ನವದೆಹಲಿ: ನಿರ್ಗಮಿತ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರು ತಮ್ಮ ರಾಜ್ಯ ಘಟಕವಾದ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಬಿ) ಅಧ್ಯಕ್ಷರಾಗಿ ಮರಳಲಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಬಿಸಿಸಿಐ ಬರುವ ಮೊದಲು  2015 ರಿಂದ 2019 ರ ನಡುವೆ ನಾಲ್ಕು ವರ್ಷಗಳ ಕಾಲ ಸಿಎಬಿ ಅಧ್ಯಕ್ಷರಾಗಿದ್ದರು.ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ "ಹೌದು, ನಾನು ಸಿಎಬಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ. ನಾನು ಅಕ್ಟೋಬರ್ 22 ರಂದು ನನ್ನ ನಾಮಪತ್ರವನ್ನು ಸಲ್ಲಿಸಲು ಯೋಜಿಸುತ್ತೇನೆ. ನಾನು ಸಿಎಬಿಯಲ್ಲಿ ಐದು ವರ್ಷಗಳ ಕಾಲ ಇದ್ದೇನೆ ಮತ್ತು ಲೋಧಾ ನಿಯಮಗಳ ಪ್ರಕಾರ ನಾನು ಇನ್ನೂ ನಾಲ್ಕು ವರ್ಷಗಳ ಕಾಲ ಮುಂದುವರಿಯಬಹುದು" ಎಂದು ಗಂಗೂಲಿ ತಿಳಿಸಿದ್ದಾರೆ.


ಇದನ್ನೂ ಓದಿ: ಜಗಳ ಬಿಡಿಸಲು ಹೋದವನಿಗೆ ಚಾಕು ಇರಿತ: ಆತನ ವಿರುದ್ಧವೇ ದಾಖಲಾಯ್ತು ಎಫ್ಐಆರ್!!


ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಶಿಶ್ ಅವರು ಉನ್ನತ ಹುದ್ದೆಗೆ ಅವಿಶೇಕ್ ದಾಲ್ಮಿಯಾ ಅವರ ಸ್ಥಾನದಲ್ಲಿ ಸ್ಪರ್ಧಿಸುತ್ತಾರೆ ಎಂಬ ಬಲವಾದ ಮಾತುಗಳು ಕೇಳಿ ಬಂದಿತ್ತು, ಆದರೆ ಈಗ ಸೌರವ್ ಗಂಗೂಲಿ ಅವರ ನಾಮನಿರ್ದೇಶನವು ಬಹಳಷ್ಟು ಸಮೀಕರಣಗಳನ್ನು ಬದಲಾಯಿಸುತ್ತದೆ ಎನ್ನಲಾಗಿದೆ.ಇನ್ನೊಂದೆಡೆಗೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಸಿಸಿಐನಲ್ಲಿರುವ ಅಧಿಕಾರಗಳು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂಬುದರ ಮೇಲೆ ಬಹಳಷ್ಟು ವಿಷಯಗಳು ಅವಲಂಬಿತವಾಗಿರುತ್ತದೆ ಸುದ್ದಿಮೂಲಗಳು ಹೇಳಿವೆ.


ಇದನ್ನೂ ಓದಿ: ಅಕ್ರಮವಾಗಿ ಹಾವನ್ನು ಹಿಡಿದ ಆರೋಪ, ಜಗ್ಗಿ ವಾಸುದೇವ್ ವಿರುದ್ಧ ದೂರು ದಾಖಲು


"ಸೌರವ್ ಅವರೊಂದಿಗೆ ಯಾವಾಗಲೂ ನಾಟಕೀಯ ಬದಲಾವಣೆ ಇರುತ್ತದೆ. 2019 ರಲ್ಲಿ ಬ್ರಿಜೇಶ್ ಪಟೇಲ್ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕಾಗಿ ಅಕ್ಷರಶಃ ಫೋಟೋ ಫಿನಿಶ್ ಮಾಡುವ ಮೂಲಕ ಅಧಿಕಾರದ ಸಮೀಕರಣಗಳು ಕೊನೆಯ ಕ್ಷಣದಲ್ಲಿ ಬದಲಾಯಿಸಿದರು," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.


"ಅಕ್ಟೋಬರ್ 20 ರಂದು ಐಸಿಸಿ ಅಧ್ಯಕ್ಷರ ನಾಮನಿರ್ದೇಶನ ಸಲ್ಲಿಕೆಯಾಗಲಿದೆ ಎಂಬುದನ್ನು ಮರೆಯಬೇಡಿ. ಬಿಸಿಸಿಐನಲ್ಲಿರುವ ಪ್ರಬಲ ವ್ಯಕ್ತಿಗಳು ಮನಸ್ಸು ಬದಲಾಯಿಸುತ್ತಾರೆಯೇ ಎಂಬುದು ಪ್ರಶ್ನೆ" ಎಂದು ಅವರು ಹೇಳಿದರು.


ಇದನ್ನೂ ಓದಿ: "ನನ್ನ ಕುಟುಂಬಕ್ಕೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ"


ಸದ್ಯಕ್ಕೆ, ಗಂಗೂಲಿ ಅವರು ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಸಿಸಿಐ ನಾಮನಿರ್ದೇಶಿತರಾಗುವ ಸಾಧ್ಯತೆಗಳು  ಶೇ 10 ಕ್ಕಿಂತ ಕಡಿಮೆಯಾಗಿದೆ, ಹೀಗಾಗಿ ಗಂಗೂಲಿ ಅವರು ಮತ್ತೆ ಸಿಎಬಿ ಅಧ್ಯಕ್ಷರಾಗಿ ಮಂಡಳಿಯ ಆಡಳಿತಾತ್ಮಕ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಆದರೆ ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಅಕ್ಟೋಬರ್ 18 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯ ನಂತರವಷ್ಟೇ ಸಂಪೂರ್ಣ ಚಿತ್ರಣ ಸಿಗಲಿದೆ ಎನ್ನಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ