Shubman Gill: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡ ಅದ್ಭುತ ರೀತಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಮೂರನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 317 ರನ್‌ಗಳಿಂದ ಗೆದ್ದುಕೊಂಡಿದ್ದು, ಇದು ಏಕದಿನ ಕ್ರಿಕೆಟ್‌ನಲ್ಲಿ ರನ್‌ಗಳ ದೃಷ್ಟಿಯಿಂದ ಅತಿದೊಡ್ಡ ಗೆಲುವು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರರೊಬ್ಬರು ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಈ ಆಟಗಾರ ತನ್ನ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದಾರೆ. ಈ ಆಟಗಾರ ವೀರೇಂದ್ರ ಸೆಹ್ವಾಗ್ ಅವರಂತೆಯೇ ಬ್ಯಾಟಿಂಗ್‌ಗೆ ಪ್ರಸಿದ್ಧರಾಗಿದ್ದಾರೆ ಮತ್ತು ಈ ಆಟಗಾರ ನಾಯಕ ರೋಹಿತ್ ಶರ್ಮಾ ಅವರ ಹೊಸ ಆರಂಭಿಕ ಪಾಲುದಾರರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Virat Kohli  : ಜನವರಿ 15ನ್ನು ʼವಿರಾಟ್ ಕೊಹ್ಲಿ ದಿನʼ ಎಂದು ಘೋಷಣೆ...!


ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶುಭ್ಮನ್ ಗಿಲ್ ಅದ್ಭುತ ಆಟ ಪ್ರದರ್ಶಿಸಿದ್ದರು. ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮೂಲಕ ಎಲ್ಲರ ಮನಸೆಳೆದಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶಿಖರ್ ಧವನ್ ಆಯ್ಕೆಯಾಗಿರಲಿಲ್ಲ. ಆದರೆ ಶುಭ್ಮನ್ ಗಿಲ್, ನಾಯಕ ರೋಹಿತ್ ಶರ್ಮಾ ಅವರ ಹೊಸ ಆರಂಭಿಕ ಪಾಲುದಾರರಾಗಿ ಭರ್ಜರಿಯಾಗಿ ಆಟವಾಡಿದ್ದಾರೆ. ಇವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್ ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.


ಶುಭ್ಮನ್ ಗಿಲ್ ಸ್ಫೋಟಕ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿರುವ ಆಟಗಾರ. ಎಂತಹದ್ದೇ ಬಾಲ್ ಆಗಿದ್ದರೂ ಅದರ ವಿರುದ್ಧ ಬ್ಯಾಟ್ ಬೀಸುವ ಪರಿಣತಿ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು 70 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದರ ನಂತರ, ಮೂರನೇ ODI ನಲ್ಲಿ, 97 ಎಸೆತಗಳಲ್ಲಿ 14 ಬೌಂಡರಿಗಳು ಮತ್ತು 2 ದೀರ್ಘ ಸಿಕ್ಸರ್‌ಗಳನ್ನು ಒಳಗೊಂಡಂತೆ 116 ರನ್‌ಗಳ ಸಾಟಿಯಿಲ್ಲದ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಇವರಿಂದಾಗಿ ಟೀಂ ಇಂಡಿಯಾ 390 ರನ್ ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.


ಇದನ್ನೂ ಓದಿ:  ಟೀಂ ಇಂಡಿಯಾಗೆ ಬಿಗ್ ಶಾಕ್ : ಶತಕ ಸಿಡಿಸಿ ಶುಭಮನ್ ಗಿಲ್ ಔಟ್!


ಶುಭ್ಮನ್ ಗಿಲ್ ಇದುವರೆಗೆ 18 ಏಕದಿನ ಪಂದ್ಯಗಳಲ್ಲಿ 59.60 ಸರಾಸರಿಯಲ್ಲಿ 894 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್‌ನಿಂದ ಎರಡು ಶತಕ ಹಾಗೂ ಐದು ಅರ್ಧ ಶತಕಗಳು ಹೊರಹೊಮ್ಮಿವೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ, ರೋಹಿತ್ ಶರ್ಮಾ ಜೊತೆಗೆ ಟೀಮ್ ಇಂಡಿಯಾಕ್ಕೆ ಬಲವಾದ ಆರಂಭವನ್ನು ನೀಡಿದ್ದಾರೆ. ಶಿಖರ್ ಧವನ್ ಬದಲಿಗೆ ಏಕದಿನ ವಿಶ್ವಕಪ್‌ನಲ್ಲಿ ಆಡಲು ಅವರು ದೊಡ್ಡ ಸ್ಪರ್ಧಿಯಾಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.