IND Vs NZ : ಏಕದಿನ ಪಂದ್ಯದ ಬಳಿಕ ಇದೀಗ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಭಾರತೀಯ ಆಟಗಾರರು ಸಂಭ್ರಮದ ಅಲೆಯಲ್ಲಿ ಮುಳುಗಿದ್ದಾರೆ. ಯಂಗ್ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಗೆ ಕ್ರಿಕೆಟ್ ಜಗತ್ತಿನಲ್ಲಡೆ ಹಾಡಿ ಹೊಗಳಲಾಗುತ್ತಿದೆ. ಆದ್ರೆ, ಈಗ ಯುಜುವೇಂದ್ರ ಚಹಾಲ್, ಇಶಾನ್ ಕಿಶನ್ ಮತ್ತು ಶುಭಮಾನ್ ಗಿಲ್ ಹೊಡೆದಾಡಿಕೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಈ ವೀಡಿಯೊದಲ್ಲಿ, ಇಶಾನ್ ಕಿಶನ್, ಶುಬ್‌ಮಾನ್ ಗಿಲ್‌ಗೆ ಕಪಾಳಮೋಕ್ಷ ಮಾಡಿ, ಕಾಲಿಗೆ ಶೋ ಧರಿಸಿ ಬೆಡ್ ಮೇಲೆ ಜಿಗಿದಾಡಿದ್ದಾರೆ. ಈ ವಿಡಿಯೋ ಅಹಮದಾಬಾದ್‌ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ20 ನಂತರದು ಎಂದು ಹೇಳಲಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಶುಭಮಾನ್ ಬಿರುಸಿನ ಶತಕ ಬಾರಿಸುವ ಮೂಲಕ ಭಾರತ 2-1 ಅಂತರದಲ್ಲಿ ಸರಣಿ ಗೆಲ್ಲಲು ನೆರವಾದರು.


ಇದನ್ನೂ ಓದಿ : BCCI : ಐಪಿಎಲ್‌ನಂತೆ ಭಾರತದಲ್ಲಿ ಮತ್ತೊಂದು ಟಿ20 ಲೀಗ್ ಆರಂಭ, ಫೆ.13 ರಂದು ಆಟಗಾರರ ಹರಾಜು!


ಈ ವಿಡಿಯೋವನ್ನು ಶುಭಮನ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು, 'ರೌಡೀಸ್ ರಿಲೋಡೆಡ್ ನೆಚ್ಚಿನ ಕ್ಷಣವನ್ನು ಮರುಸೃಷ್ಟಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಇಶಾನ್ ನೀವು ಉತ್ಸಾಹ ಮತ್ತು ತೀವ್ರತೆಯನ್ನು ಹೊಂದಿರಬೇಕು ಎಂದು ಹೇಳುತ್ತಾರೆ, ಇದಕ್ಕೆ ಉತ್ತರಿಸಿದ, ಶುಭಮನ್, ನನಗೆ ಉತ್ಸಾಹ ಮತ್ತು ತೀವ್ರತೆ ಇದೆ ಎನ್ನುತ್ತಾರೆ. ನಂತರ, ಇಶಾನ್ ಕಿಶನ್ ಬೂಟು ಕಾಲಲ್ಲೇ ಶುಭಮನ್ ಮೇಲೆ ಜಿಗಿದು ಹಾಸಿಗೆಯ ಮೇಲೆ ನಿಂತು ಕುಣಿದಾಡುತ್ತಾನೆ. ಅಲ್ಲಿಂದ, ಗೊರಿಲ್ಲದ ಹಾಗೆ, ಬಾಯಿಯಿಂದ ಶಬ್ದ ಮಾಡುತ್ತ, ಅದರ ಹಾಗೆ ಕುಣಿಯುತ್ತ ಬೆಡ್ ಮೇಲಿಂದ ಕೆಳೆಗೆ ಇಳಿದು ಬಂದು ಗಿಲ್‌ಗೆ ನಿನಗೆ ನೀನೆ ಕಪಾಳಕ್ಕೆ ಹೊಡೆದುಕೋ ಎಂದು ಹೇಳುತ್ತಾನೆ. ಆಗ ಗಿಲ್‌ ಹೊಡೆದುಕೊಳ್ಳುತ್ತಾನೆ. ಅಷ್ಟರಲ್ಲೇ, ಶುಭ್‌ಮನ್‌ಗೆ ಕಿಶನ್ ಕಪಾಳಕ್ಕೆ ಹೊಡೆಯುತ್ತಾನೆ. ಯುಜ್ವೇಂದ್ರ ಚಾಹಲ್ ವಿಡಿಯೋದಲ್ಲಿ ಇವರಿಬ್ಬರ ಜಗಳ ನೋಡುತ್ತಾ ಕುಳಿತಿರುವುದನ್ನ ನೀವು ಕಾಣಬಹುದು. ಇದು ನಿಜ ಘಟನೆಯಲ್ಲ ಇನ್‌ಸ್ಟಾಗ್ರಾಮ್‌ ರೇಲ್ಸ್ ಗಾಗಿ ಈ ಮೂರು ಆಟಗಾರರು ಮಾಡಿರುವ ಶಾರ್ಟ್ ವಿಡಿಯೋ ಇದಾಗಿದೆ. ಹೌದು, ಅದ್ರಲ್ಲೂ  ಯುಜ್ವೇಂದ್ರ ಚಾಹಲ್ ರೇಲ್ಸ್ ಮಾಡುವುದರಲ್ಲಿ ಎತ್ತಿದ ಕೈ, ಇದು ಕೂಡ ಇಶಾನ್ ಕಿಶನ್, ಶುಬ್‌ಮಾನ್ ಗಿಲ್‌, ಯುಜ್ವೇಂದ್ರ ಚಾಹಲ್ ಈ ಮೂವರು ಸೇರಿ ಮಾಡಿರುವ ರೀಲ್ ಇದಾಗಿದೆ.



ಅಂತಾರಾಷ್ಟ್ರೀಯ ಟಿ20ಯಲ್ಲಿ ಶುಭಮನ್ ಗಿಲ್ ಅವರ ಮೊದಲ (ಔಟಾಗದೆ 126) ಶತಕದ ನಂತರ, ಬೌಲರ್‌ಗಳ ಅದ್ಭುತ ಪ್ರದರ್ಶನಕ್ಕೆ ಧನ್ಯವಾದಗಳು, ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ 168 ರನ್‌ಗಳಿಂದ ಸೋಲನುಭವಿಸಿತು. ಇದು ಈ ಮಾದರಿಯಲ್ಲಿ ಭಾರತದ ಅತಿ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು, 2018 ರಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ (143 ರನ್‌ಗಳಿಂದ) ಟಿ20 ಕ್ರಿಕೆಟ್‌ನಲ್ಲಿ ರನ್‌ಗಳ ದೊಡ್ಡ ಗೆಲುವು ಸಾಧಿಸಲಾಯಿತು. ಎರಡು ಪೂರ್ಣಾವಧಿ ಐಸಿಸಿ ರಾಷ್ಟ್ರಗಳ ನಡುವಿನ ರನ್‌ಗಳ ವಿಷಯದಲ್ಲಿ ಇದು ಅತಿದೊಡ್ಡ ಗೆಲುವು ಇದಾಗಿದೆ.


ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಬೌಲರ್‌ಗಳನ್ನು ಸದೆಬಡಿಯುವ ಮೂಲಕ ಗಿಲ್ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಶುಭಮನ್ ಕೇವಲ 63 ಎಸೆತಗಳಲ್ಲಿ 12 ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಗಳಿಸಿದರು, ಈ ಕಾರಣದಿಂದಾಗಿ ಭಾರತ ನಾಲ್ಕು ವಿಕೆಟ್‌ಗೆ 234 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಗಿಲ್ ಅತಿ ಹೆಚ್ಚು ರನ್ ಗಳಿಸಿದ್ದಾರೆ.


ಇದನ್ನೂ ಓದಿ : Team India : ಈ ಆಟಗಾರ ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್ ಆಗಬೇಕು, ಫ್ಯಾನ್ಸ್ ಬೇಡಿಕೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.