ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ನ್ಯೂಜಿಲೆಂಡ್ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಏಕದಿನ ಪಂದ್ಯದಲ್ಲಿ 1000 ರನ್‌ಗಳ ಗಡಿ ದಾಟಿದರು.


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ಗಿಲ್ ಕೇವಲ 149 ಎಸೆತಗಳಲ್ಲಿ 208 ರನ್‌ ಗಳನ್ನು ಗಳಿಸುವ ಮೂಲಕ ವೇಗವಾಗಿ 1000 ರನ್ ಗಳಿಸಿದ ಭಾರತದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅಷ್ಟೇ ಅಲ್ಲದೆ ಈಗ ಅವರು ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಮುರಿದಿದ್ದಾರೆ.


ಮದ್ಯ ಖರೀದಿ ವಯಸ್ಸಿನ ಮಿತಿ ಕಡಿತ; ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ


ಏಕದಿನ ಕ್ರಿಕೆಟ್ ನಲ್ಲಿ 1000  ರನ್‌ಗಳನ್ನು ವೇಗವಾಗಿ ತಲುಪಿದ ಆಟಗಾರರ ಪಟ್ಟಿಯನ್ನು ಇಲ್ಲಿ ನೋಡಿ:


1) ಫಖರ್ ಜಮಾನ್ (18 ಇನ್ನಿಂಗ್ಸ್)


2) ಇಮಾಮ್-ಉಲ್-ಹಕ್ ಮತ್ತು ಶುಭಮನ್ ಗಿಲ್ (19 ಇನ್ನಿಂಗ್ಸ್)


3) 21 ವಿವ್ ರಿಚರ್ಡ್ಸ್ / ಕೆವಿನ್ ಪೀಟರ್ಸನ್ / ಜೊನಾಥನ್ ಟ್ರಾಟ್ / ಕ್ವಿಂಟನ್ ಡಿ ಕಾಕ್ / ಬಾಬರ್ ಅಜಮ್ / ರಾಸ್ಸಿ ವಿಡಿ ಡಸ್ಸೆನ್ (21 ಇನ್ನಿಂಗ್ಸ್)


4) ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ (24 ಇನ್ನಿಂಗ್ಸ್)


ಬುಧವಾರ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ದ್ವಿಶತಕ ಸಿಡಿಸುವ ಮೂಲಕ ಭಾರತ ಎಂಟು ವಿಕೆಟ್ ನಷ್ಟಕ್ಕೆ 349 ರನ್ ಗಳಿಸಿದೆ. ಗಿಲ್ ಅವರು 149 ಎಸೆತಗಳಲ್ಲಿ ತಮ್ಮ ವಿಶೇಷ 208 ರನ್ ಗಳಿಸಿದರು ಮತ್ತು ಇನ್ನೊಂದು ತುದಿಯಿಂದ ಹೆಚ್ಚಿನ ಬೆಂಬಲವಿಲ್ಲದೆ ಇನ್ನಿಂಗ್ಸ್ ಮೂಲಕ ಬ್ಯಾಟ್ ಮಾಡಿದರು. ನಾಯಕ ರೋಹಿತ್ ಶರ್ಮಾ 38 ಎಸೆತಗಳಲ್ಲಿ 34 ರನ್ ಗಳಿಸಿದ್ದು ಇನ್ನಿಂಗ್ಸ್‌ನ ಎರಡನೇ ಅತ್ಯುತ್ತಮ ಸ್ಕೋರ್ ಆಗಿತ್ತು.


ಇದನ್ನೂ ಓದಿ: ದಂಡ ವಸೂಲಿಗೆ ಮನೆ ಬಾಗಿಲಿಗೆ ಬರಲಿದೆ ವಸೂಲಿ ವಾಹನ: ಪಾಲಿಕೆ ಮತ್ತೊಂದು ನಿರ್ಧಾರ...!


ಇದಷ್ಟೇ ಅಲ್ಲದೆ 23 ವಯಸ್ಸಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಶುಭ್ಮನ್ ಗಿಲ್ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ(13) ಸಚಿನ್ ತೆಂಡೂಲ್ಕರ್ (11) ಶತಕಗಳ ಮೂಲಕ ಅಗ್ರಸ್ಥಾನದಲ್ಲಿದ್ದರೆ ಶುಬ್ಮನ್ ಗಿಲ್ (3) ಶತಕಗಳನ್ನು ಗಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.