ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಮಾಳೂರಿನ ಮಸೀದಿಯಲ್ಲಿ ದಾಯಾದಿಗಳಿಬ್ಬರ ನಡುವೆ ನಡೆದ ಗಲಾಟೆಯಲ್ಲಿ ಜಗಳ ಬಿಡಿಸಲು ಹೋದವನ ಎದೆಗೆ ಚಾಕು ಇರಿಯಲಾಗಿತ್ತು. ಚಾಕುವನ್ನು ಎದೆಗೊತ್ತಿಕೊಂಡೇ ಮಾಳೂರು ಠಾಣೆಯ ಎದುರಿಗೆ ಚೂರಿ ಇರಿತಕ್ಕೆ ಒಳದಾದ ವ್ಯಕ್ತಿ ಶಮಿಯುಲ್ಲ ಎಂಬಾತ ಬಂದಿದ್ದ. ಈ ದೃಶ್ಯ ಮಾಳೂರು ಠಾಣೆಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ ಎಂದು ಖುದ್ದು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಮಿಯುಲ್ಲ ತಿಳಿಸಿದ್ದಾರೆ. ಆದರೆ ಚಾಕು ಇರಿತಕ್ಕೆ ಒಳಗಾಗಿ ನೋವಿನಿಂದ ಕಾಲಕಳೆಯುತ್ತಿರುವ ಶಮಿಯುಲ್ಲ ವಿರುದ್ಧವೇ ಮಾಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಮೋದಿ, ಅಮಿತ್ ಶಾ ಅವರೇ ದೇಶಕ್ಕೆ ನಿಮ್ಮ ತ್ಯಾಗ ಏನು?- ಸಿದ್ದರಾಮಯ್ಯ
ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ 1ರ ರಾತ್ರಿ ಸುಮಾರು 9.30 ರಿಂದ 10 ಗಂಟೆ ಸಂದರ್ಭದಲ್ಲಿ ಶಮಿ ಎದೆಗೆ ಹಾಕಿದ ಚಾಕು ಸಮೇತ ಮಾಳೂರು ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಸಿಸಿ ಕ್ಯಾಮರದಲ್ಲಿ ಇದರ ದೃಶ್ಯಗಳು ಸೆರೆಯಾಗಿವೆ. ಪೊಲೀಸ್ ಠಾಣೆ ಗೇಟ್ ಆಗಮಿಸುತ್ತಿದ್ದಂತೆ ಆತನಿಗೆ ಪ್ರಜ್ಞೆ ತಪ್ಪಿದೆ. ತಕ್ಷಣವೇ ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಮಾಳೂರಿನ ಮುಸ್ಲಿಂ ಬಾಂಧವರಿಗೆ ರಾತ್ರಿ ಊಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾಂಸ ಬಡಿಸುವಾಗ ಕೆಲವರಿಗೆ ಜಾಸ್ತಿ ಮತ್ತೆ ಕೆಲವರಿಗೆ ಕಡಿಮೆ ಹಾಕಲಾಗಿದೆ. ಹಬ್ಬಕ್ಕೆ ಎಲ್ಲರಿಂದ ಹಣವನ್ನು ಪಡೆದಿರುವಾಗ ಎಲ್ಲರಿಗೂ ಸಮನಾಗಿ ಊಟ ಹಂಚಿ ಎಂದು ಶಮಿಯುಲ್ಲ ತಂದೆ ಗೌಸ್ ಖಾನ್ ಹೇಳಿದ್ದಾರೆ. ಇದಕ್ಕೆ ದಾಯಾದಿ ಮಾಳೂರು ಸುಲೇಮಾನ್ ಖಾನ್ ತಗಾದೆ ತಗೆದಿದ್ದಾರೆ. ಇಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು. ಆದರೆ ಈ ಹಿಂದೆ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ದಾಯಾದಿ ಕಲಹ ಹಬ್ಬದಲ್ಲಿ ತಾರಕ್ಕೇರಿದೆ.
ಈದ್ ಮಿಲಾದ್ ಹಬ್ಬದಲ್ಲಿ ಸುಲೇಮಾನ್ ಖಾನ್ ಮತ್ತು ಪುತ್ರ ರಿಜ್ವಾನ್ ಹಾಗೂ ಗೌಸ್ ಖಾನ್ ಮತ್ತು ಆರನ ಪುತ್ರ ಶಮಿಯುಲ್ಲಾ ಎಲ್ಲರೂ ಭಾಗಿಯಾಗಿದ್ರು. ಊಟದ ವಿಚಾರದಲ್ಲಿ ಗೌಸ್ ಖಾನ್ ಸಂಬಂಧಿ ರೆಹಮಾನ್ ಗೂ ಮತ್ತು ಹನಿಫ್ ಎಂಬುವರ ನಡುವೆ ಊಟದ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು. ಆಗ ಮದ್ಯ ಪ್ರವೇಶಿಸಿದ ಶಮಿಯುಲ್ಲ ನಮ್ಮ ಬಾವನ ವಿರುದ್ಧ ಯಾಕೆ ಗಲಾಟೆಗೆ ಹೋಗ್ತಿರಾ ಬಿಡಿ ಎಂದು ರೆಹಮಾನ್ ನನ್ನು ಬಿಡಿಸಿಕೊಂಡು ಶಮಿಯುಲ್ಲಾ ಹೊರಬರುತ್ತಾರೆ. ಆಗ ರಿಝ್ವಾನ್ ಎಂಟ್ರಿಯಾಗಿ ಶಮಿಯುಲ್ಲಗೆ ಹಲ್ಲೆ ಮಾಡಿದ್ದಾನೆ. ಮನೆಯಿಂದ ಚಾಕು ತಂದ ರಿಜ್ವಾನ್ ಮಸೀದಿಯಿಂದ ಶಮಿಯುಲ್ಲನನ್ನು ಹೊರಗೆಳೆದುಕೊಂಡು ಬಂದು ಎದೆಗೆ ಚಾಕು ಇರಿದಿದ್ದಾನೆ.
ಇನ್ನು ಎದೆಯಲ್ಲಿ ಚಾಕು ಇದ್ದರೂ ಸಹ ಅದನ್ನು ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ. ಅಲ್ಲಿ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣ ಸ್ಥಳೀಯರು ಗಾಯಾಳು ಶಮಿಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಲ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾಗಿದೆ. ಸದ್ಯ ಶಮೀವುಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಮಿಯುಲ್ಲ ನೀಡಿದ ಮಾಹಿತಿ ಮೇರೆಗೆ ಸುಲೇಮಾನ್ ಖಾನ್ ಹಾಗು ರಿಜ್ವಾನ್ ವಿರುದ್ಧ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: "ನನ್ನ ಕುಟುಂಬಕ್ಕೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ"
ಇತ್ತ ಸುಲೇಮಾನ್ ಕೂಡ ತಮ್ಮ ಹಾಗು ಪುತ್ರನ ಮೇಲೆ ಶಮಿಯುಲ್ಲ ಹಾಗು ಸಂಬಂಧಿಗಳು ಹಲ್ಲೆ ನಡೆಸಿದ್ದಾರೆ ಎಂದು ಮಾಳೂರು ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಶಮಿಯುಲ್ಲ ವಿರುದ್ಧ 504, 506, 324 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ ಗಲಾಟೆ ಮಾಡಿದ ಆರೋಪಿಗಳಿಬ್ಬರೂ ಈಗಲೂ ಅರಾಮಾಗಿ ಓಡಾಡಿಕೊಂಡಿದ್ದಾರೆ ಎಂದು ಶಮಿಯುಲ್ಲಾ ಆರೋಪಿಸಿದ್ದಾರೆ. ಗಲಾಟೆ ಮಾಡಿದವರು ಕೊಟ್ಟ ದೂರನ್ನು ದಾಖಲಿಸಿಕೊಂಡು, ನೊಂದವನ ವಿರುದ್ಧವೇ ಮಾಳೂರು ಪೊಲೀಸರು ಕೇಸು ದಾಖಲಿಸಿರುವುದು ಯಾವ ನ್ಯಾಯ ಎಂದು ಶಮಿಯುಲ್ಲಾ ಕುಟುಂಬ ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ