Shoiab Akhtar on India Lost: ವಿಶ್ವಕಪ್ ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಅದ್ಭುತ ಆಟ ಪ್ರದರ್ಶನ ಮಾಡಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಬಾರಿ ಭಾರತ ವಿಶ್ವ ಚಾಂಪಿಯನ್ ಆಗಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ನವೆಂಬರ್ 19 ಇಡೀ ದೇಶಕ್ಕೆ ಕೆಟ್ಟ ದಿನವಾಗಿ ಮಾರ್ಪಾಡಾಯಿತು. ಆಸ್ಟ್ರೇಲಿಯಾದ ಕೈಯಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸೋಲಿನ ನೋವಲ್ಲಿ ಮಾತನಾಡಲು ನಿರಾಕರಿಸಿದ ವಿರಾಟ್! ರವಿಶಾಸ್ತ್ರಿ ತಕ್ಷಣವೇ ಏನು ಮಾಡಿದ್ರು ನೋಡಿ


ಈ ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ನಿರಾಸೆಯ ವಾತಾವರಣ ಆವರಿಸಿತ್ತು. ನಮ್ಮ ಜೊತೆಗೆ ಪಾಕಿಸ್ತಾನದವರು ಕೂಡ ನೋವನ್ನು ಅನುಭವಿಸುತ್ತಿದ್ದಾರೆ ಎಂಬುದು ಈ ಸಂದರ್ಭದಲ್ಲಿ ತಿಳಿದುಬಂದಿತ್ತು. ಟೀಂ ಇಂಡಿಯಾ ಸೋಲಿನ ನಂತರ ಪಾಕಿಸ್ತಾನದ ಮಾಜಿ ದಿಗ್ಗಜ ಶೋಯೆಬ್ ಅಖ್ತರ್ ಹೇಳಿಕೆ ನೀಡಿದ್ದಾರೆ. ಜೊತೆಗೆ ಮಾಜಿ ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಕ್ರಿಕೆಟಿಗ-ಆಂಕರ್ ಆಕಾಶ್ ಚೋಪ್ರಾ ಅವರನ್ನು ತರಾಟೆಗೆ ತೆಗೆದುಕೊಂಡರು.


“ಕ್ಷಮಿಸಿ ಸಹೋದರ, ಇದನ್ನು ಕರ್ಮ ಎಂದು ಕರೆಯಲಾಗುತ್ತದೆ' ಎಂದು ಶೋಯಬ್ ಅಖ್ತರ್ ಟ್ವೀಟ್ ಮಾಡಿದ್ದಾರೆ. ಆಕಾಶ್ ಚೋಪ್ರಾ ಮತ್ತು ಹರ್ಭಜನ್ ಸಿಂಗ್ ಅವರ ಹಳೆಯ ಟ್ವೀಟ್ ಅನ್ನು ಮರುಟ್ವೀಟ್ ಮಾಡಿ, “ನಾವು ನಿರೀಕ್ಷೆಗಳ ಬಗ್ಗೆ ಮಾತನಾಡುವುದಿಲ್ಲ” ಎಂದಿದ್ದಾರೆ. ಈ ಹಿಂದೆ ಪಾಕಿಸ್ತಾನ ತಂಡ ಆಸೀಸ್ ವಿರುದ್ಧ ಸೋಲು ಕಂಡಿತ್ತು. ಅಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿ, “ಆಸೀಸ್ ಆಸಿ ಆಸಿ, ಎಂತಹ ಅದ್ಭುತ ಗೆಲುವು, ಕ್ಲಾಸ್ ಟಾಪ್ ಕ್ಲಾಸ್ ಬ್ಯಾಟಿಂಗ್ #ವೇಡ್..” ಎಂದು ಬರೆದಿದ್ದರು, ಅದನ್ನೇ ಮರು ಟ್ವೀಟ್ ಮಾಡಿದ ಶೋಯಬ್ ಅಖ್ತರ್, “ಆಸೀಸ್ ಆಸಿ ಆಸಿ, ಓಯ್ ಓಯ್ ಓಯ್ ವಾಟ್ ಎ ಗೆಲುವು...ಕ್ಲಾಸ್ ಟಾಪ್ ಕ್ಲಾಸ್ ಬ್ಯಾಟಿಂಗ್ #ಹೆಡ್” ಎಂದು ಗೇಲಿ ಮಾಡಿದ್ದಾರೆ.


ಪ್ರಸ್ತುತ ಶೋಯೆಬ್ ಅಖ್ತರ್ ಅವರ ಈ ಕಾಮೆಂಟ್‌’ಗೆ, ಜನರು ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡುತ್ತಿದ್ದಾರೆ. “ಪಾಕಿಸ್ತಾನ ಯಾವಾಗಲೂ ತನ್ನ ಮನಸ್ಥಿತಿಯನ್ನು ತೋರಿಸುತ್ತದೆ. ಅವರು ಎಷ್ಟೊಂದು ಕಳಪೆ ಆಟವನ್ನಾಡಿದರೂ ಅದು ಅವರಿಗೆ ಕಾಣುವುದಿಲ್ಲ, ಬದಲಿಗೆ ಭಾರತ ಸೋತಿರುವುದನ್ನು ನೋಡುತ್ತಿದೆ. ಮೊದಲು ಏಷ್ಯಾಕಪ್‌’ನಲ್ಲಿ ಮತ್ತು ನಂತರ ವಿಶ್ವಕಪ್‌’ನಲ್ಲಿ ಭಾರತ ತಂಡ ಅದ್ಭುತವಾಗಿ ಆಟವಾಡಿದೆ ಎಂಬುದನ್ನು ಮರೆತ ನಾಚಿಕೆಗೇಡಿಗಳು ಇವರು” ಎಂದು ನಿರಂತರವಾಗಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.


“ಟೀಂ ಇಂಡಿಯಾ ಸೋಲಿಗೆ ಕಾರಣ ಇದು”-


ಇದನ್ನೂ ಓದಿ: ಐವತ್ತು ವರ್ಷಗಳ ಬಳಿಕ ವಿಪರೀತ ರಾಜಯೋಗ, ಬುಧನ ಕೃಪೆಯಿಂದ ಈ ಜನರ ಬ್ಯಾಂಕ್ ಬ್ಯಾಲೆನ್ಸ್ ದುಪ್ಪಟ್ಟು!


ಇನ್ನು ಇವೆಲ್ಲದರ ಹೊರತಾಗಿ ವಿಶ್ವಕಪ್’ನಲ್ಲಿ ಭಾರತ ಸೋಲಲು ಕಾರಣವೇನೆಂದು ತಿಳಿಸಿದ ಅಖ್ತರ್‌, "ಟೀಂ ಇಂಡಿಯಾದ ಸೋಲಿಗೆ ಕಾರಣವಾಗಿದ್ದು ಪಿಚ್‌. ಫೈನಲ್‌ ಪಂದ್ಯಕ್ಕೆ ಆತಿಥೇಯ ಭಾರತ ಉತ್ತಮ ಪಿಚ್‌ ನಿರ್ಮಾಣ ಮಾಡಬಬೇಕಿತ್ತು. ಪಿಚ್‌ನಲ್ಲಿ ವೇಗ ಮತ್ತು ಬೌನ್ಸ್‌ ಇರಬೇಕು. ಆದರೆ, ಸ್ಪಿನ್ನರ್‌’ಗಳಿಗೆ ನೆರವಾಗಲಿ ಎಂದು ಮಂದಗತಿಯ ಪಿಚ್‌ ನಿರ್ಮಾಣ ಮಾಡಿ, ಅವರೇ ತೋಡಿದ ಹಳ್ಳಕ್ಕೆ ಅವರೇ ಬಿದ್ದರು. ಭಾರತದ ಈ ತಂತ್ರ ಸರಿಯಾಗಿರಲಿಲ್ಲ" ಎಂದು ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ