ನವದೆಹಲಿ: ಭಾರತ ಮತ್ತು ಪಾಕಿಸ್ತಾನ ತಂಡಗಳು 2012 ರಿಂದ ಪರಸ್ಪರ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ.ಆದಾಗ್ಯೂ, ಉಭಯ ತಂಡಗಳು ಐಸಿಸಿ ವಿಶ್ವ ಟೂರ್ನಿಗಳಲ್ಲಿ ಪರಸ್ಪರ ಎದುರಾಗಿವೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಐಸಿಸಿ ಪುರುಷರ T20 ವಿಶ್ವಕಪ್ 2021 ರಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಪರಸ್ಪರರ ವಿರುದ್ಧ ಕೊನೆಯ ಬಾರಿ ಆಡಿದ್ದವು ಇದು ಪಂದ್ಯಾವಳಿಯಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಆಟವಾಗಿದೆ.ಈ ಎರಡು ತಂಡಗಳು ಭೇಟಿಯಾಗುವುದು ಅಪರೂಪ ಎಂಬ ಕಾರಣಕ್ಕೆ ಅಭಿಮಾನಿಗಳು ತಿಂಗಳ ಮೊದಲೇ ಟಿಕೆಟ್‌ಗಾಗಿ ಸಾಲುಗಟ್ಟಿ ನಿಲ್ಲುತ್ತಾರೆ.


ಇದನ್ನೂ ಓದಿ: NZ vs AUS, T20 World Cup 2021: ಟಾಸ್ ಗೆದ್ದವರೇ ಬಾಸ್, ಯಾರೂ ಗೆದ್ದರೂ ಇತಿಹಾಸ..!


ಭಾರತ ಮತ್ತು ಪಾಕಿಸ್ತಾನವು ದ್ವಿಪಕ್ಷೀಯ ಸರಣಿಗಳಲ್ಲಿ ಹೆಚ್ಚಾಗಿ ಆಡುವುದನ್ನು ಪ್ರಾರಂಭಿಸುತ್ತದೆಯೇ ಎಂಬುದು ಎರಡು ಕ್ರಿಕೆಟ್ ಮಂಡಳಿಗಳು ಉತ್ತರಿಸಬೇಕಾದ ಪ್ರಶ್ನೆಯಾಗಿದೆ.ಈ ಪ್ರಶ್ನೆಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು 'ಇದು ಮಂಡಳಿಗಳ ಕೈಯಲ್ಲಿಲ್ಲ, ವಿಶ್ವ ಪಂದ್ಯಾವಳಿಗಳಲ್ಲಿ ಎರಡು ತಂಡಗಳು ಪರಸ್ಪರ ಆಡುತ್ತವೆ, ದ್ವಿಪಕ್ಷೀಯ ಕ್ರಿಕೆಟ್ ಅನ್ನು ವರ್ಷಗಳಿಂದ ನಿಲ್ಲಿಸಲಾಗಿದೆ ಮತ್ತು ಇದು ಆಯಾ ಸರ್ಕಾರಗಳು ಕೆಲಸ ಮಾಡಬೇಕಾಗಿದೆ. ಇದು ರಮೀಜ್‌ನ ಕೈಯಲ್ಲಿಲ್ಲ, ನನ್ನ ಕೈಯಲ್ಲಿಯೂ ಇಲ್ಲ" ಎಂದು ಹೇಳಿದರು.


ಇದನ್ನೂ ಓದಿ:Ind vs NZ Test Series : ಟೀಂ ಇಂಡಿಯಾಗೆ ಸಿಹಿ ಸುದ್ದಿ : ನ್ಯೂಜಿಲೆಂಡ್‌ನ ಈ ಅಪಾಯಕಾರಿ ಆಟಗಾರ ಟೆಸ್ಟ್ ಸರಣಿಯಿಂದ ಹೊರಗೆ!


ಪ್ರಸ್ತುತ ದಿನಗಳಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಸುವುದು ಅಸಾಧ್ಯ ಎಂದು ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಕೂಡ ಈ ಹಿಂದೆ ಹೇಳಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.