ನವದೆಹಲಿ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಆಯ್ಕೆಯಾಗಿರುವುದು ಈಗ ತಂಡದ ಮಾಜಿ ಸಹ ಆಟಗಾರರಿಗೆ ಸಂತಸ ತಂದಿದೆ.



COMMERCIAL BREAK
SCROLL TO CONTINUE READING

ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ನೇಮಕವಾಗಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದವರ ಸಾಲಿಗೆ ಸೇರಿದ ಹರ್ಭಜನ್ ಸಿಂಗ್ ಕೂಡ ಸೇರ್ಪಡೆಯಾಗಿದ್ದಾರೆ. ಅವರರು ಇತ್ತೀಚಿಗೆ ಟ್ವೀಟ್ ಮಾಡಿ ' ನೀವು ಇತರರನ್ನು ಸಶಕ್ತಗೊಳಿಸುವಂತೆ ಮಾಡುವ ನಾಯಕ' ಬಿಸಿಸಿಐ ಅಧ್ಯಕ್ಷನಾಗಿರುವುದಕ್ಕೆ ಧನ್ಯವಾದಗಳು' ಎಂದು ಅವರು ಶುಭ ಹಾರೈಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ ' ಧನ್ಯವಾದಗಳು ಭಜ್ಜು... ಈ ಹಿಂದೆ ಒಂದೆಡೆ ನಿಂತು ಭಾರತದ ಪರವಾಗಿ ಪಂದ್ಯವನ್ನು ಗೆಲ್ಲಿಸಿದಂತೆ ಅದೇ ರೀತಿ ನಿಮ್ಮ ಬೆಂಬಲ ಬೇಕಾಗಿದೆ' ಎಂದು ಹೇಳಿದರು.  



2001 ರಲ್ಲಿ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ಗೆದ್ದ ಭಾರತದ ತವರು ಸರಣಿಯಲ್ಲಿ ಜಯಗಳಿಸುವಲ್ಲಿ ಹರ್ಭಜನ್ ಪ್ರಮುಖ ಪಾತ್ರ ವಹಿಸಿದರು ಆದಾದ ನಂತರ ಅವರು ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. 2003 ರ ಐಸಿಸಿ ವಿಶ್ವಕಪ್ ನಲ್ಲಿ ಅವರು ಅನಿಲ್ ಕುಂಬ್ಳೆಗಿಂತ ಭಾರತದ ಪ್ರಮುಖ ಸ್ಪಿನ್ನರ್ ಆಗಿದ್ದರು, ಆಗ ಗಂಗೂಲಿಯ ನಾಯಕತ್ವದಲ್ಲಿ ಭಾರತ ತಂಡ ಫೈನಲ್ ತಲುಪಿತು.