ಪಾಕಿಸ್ತಾನ ತಂಡ ಏಷ್ಯಾಕಪ್ ಮಾತ್ರವಲ್ಲದೆ ವಿಶ್ವಕಪ್ ಕೂಡ ಗೆಲ್ಲುವ ಸಾಧ್ಯತೆ ಇದೆ : ಗಂಗೂಲಿ

Sourav ganguly on Asia cup 2023 : ಇದೀಗ ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಏಷ್ಯಾಕಪ್ ಮಾತ್ರವಲ್ಲದೆ ವಿಶ್ವಕಪ್ ಕೂಡ ಗೆಲ್ಲುವ ಸಾಧ್ಯತೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.  

Written by - Krishna N K | Last Updated : Aug 26, 2023, 01:48 PM IST
  • ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಏಷ್ಯಾಕಪ್ ಮಾತ್ರವಲ್ಲದೆ ವಿಶ್ವಕಪ್ ಕೂಡ ಗೆಲ್ಲುವ ಸಾಧ್ಯತೆ ಇದೆ.
  • ನನ್ನ ಭವಿಷ್ಯದಲ್ಲಿ ಟಾಪ್ 5 ತಂಡಗಳಲ್ಲಿ ಪಾಕಿಸ್ತಾನವೂ ಸ್ಥಾನ ಪಡೆದಿದೆ.
  • ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ.
ಪಾಕಿಸ್ತಾನ ತಂಡ ಏಷ್ಯಾಕಪ್ ಮಾತ್ರವಲ್ಲದೆ ವಿಶ್ವಕಪ್ ಕೂಡ ಗೆಲ್ಲುವ ಸಾಧ್ಯತೆ ಇದೆ : ಗಂಗೂಲಿ title=

Sourav ganguly : ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಭಾರತಕ್ಕೆ ಕಠಿಣ ಸವಾಲು ನೀಡಬಲ್ಲದು, ಏಷ್ಯಾಕಪ್ ಮಾತ್ರವಲ್ಲದೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಈ ತಂಡಕ್ಕಿದೆ. ನನ್ನ ಭವಿಷ್ಯದಲ್ಲಿ ಟಾಪ್ 5 ತಂಡಗಳಲ್ಲಿ ಪಾಕಿಸ್ತಾನವೂ ಸ್ಥಾನ ಪಡೆದಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. 

ಏಷ್ಯಾಕಪ್ ಸರಣಿಯಲ್ಲಿ ಆಡಲಿರುವ ಭಾರತ ತಂಡದ ಆಯ್ಕೆ ಕುರಿತು ಮಾತನಾಡಿದ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಂಡ ಅತ್ಯುತ್ತಮವಾಗಿದೆ, ಆಯ್ಕೆಯಾಗಿರುವ ಎಲ್ಲಾ 17 ಆಟಗಾರರು ಅತ್ಯುತ್ತಮ ಆಟಗಾರರಾಗಿದ್ದಾರೆ. ಯುಜ್ವೇಂದ್ರ ಚಹಾಲ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿರುವುದು ಅಕ್ಷರ್ ಆಲ್ ರೌಂಡರ್ ಆಗಿರುವ ಕಾರಣ, ಯಾರಾದರೂ ಗಾಯಗೊಂಡರೆ ಚಹಾಲ್ ಸ್ಥಾನ ಪಡೆಯುವುದು ಖಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಭೇಟಿ ನೀಡಿದ ಟಾಪ್-5 ಫುಟ್ಬಾಲ್ ಆಟಗಾರರು

ಏಷ್ಯಾ ಕಪ್‌ನಂತಹ ಪ್ರಮುಖ ಸರಣಿಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಆಟಗಾರರಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಅಕ್ಷರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಯಾರಾದರೂ ಗಾಯಗೊಂಡರೆ, ಚಾಹಲ್ ಖಂಡಿತವಾಗಿಯೂ ಆ ಅವಕಾಶವನ್ನು ಹೊಂದಿರುತ್ತಾರೆ ಎಂದು ಸ್ಪಷ್ಟ ಪಡಿಸಿದರು.

ಇದೀಗ ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಭಾರತಕ್ಕೆ ಕಠಿಣ ಸವಾಲು ನೀಡಬಲ್ಲದು. ಬಾಬರ್ ಅಜಮ್ ಪ್ರಸ್ತುತ ವಿಶ್ವದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. ಏಷ್ಯಾಕಪ್ ಮಾತ್ರವಲ್ಲದೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಈ ತಂಡಕ್ಕಿದೆ. ನನ್ನ ಭವಿಷ್ಯದಲ್ಲಿ ಟಾಪ್ 5 ತಂಡಗಳಲ್ಲಿ ಪಾಕಿಸ್ತಾನವೂ ಸ್ಥಾನ ಪಡೆದಿದೆ ಎಂದು ಸೌರವ್ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News