Sania Mirza - Shoaib Malik : ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ಸುದ್ದಿಯಲ್ಲಿದೆ. ಹಲವಾರು ಮಾಧ್ಯಮಗಳ ವರದಿಗಳ ಪ್ರಕಾರ, ಸುಮಾರು 12 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಸಾನಿಯಾ ಮತ್ತು ಶೋಯೆಬ್ ಬಯಸಿದ್ದಾರೆ ಎನ್ನಲಾಗಿದೆ. ಈ ವದಂತಿಗಳ ಬಗ್ಗೆ ಇತ್ತೀಚೆಗೆ ಶೋಯೆಬ್ ಮಲಿಕ್ ಅವರನ್ನು ಕೇಳಿದಾಗ, "ಇದು ನಮ್ಮ ವೈಯಕ್ತಿಕ ವಿಷಯ. ಈ ಪ್ರಶ್ನೆಗೆ ನಾನಾಗಲಿ ಅಥವಾ ನನ್ನ ಹೆಂಡತಿಯಾಗಲಿ ಉತ್ತರಿಸುವುದಿಲ್ಲ" ಎಂದಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Weight Loss Tips: ವ್ಯಾಯಾಮದ ನಂತರ ಈ 5 ಆಹಾರ ಸೇವಿಸಿ, 3 ತಿಂಗಳಲ್ಲಿ ತೂಕ ಇಳಿಸಿಕೊಳ್ಳಿ


ಸಾನಿಯಾ ಮತ್ತು ಶೋಯೆಬ್ ವಿಚ್ಛೇದನದ ವದಂತಿಗಳ ನಡುವೆ ಶೋಯೆಬ್ ಮಲಿಕ್ ಅವರ ಇನ್‌ಸ್ಟಾಗ್ರಾಮ್ ಬಯೋ ಎಲ್ಲರ ಗಮನ ಸೆಳೆದಿದೆ. ಶೋಯೆಬ್‌ ಇನ್‌ಸ್ಟಾ ಬಯೋ ಸ್ಟೋರಿ ಈಗ ಕುತೂಹಲಕ್ಕೆ ಕಾರಣವಾಗಿದೆ. ಶೋಯೆಬ್ ತಮ್ಮ ಇನ್‌ಸ್ಟಾ ಹ್ಯಾಂಡಲ್‌ನ ಬಯೋದಲ್ಲಿ, "ಕ್ರೀಡಾಪಟು, ಸೂಪರ್ ವುಮನ್‌ಗೆ ಪತಿ" (Athlete, Husband to a Superwoman @mirzasaniar, Father to One True Blessing) ಎಂದು ಬರೆದಿದ್ದಾರೆ. 


ಶನಿವಾರ, ಶೋಯೆಬ್ ಮಲಿಕ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ, ನಂತರ ಅವರ ವಿಚ್ಛೇದನದ ವದಂತಿಗಳು ಮತ್ತೆ ಮುನ್ನೆಲೆಗೆ ಬಂದವು. ಈ ಎಲ್ಲಾ ವದಂತಿಗಳ ನಡುವೆ, ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ತಮ್ಮ ಹೊಸ ಸೆಲೆಬ್ರಿಟಿ ಟಾಕ್ ಶೋ 'ದಿ ಮಲಿಕ್ ಮಿರ್ಜಾ ಶೋ' ನೊಂದಿಗೆ ಉರ್ದುಫ್ಲಿಕ್ಸ್‌ನಲ್ಲಿ ಬರಲಿದ್ದಾರೆ. ಕಾರ್ಯಕ್ರಮದ ಟೀಸರ್ ಬಿಡುಗಡೆಯಾಗಿದೆ.


ಇದನ್ನೂ ಓದಿ : Chanakya Niti: ಪತ್ನಿ ಇದ್ರೂ ಪರ ಸ್ತ್ರೀಯನ್ನು ಗಂಡ ಮೋಹಿಸೋದು ಇದೇ 5 ಕಾರಣಕ್ಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.