Virat Kohli Records: ಲಂಕಾ ವಿರುದ್ಧ 166 ರನ್ ಗಳ ‘ವಿರಾಟ’ ಪರ್ವ: ತವರಿನಲ್ಲಿ ತೆಂಡೂಲ್ಕರ್-ಜಯವರ್ಧನೆ ದಾಖಲೆ ಪುಡಿಪುಡಿ

Virat Kohli Records: ಈ ಪಟ್ಟಿಯನ್ನು ಸಚಿನ್ ತೆಂಡೂಲ್ಕರ್ 18426 ರನ್ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಕುಮಾರ ಸಂಗಕ್ಕಾರ (14234 ರನ್), ರಿಕಿ ಪಾಂಟಿಂಗ್ (13704 ರನ್), ಸನತ್ ಜಯಸೂರ್ಯ (13430 ರನ್) ಕ್ರಮವಾಗಿ ಉಳಿದ ಸ್ಥಾನದಲ್ಲಿದ್ದಾರೆ. ಈ ಹಿಂದೆ ಸರಣಿಯಲ್ಲಿ, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ 45 ನೇ ಏಕದಿನ ಶತಕವನ್ನು ಬಾರಿಸಿದ್ದರು.

Written by - Bhavishya Shetty | Last Updated : Jan 15, 2023, 05:28 PM IST
    • ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು ಎಂದೆನಿಸಿಕೊಂಡ ವಿರಾಟ್
    • ತವರಿನಲ್ಲಿ ಅತಿ ಹೆಚ್ಚು ODI ಶತಕಗಳನ್ನು ಬಾರಿಸಿದ್ದ ತೆಂಡೂಲ್ಕರ್ ದಾಖಲೆ ಉಡೀಸ್
    • ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ 5ನೇ ಸ್ಥಾನಕ್ಕೆ ಏರಿದ ಕೊಹ್ಲಿ
Virat Kohli Records: ಲಂಕಾ ವಿರುದ್ಧ 166 ರನ್ ಗಳ ‘ವಿರಾಟ’ ಪರ್ವ: ತವರಿನಲ್ಲಿ ತೆಂಡೂಲ್ಕರ್-ಜಯವರ್ಧನೆ ದಾಖಲೆ ಪುಡಿಪುಡಿ  title=
Virat Kohli

Virat Kohli Records: ಇಂದು ತಿರುವನಂತಪುರದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು ಎಂದೆನಿಸಿಕೊಂಡಿದ್ದಾರೆ. ಈ ಮೂಲಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮಹೇಲಾ ಜಯವರ್ಧನೆ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಕೊಹ್ಲಿ ಈಗ ನಂ. 5 ಸ್ಥಾನ, ಜಯವರ್ಧನೆ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಭಾರತದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ 12,754 ರನ್‌ ಗಳಿಸಿದ್ದರೆ, ಶ್ರೀಲಂಕಾದ ಶ್ರೇಷ್ಠ ಆಟಗಾರ 12,650 ಕಲೆ ಹಾಕಿದ್ದಾರೆ.

ಇದನ್ನೂ ಓದಿ: ಪತ್ನಿ ಜೊತೆ ಶರ್ಟ್ ಲೆಸ್ ಪೋಸ್ ನಲ್ಲಿ ಕಾಣಿಸಿಕೊಂಡ ಕೊಹ್ಲಿ...!

ಈ ಪಟ್ಟಿಯನ್ನು ಸಚಿನ್ ತೆಂಡೂಲ್ಕರ್ 18426 ರನ್ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಕುಮಾರ ಸಂಗಕ್ಕಾರ (14234 ರನ್), ರಿಕಿ ಪಾಂಟಿಂಗ್ (13704 ರನ್), ಸನತ್ ಜಯಸೂರ್ಯ (13430 ರನ್) ಕ್ರಮವಾಗಿ ಉಳಿದ ಸ್ಥಾನದಲ್ಲಿದ್ದಾರೆ.

ಈ ಹಿಂದೆ ಸರಣಿಯಲ್ಲಿ, ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ 45 ನೇ ಏಕದಿನ ಶತಕವನ್ನು ಬಾರಿಸಿದ್ದರು. ಇದೀಗ 3ನೇ ಏಕದಿನ ಪಂದ್ಯದಲ್ಲಿಯೂ ಸಹ ಶತಕ ಬಾರಿಸಿ ವಿರಾಟ ಪರ್ವ ಮುಂದುವರೆಸಿದ್ದಾರೆ. ಬಾಂಗ್ಲಾ ಟೈಗರ್ಸ್ ವಿರುದ್ಧ 113 ರನ್ ಗಳಿಸಿದ್ದ ಕೊಹ್ಲಿಗೆ ಇದು ಸತತ ಮೂರನೇ ಏಕದಿನ ಶತಕವಾಗಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕೊಹ್ಲಿ ಮತ್ತೊಂದು ಶತಕವನ್ನು ತಲುಪುವ ಭರವಸೆಯನ್ನು ಹೊಂದಿದ್ದರು. ಇದೀಗ ಆ ಕನಸು ಈಡೇರಿದೆ.

ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 12 ಬೌಂಡರಿ, 8 ಸಿಕ್ಸರ್ ಸಹಾಯದಿಂದ 110 ಎಸೆತಕ್ಕೆ ವಿರಾಟ್ 166 ರನ್ ಗಳಿಸಿ ಅಜೇಯರಾಗಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನೂ ವಿರಾಟ್ ಮುರಿದಿದ್ದಾರೆ. 34 ವರ್ಷ ವಯಸ್ಸಿನ ಕೊಹ್ಲಿ 100 ಇನ್ನಿಂಗ್ಸ್‌ಗಳಲ್ಲಿ 21 ನೇ ಶತಕದೊಂದಿಗೆ ತವರಿನಲ್ಲಿ ಅತಿ ಹೆಚ್ಚು ODI ಶತಕಗಳನ್ನು ಬಾರಿಸಿದ್ದ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ:  IND vs AUS: ಟೀಂ ಇಂಡಿಯಾಗೆ ಮತ್ತೆ ಟೆನ್ಷನ್: ಈ ಸ್ಟಾರ್ ಬೌಲರ್ ಆಸ್ಟ್ರೇಲಿಯಾ ಸರಣಿಯಿಂದ ಹೊರಗುಳಿಯುವ ಸಾಧ್ಯತೆ

ಜೊತೆಗೆ ಇದು ಶ್ರೀಲಂಕಾ ವಿರುದ್ಧ ಕೊಹ್ಲಿ ಅವರ 10ನೇ ಶತಕ. ಅಷ್ಟೇ ಅಲ್ಲದೆ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ್ದ 9 ಶತಕ ಮತ್ತು ಕೊಹ್ಲಿ ಅವರ ಸ್ವಂತ ದಾಖಲೆಯಾದ ವೆಸ್ಟ್ ಇಂಡೀಸ್ ವಿರುದ್ಧದ 9 ಶತಕಗಳ ದಾಖಲೆಯನ್ನು ವಿರಾಟ್ ಮುರಿದಿದ್ದಾರೆ. ಇವೆಲ್ಲದರ ಜೊತೆಗೆ ಒಂದೇ ಎದುರಾಳಿಯ ವಿರುದ್ಧ ಅತಿ ಹೆಚ್ಚು ODI ಶತಕಗಳನ್ನು ಬಾರಿಸಿದ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News