ್ತು ಭಾರತ ತಂಡದಲ್ಲಿ ಸ್ಥಾನ ಪಡೆದ ರೀತಿ, ಇದು ನಂಬಲಾಗದ ಮತ್ತು ಅದ್ಭುತವಾಗಿದೆ. ನಾನು ಅವರ ಬಗ್ಗೆ ಹೆಮ್ಮೆಪಡುತ್ತೇನೆ" ಎಂದಿದ್ದಾರೆ,
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ