Team India: “ಮುಂದೊಂದು ದಿನ ಬೇಟೆಗಾರನೇ ಬಲೆಗೆ ಬೀಳುತ್ತಾನೆ”: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹೀಗಂದಿದ್ದು ಯಾರಿಗೆ?
Team India: “ಇಂದೋರ್’ನಲ್ಲಿ ನಾವು ಭಾರತದ ಬ್ಯಾಟಿಂಗ್ ವಿಶೇಷತೆಯನ್ನು ಕಾಣಲಿಲ್ಲ. ನೀವು ರನ್‌ಗಳನ್ನು ಕಲೆ ಹಾಕದಿದ್ದರೆ ಸಮಸ್ಯೆ ಇದೆ. ಇದು ಇಡೀ ಭಾರತದ ಬ್ಯಾಟಿಂಗ್ ಸ್ಥಿತಿ. ರೋಹಿತ್ ಶರ್ಮಾ ಬಿಡಿ, ಇತರ ಯಾರೂ ವಿಶೇಷ ರನ್ ಗಳಿಸಿಲ್ಲ. ನೀವು ರನ್ ಗಳಿಸದಿದ್ದರೆ ಮುಂದೆ ಕಷ್ಟವಿದೆ. ಇದು ಆತ್ಮವಿಶ್ವಾಸದ ಮಾತು, ಅದು ಅಷ್ಟು ಸುಲಭವಾಗಿ ಬರುವುದಿಲ್ಲ. ಇದನ್ನೆಲ್ಲ ನೋಡಿದ್ದೇವೆ” ಎಂದರು.
Team India: ಭಾರತ ತಂಡ ಪ್ರಸ್ತುತ ಇಂದೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಆಡುತ್ತಿದೆ. ಹೋಳ್ಕರ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಅತ್ಯಂತ ಕಳಪೆಯಾಗಿತ್ತು ಮತ್ತು ಆಸ್ಟ್ರೇಲಿಯಾದ ಬೌಲರ್‌ಗಳು 33.2 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಗೆ ತಮ್ಮ 10 ವಿಕೆಟ್‌ಗಳನ್ನು ಪಡೆದರು. ಇದಾದ ಬಳಿಕ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 47 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಬೆನ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: IND vs AUS: ಇಂಡೋ-ಆಸೀಸ್ ಟೆಸ್ಟ್ ಮುಗಿಯುತ್ತಿದ್ದಂತೆ ನಿವೃತ್ತಿ ಘೋಷಿಸಲಿದ್ದಾರೆ ಈ 5 ಆಟಗಾರರು!
ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ ಬುಧವಾರ ಕ್ರಿಕ್‌ಇನ್‌ಫೋಗೆ ವಿಡಿಯೋ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ, ಭಾರತ ಟಾಸ್ ಗೆದ್ದರೂ ಅವಕಾಶವನ್ನು ಕಳೆದುಕೊಂಡಿತು ಎಂಬ ಪ್ರಶ್ನೆಯನ್ನು ಅವರನ್ನು ಕೇಳಲಾಯಿತು, ಅದಕ್ಕೆ ಪ್ರತಿಕ್ರಿಯಿಸಿದ ಅವರು, “ನೋಡಿ, ಯಾವಾಗಲಾದರೂ ಬೇಟೆಗಾರ ಸ್ವತಃ ಬಲೆಗೆ ಬೀಳುತ್ತಾನೆ. ಎದುರಾಳಿನ ತಂಡ ಯಾವಾಗಲೂ ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಎಂದು ನೀವು ಭಾವಿಸಿದರೆ, ಅದು ಆಗುವುದಿಲ್ಲ. ನಾವು ಸರಣಿಯಲ್ಲಿ 2-0 ಮುನ್ನಡೆಯಲ್ಲಿದ್ದೇವೆ. ಆಟಗಾರರು ಪಿಚ್ ನೋಡುತ್ತಾರೆ. ಆದರೆ ಅವರು ನಮ್ಮಂತೆ ಟಿವಿಯಲ್ಲಿ ಪಿಚ್ ವರದಿಯನ್ನು ನೋಡುವುದಿಲ್ಲ. ಇನ್ನು ನಾಲ್ಕನೇ ದಿನದಂದು ನಾವು ವಿಶೇಷವಾದದ್ದನ್ನು ನೋಡುತ್ತೇವೆ ಎಂದು ನನಗೆ ಅನಿಸುವುದಿಲ್ಲ” ಎಂದರು.
“ಇಂದೋರ್’ನಲ್ಲಿ ನಾವು ಭಾರತದ ಬ್ಯಾಟಿಂಗ್ ವಿಶೇಷತೆಯನ್ನು ಕಾಣಲಿಲ್ಲ. ನೀವು ರನ್‌ಗಳನ್ನು ಕಲೆ ಹಾಕದಿದ್ದರೆ ಸಮಸ್ಯೆ ಇದೆ. ಇದು ಇಡೀ ಭಾರತದ ಬ್ಯಾಟಿಂಗ್ ಸ್ಥಿತಿ. ರೋಹಿತ್ ಶರ್ಮಾ ಬಿಡಿ, ಇತರ ಯಾರೂ ವಿಶೇಷ ರನ್ ಗಳಿಸಿಲ್ಲ. ನೀವು ರನ್ ಗಳಿಸದಿದ್ದರೆ ಮುಂದೆ ಕಷ್ಟವಿದೆ. ಇದು ಆತ್ಮವಿಶ್ವಾಸದ ಮಾತು, ಅದು ಅಷ್ಟು ಸುಲಭವಾಗಿ ಬರುವುದಿಲ್ಲ. ಇದನ್ನೆಲ್ಲ ನೋಡಿದ್ದೇವೆ” ಎಂದರು.
ಆಕಾಶ್ ಅವರ ಈ ಹೇಳಿಕೆಗೆ ಕೆಲವು ಕ್ರಿಕೆಟ್ ಅಭಿಮಾನಿಗಳು, ಆಲ್ ರೌಂಡರ್ ರವೀಂದ್ರ ಜಡೇಜಾ ಇದುವರೆಗಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.
ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಕೇವಲ 16 ರನ್ ನೀಡಿ 5 ವಿಕೆಟ್ ಪಡೆದರು. ಅನುಭವಿ ಆಫ್ ಸ್ಪಿನ್ನರ್ ನಾಥನ್ ಲಿಯಾನ್ 35 ರನ್ ನೀಡಿ 3 ವಿಕೆಟ್ ಪಡೆದರು. ಇವರಿಬ್ಬರಿಂದಾಗಿ ಭಾರತದ ಮೊದಲ ಇನಿಂಗ್ಸ್ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ಕುಸಿಯಿತು.
ಇದನ್ನೂ ಓದಿ: ಟೀಂ ಇಂಡಿಯಾಗೆ ಮತ್ತೆ ಎಂಟ್ರಿಕೊಡ್ತಾರಾ Rishabh Pant? ಅಪ್ಡೇಟ್ ಹೊರಬರುತ್ತಿದ್ದಂತೆ ಆಘಾತಕ್ಕೊಳಗಾದ ಫ್ಯಾನ್ಸ್!
ನಂತರ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅರ್ಧಶತಕ ಬಾರಿಸುವ ಮೂಲಕ ಇಂದೋರ್ ಟೆಸ್ಟ್‌ನ ಮೊದಲ ದಿನದಂದು ಆರಂಭಿಕ ಇನ್ನಿಂಗ್ಸ್’ನಲ್ಲಿ ಆಸ್ಟ್ರೇಲಿಯಾ 4 ವಿಕೆಟ್‌ಗೆ 156 ರನ್ ಗಳಿಸಿ ಭಾರತದ ವಿರುದ್ಧ 47 ರನ್ ಮುನ್ನಡೆ ಸಾಧಿಸಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ