Virat Kohli-Ravi Shastri: 2023ರ ವಿಶ್ವಕಪ್’ನ ಫೈನಲ್’ನಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಬಹುಶಃ ಈ ಸೋಲನ್ನು ಯಾವೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿ ನಿರೀಕ್ಷಿಸಿರಲು ಸಾಧ್ಯವಿಲ್ಲ. ಟೂರ್ನಿಯುದ್ದಕ್ಕೂ ಅಬ್ಬರಿಸಿ ಸತತ ಗೆಲುವುಗಳನ್ನೇ ಕಂಡು ಫೈನಲ್ ತಲುಪಿದ್ದ ಭಾರತ ತಂಡಕ್ಕೆ ಇದು ಮಾಸಲಾಗದ ನೋವು ಎಂದೇ ಹೇಳಬಹುದು.
ಅಹಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್’ಗಳಿಂದ ಪ್ರಶಸ್ತಿ ಗೆದ್ದು ಆರನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿತು. ಅಂತಿಮ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಭರ್ಜರಿ ಶತಕ ಬಾರಿಸಿ ಆಸ್ಟ್ರೇಲಿಯಾವನ್ನು ಗೆಲುವಿನತ್ತ ಮುನ್ನಡೆಸಿದರು.
ಇದನ್ನೂ ಓದಿ: “ರಾಹುಲ್ ಹಾಗೂ ಕೊಹ್ಲಿ…”- ವಿಶ್ವಕಪ್ ಫೈನಲ್’ನಲ್ಲಿ ಭಾರತದ ಹೀನಾಯ ಸೋಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ದೂಷಿಸಿದ್ದು ಯಾರನ್ನು?
ಇನ್ನು ವಿಶ್ವಕಪ್ ಟೂರ್ನಿಯ ಪ್ರಶಸ್ತಿ ವಿತರಣೆ ವೇಳೆಯಲ್ಲಿ ವಿರಾಟ್ ಕೊಹ್ಲಿ ಟೂರ್ನಮೆಂಟ್ ಆಟಗಾರ ಪ್ರಶಸ್ತಿ ಪಡೆದರು. ಈ ಪ್ರಶಸ್ತಿ ಪಡೆದರೂ ಸಹ ತನ್ನ ತಂಡಕ್ಕೆ ವಿಶ್ವಕಪ್ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ಗರಿಷ್ಠ 765 ರನ್ ಗಳಿಸಿ ಟೂರ್ನಮೆಂಟ್ ಆಟಗಾರ ಪ್ರಶಸ್ತಿ ಪಡೆದರು.
ಟೂರ್ನಮೆಂಟ್ ಆಟಗಾರ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ನೇರವಾಗಿ ವೇದಿಕೆಯಿಂದ ಕೆಳಗಿಳಿದು ಬಂದರು. ಪಕ್ಕದಲ್ಲೇ ನಿಂತಿದ್ದ ಪೋಸ್ಟ್ ಮ್ಯಾಚ್ ಇಂಟರ್ವ್ಯೂ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರೂಪಕ ರವಿಶಾಸ್ತ್ರಿ ಅವರ ಜೊತೆಯೂ ಮಾತನಾಡಿಲ್ಲ. ಯಾವುದೇ ಆಟಗಾರನಾದರೂ ಪ್ರಶಸ್ತಿ ಸ್ವೀಕರಿಸಿದಾಗ ಬಳಿಕ ಅವರ ಜೊತೆ ಮಾತನಾಡುತ್ತಾರೆ. ಆದರೆ ವಿರಾಟ್ ಕೊಹ್ಲಿಗೆ ಅಂದು ಮಾತನಾಡುವ ಮನಸ್ಸಿರಲಿಲ್ಲ. ಈ ಪರಿಸ್ಥಿತಿಯನ್ನು ತಕ್ಷಣವೇ ಅರಿತ ರವಿಶಾಸ್ತ್ರಿ ಕೈ ಸನ್ನೆ ಮಾಡಿ ಮುನ್ನಡೆಯುವಂತೆ ಸೂಚಿಸಿದ್ದರು. ಈ ವಿಡಿಯೋ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Virat Kohli ain't interested in interview speech after getting POTT. Shastri also appreciated that.
Respect for King Kohli increases after this 🫡pic.twitter.com/pncikh58y0
— GAUTAM (@indiantweetrian) November 20, 2023
ಇದನ್ನೂ ಓದಿ: ಟೂರ್ನಿಯುದ್ದಕ್ಕೂ ಮಿಂಚಿದ್ದ ಟೀಂ ಇಂಡಿಯಾ ಫೈನಲ್’ನಲ್ಲಿ ಸೋಲಲು ಕಾರಣವಾಗಿದ್ದು ಇವರು… ಈ ಅಂಶಗಳು!!
ಭಾವುಕರಾದ ರೋಹಿತ್:
ಟೀಂ ಇಂಡಿಯಾ ವಿಶ್ವಕಪ್ ಫೈನಲ್’ನಲ್ಲಿ ಸೋತ ತಕ್ಷಣ ನಾಯಕ ರೋಹಿತ್ ಶರ್ಮಾ ಕಣ್ಣಲ್ಲಿ ನೀರು ತುಂಬಿತ್ತು. ಭಾರತ ತಂಡದ ನಾಯಕನ ಕನಸು ಕಮರಿತ್ತು... ಪಂದ್ಯ ಮುಗಿಯುತ್ತಿದ್ದಂತೆ ಡ್ರೆಸ್ಸಿಂಗ್ ರೂಂಗೆ ಹೋದ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ಇತ್ತ ಕಡೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಕೂಡ ಕ್ಯಾಪ್’ನ್ನು ಮುಖಕ್ಕೆ ಅಡ್ಡಹಿಡಿದುಕೊಂಡು ಪೆವಿಲಿಯನ್’ಗೆ ತೆರಳಿದ್ದರು. ಇನ್ನೊಂದೆಡೆ ಮೈದಾನದಲ್ಲಿ ಸಿರಾಜ್ ಕಣ್ಣೀರು ಸುರಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ