72 ಗಂಟೆಯಲ್ಲಿ 3 ಆಟಗಾರರು ಔಟ್... ಭಾರತ-ಶ್ರೀಲಂಕಾ ಟಿ20 ಸರಣಿಯಲ್ಲಿ ಏನಾಗುತ್ತಿದೆ?
Sri Lanka vs India T20: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಟಿ20 ಶನಿವಾರ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಸರಣಿ ಇನ್ನೂ ಆರಂಭಕ್ಕೂ ಮೂಂಚೆಯೇ ಶರೀಲಂಕಾ ತಂಡ ಭಾರಿ ದೊಡ್ಡ ಅಘಾತವನ್ನು ಎದುರಿಸಿತು. ಆತಿಥೇಯ ಶ್ರೀಲಂಕಾ ತಂಡಕ್ಕೆ ಸಂಕಷ್ಟದ ಬೆಟ್ಟವೇ ಬಿದ್ದಂತಿದೆ.
Sri Lanka vs India T20: ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಟಿ20 ಶನಿವಾರ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಸರಣಿ ಇನ್ನೂ ಆರಂಭಕ್ಕೂ ಮೂಂಚೆಯೇ ಶರೀಲಂಕಾ ತಂಡ ಭಾರಿ ದೊಡ್ಡ ಅಘಾತವನ್ನು ಎದುರಿಸಿತು. ಆತಿಥೇಯ ಶ್ರೀಲಂಕಾ ತಂಡಕ್ಕೆ ಸಂಕಷ್ಟದ ಬೆಟ್ಟವೇ ಬಿದ್ದಂತಿದೆ.
ಕಳೆದ 72 ಗಂಟೆಗಳಲ್ಲಿ ಶ್ರೀಲಂಕಾದ ಮೂವರು ಆಟಗಾರರು ವಿವಿಧ ಕಾರಣಗಳಿಂದ ಸರಣಿಯಿಂದ ಹೊರಗುಳಿದಿದ್ದಾರೆ. ದುಷ್ಮಂತ ಚಮೀರ ಮತ್ತು ನುವಾನ್ ತುಷಾರ ನಂತರ ವೇಗಿ ಬಿನೂರ ಫೆರ್ನಾಂಡೊ ಕೂಡ ಸರಣಿಯಿಂದ ಹೊರಗುಳಿದಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಬಿನೂರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: IND vs SL: ಬ್ಯೂ ಬಾಯ್ಸ್ ಅಬ್ಬರಕ್ಕೆ ಮಣಿದ ಶ್ರೀಲಂಕಾ
ಬಿನೂರಾ ಫರ್ನಾಂಡೋ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಾಹಿತಿ ನೀಡಿದೆ. ಎದೆಯ ನೋವಿನಿಂದ ಬಿನೂರಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಾನಕ್ಕೆ ರಮೇಶ್ ಮೆಂಡಿಸ್ ಅವರನ್ನು ಸ್ಟ್ಯಾಂಡ್‌ಬೈ ಾಟಗಾರನಾಗಿ ಶ್ರೀಲಂಕಾ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ವೇಗದ ಬೌಲರ್ ದುಷ್ಮಂತ ಚಮೀರಾ ಬ್ರಾಂಕೈಟಿಸ್ ಮತ್ತು ಉಸಿರಾಟದ ಸೋಂಕಿನಿಂದ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದರು. ಚಮೀರಾ ಬದಲಿಗೆ ಶ್ರೀಲಂಕಾ ತನ್ನ ತಂಡದಲ್ಲಿ ಅಸಿತಾ ಫೆರ್ನಾಂಡೋ ಸೇರಿಸಿಕೊಂಡಿದೆ, ನುವಾನ್ ತುಷಾರ ಕೂಡ ಹೆಬ್ಬೆರಳು ಗಾಯದಿಂದಾಗಿ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದಾರೆ. ಅಭ್ಯಾಸದ ವೇಳೆ ತುಷಾರ ಗಾಯಗೊಂಡಿದ್ದರು. ಅವರ ಸ್ಥಾನದಲ್ಲಿ ದಿಲ್ಶಾನ್ ಮಧುಶಂಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: IND vs SL: ಮೊದಲ ಪಂದ್ಯದಲ್ಲೆ ಅನಾಹುತ..ರವಿ ಬಿಷ್ಣೈ ಮುಖಕ್ಕೆ ಅಪ್ಪಳಿಸಿದ ಬಾಲ್, ಗಳಗಳನೇ ಅತ್ತ ಆಟಗಾರ..!
ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ವನಿಂದು ಹಸರಂಗಾ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು. ಹಸರಂಗ ನಾಯಕತ್ವದಲ್ಲಿ ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಸುತ್ತಿನಲ್ಲೇ ತಂಡ ಹೊರಬಿದ್ದಿತ್ತು. ವಿಶ್ವಕಪ್ ನಂತರ, ಹಸರಂಗ ಅವರು ತವರಿಗೆ ಹಿಂದಿರುಗಿದ ನಂತರ T20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಇದಾದ ನಂತರ SLC ಭಾರತ ವಿರುದ್ಧದ T20 ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಚರಿತ್ ಅಸಲಂಕಾಗೆ ನೀಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.