ಧೋನಿ ಗರಡಿಯಲ್ಲಿ ಪಳಗಿದ ಈ ಆಟಗಾರ 2 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ! ಟಿ20 ವಿಶ್ವಕಪ್’ನಲ್ಲಿ ಸ್ಥಾನ ಸಿಕ್ಕಿದ್ದೇ ರೋಚಕ
Shivam Dube: 2022 ರಲ್ಲಿ, ಶಿವಂ ದುಬೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದ್ದರು. ಆ ಸಂದರ್ಭದಲ್ಲಿ ಧೋನಿ ನಾಯಕರಾಗಿದ್ದರು. ಧೋನಿ ಗರಡಿಯಲ್ಲಿ ಪಳಗಿದ ಯಾವ ಆಟಗಾರನಾದರೂ ಆತ ಚಿನ್ನವಾಗಿ ಹೊರಹೊಮ್ಮುತ್ತಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿವಂ ದುಬೆ ವಿಚಾರದಲ್ಲೂ ಅದೇ ಆಯಿತು.
Shivam Dube: ಶಿವಂ ದುಬೆ, 2 ವರ್ಷಗಳ ಹಿಂದೆ ಸಾಮಾನ್ಯ ಆಟಗಾರ. ಆದರೆ ಈಗ ಟೀಂ ಇಂಡಿಯಾದ ಅಮೂಲ್ಯ ಆಟಗಾರ ಎಂದು ಕರೆದರೆ ತಪ್ಪಾಗದು. 2024 ರ ಟಿ 20 ವಿಶ್ವಕಪ್’ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಲ್ಲದೆ, ಐರ್ಲೆಂಡ್ ವಿರುದ್ಧ ಆಡುತ್ತಿದ್ದಾರೆ. ಆದರೆ ಐಪಿಎಲ್’ನಿಂದ ಟೀಂ ಇಂಡಿಯಾದ ಜೆರ್ಸಿವರೆಗೆ ದುಬೆ ಪಯಣ ಹೂವಿನ ಹಾದಿಯಂತು ಆಗಿರಲಿಲ್ಲ.
ಇದನ್ನೂ ಓದಿ: ಡಿವೋರ್ಸ್ ಬೆನ್ನಲ್ಲೇ ಶಮಿ ಜೊತೆ ಸಾನಿಯಾ ಮಿರ್ಜಾ ವಿವಾಹ! ಮೂಗುತಿ ಸುಂದರಿ ಜೊತೆ 2ನೇ ಮದುವೆಗೆ ರೆಡಿಯಾದ್ರಾ ಸ್ಟಾರ್ ಬೌಲರ್?
2022 ರಲ್ಲಿ, ಶಿವಂ ದುಬೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿದ್ದರು. ಆ ಸಂದರ್ಭದಲ್ಲಿ ಧೋನಿ ನಾಯಕರಾಗಿದ್ದರು. ಧೋನಿ ಗರಡಿಯಲ್ಲಿ ಪಳಗಿದ ಯಾವ ಆಟಗಾರನಾದರೂ ಆತ ಚಿನ್ನವಾಗಿ ಹೊರಹೊಮ್ಮುತ್ತಾನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಶಿವಂ ದುಬೆ ವಿಚಾರದಲ್ಲೂ ಅದೇ ಆಯಿತು.
ಧೋನಿ ದುಬೆಯನ್ನು ಪಳಗಿಸಿದಲ್ಲದೆ, ಅದೃಷ್ಟ ಬೆಳಗುವಂತೆ ಮಾಡಿದರು. ಐಪಿಎಲ್ 2023 ರಲ್ಲಿ ದುಬೆ ತಮ್ಮ ಸ್ಫೋಟಕ ಬ್ಯಾಟಿಂಗ್’ನಿಂದ ಪ್ರಭಾವಿತರಾದರು.
ಶಿವಂ ದುಬೆ 2019 ರಲ್ಲಿಯೇ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಆದರೆ ಕಳಪೆ ಫಾರ್ಮ್’ನಿಂದ ಅವರನ್ನು ಕೈಬಿಡಲಾಯಿತು. ಆ ಬಳಿಕ ಎಲ್ಲೂ ಅವರ ಹೆಸರು ಕಂಡುಬರಲಿಲ್ಲ. ಅದಾದ ಬಳಿಕ ಐಪಿಎಲ್’ನಲ್ಲಿ ದುಬೆಗೆ ಧೋನಿ ವಿಭಿನ್ನ ಪಾತ್ರವನ್ನು ನೀಡಿದರು. ನಂಬರ್ 4ರಲ್ಲಿ ಬ್ಯಾಟಿಂಗ್ ಮಾಡುವ ಜವಾಬ್ದಾರಿಯನ್ನು ವಹಿಸಿದರು. CSK ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ದುಬೆ ಪಾತ್ರದ ಬಗ್ಗೆ ಆರಂಭದಲ್ಲಿ ತಿಳಿದಿರಲಿಲ್ಲ. ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಜೊತೆ ಮಾತನಾಡುವಾಗ ಫ್ಲೆಮಿಂಗ್ ಇದನ್ನು ಬಹಿರಂಗಪಡಿಸಿದ್ದರು.
ಇದನ್ನೂ ಓದಿ: ಅಪಾಯದಲ್ಲಿರುವ ಕನ್ನಡಿಗರನ್ನು ಮರಳಿ ಗೂಡು ಸೇರಿಸಲಾಗುವುದು: ಧೈರ್ಯ ತುಂಬಿದ ಸಿಎಂ ಸಿದ್ದರಾಮಯ್ಯ
ಐಪಿಎಲ್ 2023ರಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದರು. ದುಬೆಗೆ ಟೀಮ್ ಇಂಡಿಯಾದಲ್ಲಿ ಮತ್ತೆ ಅವಕಾಶ ಸಿಕ್ಕಿತು. ಜನವರಿ 2024ರಲ್ಲಿ, ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಲ್ಲಿ ದುಬೆ ಸತತ ಎರಡು ಅರ್ಧಶತಕಗಳನ್ನು ಗಳಿಸಿದರು. ಐಪಿಎಲ್ 2024ರಲ್ಲಿ ಸ್ಫೋಟಕ ಶೈಲಿಯಲ್ಲಿ ಪ್ರಾರಂಭಿಸಿದರು. ಅವರ ಬ್ಯಾಟಿಂಗ್ ಎಷ್ಟು ಪ್ರಭಾವಶಾಲಿಯಾಗಿತ್ತು ಎಂದರೆ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಕೂಡ ಅಪಾಯ ಬರುತ್ತೆ ಎಂದು ಹೇಳಲಾಗಿತ್ತು. ಕೇವಲ ಎರಡು ವರ್ಷಗಳಲ್ಲಿ ಸಂಪೂರ್ಣ ಚಿತ್ರವನ್ನು ಬದಲಾಯಿಸಿದ ಶಿವಂ ದುಬೆ, ಜರ್ಸಿ ಸಂಖ್ಯೆ 25 ಅನ್ನು ಧರಿಸಿ, T20 ವಿಶ್ವಕಪ್’ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧದ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.