Shubman gill  : 2023ನೇ ವರ್ಷವು ಭಾರತದ ಆಟಗಾರ ಶುಭ್ಮನ್‌ಗಿಲ್‌ ಅವರ ವರ್ಷವಾಗಿದೆ. 2023ರ ಆರಂಭದಿಂದಲು ಶುಭ್ಮನ್‌ ಗಿಲ್‌ ಉತ್ತಮ ಫಾರ್ಮ್‌ನ್ಲಿ ಕಂಡರು. ನ್ಯೂಜಿಲೆಂಡ್‌ ವಿರುದ್ದದ ಪಂದ್ಯದಲ್ಲಿ ಅಮೋಘ ದ್ವಿಶತಕವನ್ನು ಸಿಡಿಸಿ ಮಿಂಚಿದರು. ಅಷ್ಟೇ ಅಲ್ಲದೇ ಈ ವರ್ಷ ಅನೇಕ ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಈಗ 2023ರ ಅಂತ್ಯದೊಂದಿದೆ ವಿರಾಟ್‌ ಹೆಸರಿನಲ್ಲಿದ್ದ 12 ವರ್ಷಗಳ ನಿರಂತರ ದಾಖಲೆಗೆ ಬ್ರೇಕ್‌ ನೀಡಿದ್ಧಾರೆ.


COMMERCIAL BREAK
SCROLL TO CONTINUE READING

ಏಕದಿನ ಕ್ರಿಕೆಟ್‌ನಲ್ಲಿ ಅತ್ಯತ್ತಮ ಪ್ರದರ್ಶನ ನೀಡಿದ ಗಿಲ್‌ 29 ಪಂದ್ಯಗಳನ್ನು ಆಡಿದ್ದು,63.36ರ ಸರಾಸರಿಯಲ್ಲಿ 1584 ರನ್‌ ಕಲೆಹಾಕಿದ್ಧಾರೆ. ಅಷ್ಟೇ ಅಲ್ಲದೇ 5 ಶತಕಗಳನ್ನು ಹಾಗೂ 9 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಇವರ ನಂತರ ಸ್ಥಾನದಲ್ಲಿ ವಿರಾಟ್‌ ಉಳಿದು ಕೊಂಡಿದ್ದಾರೆ.


ಇದನ್ನು ಓದಿ-2023ಐಸಿಸಿ ಪುರುಷರ ಏಕದಿನ ಕ್ರಿಕೆಟಿಗ ಪ್ರಶಸ್ತಗೆ ಆಯ್ಕೆಯಾದ ಮೂವರು ಭಾರತೀಯರು! "ರೋಹಿತ್ ಶರ್ಮಾ" ಜಸ್ಟ್‌ ಮಿಸ್‌...


2023ರ ವರ್ಷದಲ್ಲಿ ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸದ ಆಟಗಾರನಾಗಿ ಶುಭ್ಮನ್‌ ಗಿಲ್‌ ಹೊರಹೊಮ್ಮಿದ್ಧಾರೆ. ಇದು ವಿರಾಟ್‌ ಕೊಹ್ಲಿ 12 ವರ್ಷಗಳಿಂದ ನಿರಂತರವಾಗಿ ಕಟ್ಟಿಕೊಂಡು ಬಂದಿದ್ದ ದಾಖಲೆಗೆ ಬ್ರೇಕ್‌ ನೀಡಿದೆ.


ವಿರಾಟ್‌ 2011 ರಿಂದ 2022ರ ವರೆಗೆ ನಿರಂತರವಾಗಿ ಭಾರತ ಪರ ಅತ್ಯಧಿಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸಿದ ಆಟಗಾರನಾಗಿ ಹೊರಹೊಮ್ಮುತ್ತಿದ್ದರು. ಆದರೆ ಈ ವರ್ಷ ಗಿಲ್‌ ವರ್ಷವಾಗಿರುವುದರಿಂದ ಆ ಸ್ಥಾನದಲ್ಲಿ ಗಿಲ್‌ ಕಾಣಿಸಿಕೊಂಡಿದ್ದಾರೆ.


ಇದನ್ನು ಓದಿ-W,0,W,0,W,0... ಈ ಬೌಲರ್ ಬಿರುಗಾಳಿಗೆ ಮಂಕಾದ ಎದುರಾಳಿ ತಂಡ !


ಇನ್ನು ಜಸ್ಪ್ರಿತ್‌ ಬುಮ್ರ ಅವರು ಕೂಡ ವಿರಟ್‌ ಜೊತೆಗೆ 2017 ರಿಂದ ಇಲ್ಲಿಯವರೆಗೆ ಭಾರತ ಪರ ಬೌಲಿಂಗ್‌ ವಿಭಾಗದಲ್ಲಿ ಅತ್ಯಧಿಕ ರಾಂಕ್‌ ಪಡೆದ ಆಟಗಾರನಾಗಿ ಬರುತ್ತಿದ್ದರು. ಆದರೆ ಗಿಲ್‌ ಮತ್ತು ಮೊಹಮ್ಮದ್‌ ಸಿರಾಜ್‌ ಈ ಭಾರಿಯ ಅತ್ಯಧಿಕ ರಾಂಕ್‌ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ಧಾರೆ. 


2023ರ ಐಸಿಸಿ ODI ಬ್ಯಾಟಿಂಗ್‌ ರಾಂಕಿಂಗ್ ಪಟ್ಟಿಯಲ್ಲಿ ಶುಭ್ಮನ್‌ ಗಿಲ್‌ 2ನೇ ಸ್ಥಾನದಲ್ಲಿದ್ದು, ವಿರಾಟ್‌ ಮೂರನೆ ಸ್ಥಾನದಲ್ಲಿದ್ಧಾರೆ. ಐಸಿಸಿ ODI ಬೌಲಿಂಗ್ ರಾಂಕಿಂಗ್‌ನಲ್ಲಿ ಮೊಹ್ಮದ್‌ ಸಿರಾಜ್‌ 3ನೇ ರಾಂಕ್‌ ಮತ್ತು ಜಸ್ಪ್ರಿತ್‌ ಬುಮ್ರಾ 6ನೇ ಸ್ಥಾನದಲ್ಲಿದ್ಧಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ