Anrich Nortje and Sisanda Magala: ODI ವಿಶ್ವಕಪ್ 2023 ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ. ಈ ಟೂರ್ನಿಗೆ ಇದುವರೆಗೆ 17 ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಆದರೆ ಒಂದು ತಂಡವು ಇದ್ದಕ್ಕಿದ್ದಂತೆ ದೊಡ್ಡ ಬದಲಾವಣೆಯನ್ನು ಮಾಡಿದ್ದು, ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಟ್ಟಿದೆ. ಬದಲಿಯಾಗಿ ಮತ್ತಿಬ್ಬರು ಆಟಗಾರರ ಹೆಸರನ್ನು ಸೂಚಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕುಟುಂಬ ಪೋಷಣೆಗೆ ಕಸ ಹೆಕ್ಕುತ್ತಿದ್ದ ಆತ ಇಂದು ‘ವಿಶ್ವ ಕ್ರಿಕೆಟ್’ನ ಬಾಸ್!


2023ರ ಐಸಿಸಿ ವಿಶ್ವಕಪ್ 2023ಕ್ಕೂ ಮುನ್ನ ದಕ್ಷಿಣ ಆಫ್ರಿಕಾ ದೊಡ್ಡ ಹಿನ್ನಡೆ ಅನುಭವಿಸಿದೆ. ಅನ್ರಿಚ್ ನಾರ್ಟ್ಜೆ ಮತ್ತು ಸಿಸಂಡಾ ಮಗಾಲಾ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ಅನ್ರಿಚ್ ನಾರ್ಟ್ಜೆ ಬೆನ್ನುನೋವಿನಿಂದ ಬಳಲುತ್ತಿದ್ದರೆ, ಸಿಸಂಡಾ ಮಗಲಾ ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ.


ಗಾಯಗೊಂಡಿರುವ ವೇಗದ ಬೌಲರ್‌’ಗಳ ಜಾಗದಲ್ಲಿ ಆಂಡಿಲ್ ಫೆಹ್ಲುಕ್ವಾಯೊ ಮತ್ತು ಲಿಜಾಡ್ ವಿಲಿಯಮ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಫೆಹ್ಲುಕ್ವಾಯೊ ಆಸ್ಟ್ರೇಲಿಯಾ ವಿರುದ್ಧದ ಎರಡು ODI ಪಂದ್ಯಗಳಲ್ಲಿ ಭಾಗವಹಿಸಿ 2 ವಿಕೆಟ್ ಪಡೆದಿದ್ದರು.


ಇದನ್ನೂ ಓದಿ: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲ!! ಮಗನ ಖಾತೆಯಿಂದ ಟ್ವೀಟ್ ವೈರಲ್


ODI ವಿಶ್ವಕಪ್ 2023ಗಾಗಿ ದಕ್ಷಿಣ ಆಫ್ರಿಕಾ ತಂಡ:


ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ, ತಬ್ರೈಜ್ ಸ್ಹಮ್‌ಸಿ, ತಬ್ರೈಜ್ ಸ್ಹಾಮ್‌ಸಿ, ಲಿಜಾಡ್ ವಿಲಿಯಮ್ಸ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.