ಕೊಹ್ಲಿ-ಹಾರ್ದಿಕ್ ಅಲ್ಲ: ಯೋ-ಯೋ ಟೆಸ್ಟ್’ನಲ್ಲಿ ಹೆಚ್ಚು ಅಂಕ ಪಡೆದವ ಈ ದ್ವಿಶತಕ ಹೀರೋ: ವಿಶ್ವಕಪ್’ಗೆ ಸಿಗುತ್ತಾ ನೇರಪ್ರವೇಶ!
Yo-Yo test Highest score: ಆಗಸ್ಟ್ 30 ರಂದು ಪ್ರಾರಂಭವಾಗುವ ಏಷ್ಯಾ ಕಪ್ 2023ರ ಮೊದಲು ಭಾರತೀಯ ತಂಡದ ಆಟಗಾರರು ನಿಯಮಿತವಾಗಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.
Yo-Yo test Highest score: ಬೆಂಗಳೂರು ಸಮೀಪದ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ 2023ರ ಏಷ್ಯಾಕಪ್’ಗಾಗಿ ಟೀಂ ಇಂಡಿಯಾ ತಯಾರಿಯಲ್ಲಿ ನಿರತವಾಗಿದೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಆಟಗಾರರು ಶಿಬಿರದ ಆರಂಭಕ್ಕೂ ಮುನ್ನ ಯೋ ಯೋ ಟೆಸ್ಟ್’ನಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಪಾಕಿಸ್ತಾನ ತಂಡ ಏಷ್ಯಾಕಪ್ ಮಾತ್ರವಲ್ಲದೆ ವಿಶ್ವಕಪ್ ಕೂಡ ಗೆಲ್ಲುವ ಸಾಧ್ಯತೆ ಇದೆ : ಗಂಗೂಲಿ
ಇನ್ನು ವಿರಾಟ್ ಕೊಹ್ಲಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಅವರು 17.2 ಅಂಕ ಗಳಿಸಿದ್ದು ಕಂಡುಬಂದಿತ್ತು. ಆದರೆ ಇದೀಗ ತಂಡದ ಯುವ ಆಟಗಾರ ಯೋ-ಯೋ ಟೆಸ್ಟ್’ನಲ್ಲಿ ವಿರಾಟ್ ರನ್ನು ಹಿಂದಿಕ್ಕಿದ್ದಾರೆ.
ಆಗಸ್ಟ್ 30 ರಂದು ಪ್ರಾರಂಭವಾಗುವ ಏಷ್ಯಾ ಕಪ್ 2023ರ ಮೊದಲು ಭಾರತೀಯ ತಂಡದ ಆಟಗಾರರು ನಿಯಮಿತವಾಗಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಯುವ ಆಟಗಾರ ಶುಭ್ಮನ್ ಗಿಲ್ ಯೋ-ಯೋ ಪರೀಕ್ಷೆಯಲ್ಲಿ 18.7 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಯೋ-ಯೋ ಟೆಸ್ಟ್’ಗೆ ಒಳಗಾದ ಎಲ್ಲಾ ಕ್ರಿಕೆಟಿಗರು ಕಟ್ ಆಫ್ ಲೆವೆಲ್ 16.5 ದಾಟಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಪ್ರಕಾರ 17.2 ಸ್ಕೋರ್ ಮಾಡಿದ್ದಾರೆ. ಐವರು ಕ್ರಿಕೆಟಿಗರಾದ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಕೆಎಲ್ ರಾಹುಲ್ ಹೊರತುಪಡಿಸಿ ಎಲ್ಲರೂ ಈ ಪರೀಕ್ಷೆಗೆ ಒಳಗಾಗಿದ್ದಾರೆ.
ಬಿಸಿಸಿಐ ಮೂಲವೊಂದು ಈ ಬಗ್ಗೆ ಮಾಹಿತಿ ನೀಡಿದ್ದು “ಯೋ-ಯೋ ಟೆಸ್ಟ್ ಏರೋಬಿಕ್ ಎಂಡ್ಯುರೆನ್ಸ್ ಫಿಟ್‌ನೆಸ್ ಟೆಸ್ಟ್ ಆಗಿದೆ. ಇದರಲ್ಲಿ ಗಿಲ್ ಅವರ ಗರಿಷ್ಠ ಸ್ಕೋರ್ 18.7 ಆಗಿತ್ತು. ಹೆಚ್ಚಿನ ಆಟಗಾರರು 16.5 ಮತ್ತು 18 ರ ನಡುವೆ ಸ್ಕೋರ್ ಮಾಡಿದ್ದಾರೆ. ಅಕ್ಟೋಬರ್’ನಲ್ಲಿ ನಡೆಯಲಿರುವ ವಿಶ್ವಕಪ್’ಗೆ ಮೊದಲು ಬಿಸಿಸಿಐ ಈ ಫಿಟ್’ನೆಸ್-ಕಮ್-ಅಡಾಪ್ಟೇಶನ್ ಶಿಬಿರವನ್ನು ಆಯೋಜಿಸಿದೆ. ಎರಡು ಪಂದ್ಯಾವಳಿಗಳ ನಡುವೆ ಆಟಗಾರರಿಗೆ ಸಮಯವಿದ್ದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕ್ರೀಡಾ ವಿಜ್ಞಾನ ತಂಡವು ಭಾರತೀಯ ತಂಡದ ಕ್ರೀಡಾ ಸಿಬ್ಬಂದಿಯೊಂದಿಗೆ ಎಲ್ಲಾ ಕಡ್ಡಾಯ ಪರೀಕ್ಷೆಗಳನ್ನು ನಡೆಸುತ್ತದೆ" ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಏಷ್ಯಾ ಕಪ್ 2023 ನಿಂದ ಚಹಲ್ ಔಟ್ : ಪತ್ನಿ ಧನ್ಯಶ್ರೀ ಗಂಭೀರ ಪೋಸ್ಟ್..!
2023ರ ಏಷ್ಯಾಕಪ್’ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ.
ಸ್ಟ್ಯಾಂಡ್’ಬೈ ಆಟಗಾರ: ಸಂಜು ಸ್ಯಾಮ್ಸನ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.