Sourav Ganguly on Rohit Sharma Captaincy: ಸೌರವ್ ಗಂಗೂಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರೋಹಿತ್ ಶರ್ಮಾ ಅವರನ್ನು ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆ ಮಾಡಲಾಯಿತು.


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. 2021ರ ಟಿ 20 ವಿಶ್ವಕಪ್‌’ನಲ್ಲಿ ಸೂಪರ್ ಫೋರ್ ತಲುಪಲು ಸಹ ಸಾಧ್ಯವಾಗಿರಲಿಲ್ಲ. ಇನ್ನೊಂದೆಡೆ ಕೊಹ್ಲಿ ನೇತೃತ್ವದ ಭಾರತವು 2017 ರ ICC ಚಾಂಪಿಯನ್ಸ್ ಟ್ರೋಫಿಯ ಫೈನಲ್ ಮತ್ತು WTC 2021 ರ ಫೈನಲ್ ತಲುಪಿತ್ತು.


ಇದನ್ನೂ ಓದಿ: 5ನೇ ಟೆಸ್ಟ್’ನಲ್ಲಿ ಪಡಿಕ್ಕಲ್’ಗೆ ಸಿಗುತ್ತಾ ಅವಕಾಶ? ಕನ್ನಡಿಗ ಎಂಟ್ರಿಕೊಟ್ಟರೆ ಈ ಆಟಗಾರ ಹೊರಕ್ಕೆ


ಆದರೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಿದ ತಕ್ಷಣ, ಟೀಮ್ ಇಂಡಿಯಾ 2022ರ ಟಿ 20 ವಿಶ್ವಕಪ್‌’ನ ಸೆಮಿಫೈನಲ್, ಡಬ್ಲ್ಯುಟಿಸಿ 2023 ಫೈನಲ್ ಮತ್ತು 2023 ರ ODI ವಿಶ್ವಕಪ್‌’ನ ಫೈನಲ್‌ಗೆ ತಲುಪಲು ಯಶಸ್ವಿಯಾಗಿತ್ತು. ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದ್ದು, ಈ ಸಂದರ್ಭದಲ್ಲಿ ಸೌರವ್ ಗಂಗೂಲಿ, ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಾರೆ.


“ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ನನಗೆ ಆಶ್ಚರ್ಯವಿಲ್ಲ, ಏಕೆಂದರೆ ಅವರ ನಾಯಕತ್ವ ಸಾಮರ್ಥ್ಯದ ಬಗ್ಗೆ ಅವರಿಗೆ ಈಗಾಗಲೇ ವಿಶ್ವಾಸವಿತ್ತು, ಅದಕ್ಕಾಗಿಯೇ ಅವರನ್ನು ನಾಯಕನನ್ನಾಗಿ ಮಾಡಿದೆ” ಎಂದು ಬಿಸಿಸಿಐ ಮಾಜಿ ಅಧ್ಯಕ್ಷರು ಹೇಳಿದ್ದಾರೆ.


ಇದನ್ನೂ ಓದಿ:  RCB ಓಪನಿಂಗ್’ನಲ್ಲಿ ದೊಡ್ಡ ಬದಲಾವಣೆ: ವಿರಾಟ್ ಕೊಹ್ಲಿ-ಫಾಫ್ ಡು ಪ್ಲೆಸಿಸ್ ಆರಂಭಿಕ ಜೋಡಿಯಲ್ಲ!


“ರೋಹಿತ್ ಶರ್ಮಾ ಉತ್ತಮ ನಾಯಕ. ಐಪಿಎಲ್ ಟ್ರೋಫಿ ಗೆದ್ದ ದಾಖಲೆಯನ್ನೂ ಸಹ ನೋಡಬಹುದು. ತಂಡದ ನಾಯಕತ್ವದ ಬಗ್ಗೆ ನನಗೆ ಆಶ್ಚರ್ಯವಿಲ್ಲ. ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗ ಅವರು ನಾಯಕರಾದರು. ಅವರು ತಂಡವನ್ನು ಮುನ್ನಡೆಸುವ ರೀತಿ ನನಗೆ ಆಶ್ಚರ್ಯವೆನಿಸುವುದಿಲ್ಲ. ಅದಕ್ಕಾಗಿಯೇ ಅವರನ್ನು ಭಾರತೀಯ ನಾಯಕನನ್ನಾಗಿ ಮಾಡಿದ್ದೇನೆ” ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ