Wanindu Hasaranga Announced Retirement: ಏಷ್ಯಾಕಪ್ 2023 ಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಹೊರಹೊಮ್ಮಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಆಲ್‌’ರೌಂಡರ್ ವನಿಂದು ಹಸರಂಗಾ ಟೆಸ್ಟ್ ಕ್ರಿಕೆಟ್‌’ನಿಂದ ಹಠಾತ್ ನಿವೃತ್ತಿಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ವೈಟ್ ಬಾಲ್‌’ನಲ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ವಿಸ್ತರಿಸಲು, ಅವರು ಟೆಸ್ಟ್ ಸ್ವರೂಪದಿಂದ ನಿವೃತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪತ್ರ ಕಳುಹಿಸುವ ಮೂಲಕ ತಮ್ಮ ನಿವೃತ್ತಿಯ ಬಗ್ಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India ಏಕದಿನ ತಂಡಕ್ಕೆ ಹೊಸ ನಾಯಕ ನೇಮಕ! ಇಶಾನ್ ಕಿಶನ್ 8 ವರ್ಷ ಹಳೆಯ ಸ್ನೇಹಿತನಿಗೆ ಪಟ್ಟ!


26ರ ಹರೆಯದ ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗಾ ಅವರು ಟೆಸ್ಟ್ ಕ್ರಿಕೆಟ್‌’ಗೆ ಹಠಾತ್ ನಿವೃತ್ತಿ ಘೋಷಿಸಿದ್ದಾರೆ. ಅವರ ನಿರ್ಧಾರಕ್ಕೆ ಮಂಡಳಿ ಕೂಡ ಅನುಮೋದನೆ ನೀಡಿದೆ. ಟೆಸ್ಟ್ ಕ್ರಿಕೆಟ್‌’ನಿಂದ ಹಸರಂಗ ನಿವೃತ್ತಿಯ ಕುರಿತು ಶ್ರೀಲಂಕಾ ಕ್ರಿಕೆಟ್ ಸಿಇಒ ಆಶ್ಲೇ ಡಿ ಸಿಲ್ವಾ ಮಾತನಾಡಿ, "ನಾವು ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ ಮತ್ತು ನಮ್ಮ ವೈಟ್ ಬಾಲ್ ಕ್ರಿಕೆಟ್ ತಂಡದ ಮುಂದೆ ಹಸರಂಗಾ ಪ್ರಮುಖ ಭಾಗವಾಗಲಿದ್ದಾರೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ.


ವನಿಂದು ಹಸರಂಗ ಶ್ರೀಲಂಕಾ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿದ್ದು, 196 ರನ್ ಗಳಿಸಿ ನಾಲ್ಕು ವಿಕೆಟ್ ಪಡೆದಿದ್ದಾರೆ. ಅರ್ಧಶತಕವನ್ನೂ ಗಳಿಸಿದ್ದಾರೆ. ಹಸರಂಗಾ 2017ರಲ್ಲಿ ಶ್ರೀಲಂಕಾ ಪರ ಪದಾರ್ಪಣೆ ಮಾಡಿದ್ದು, ಅಂದಿನಿಂದ, ಅವರು ಶ್ರೀಲಂಕಾ ಪರ 48 ODIಗಳು ಮತ್ತು 58 T20 ಗಳನ್ನು ವೈಟ್ ಬಾಲ್ ಕ್ರಿಕೆಟ್‌’ನಲ್ಲಿ ಆಡಿದ್ದಾರೆ. ODIಗಳಲ್ಲಿ, ಅವರು 5.07 ರ ಎಕಾನಮಿಯಲ್ಲಿ ಬೌಲಿಂಗ್ ಮಾಡುವಾಗ 67 ವಿಕೆಟ್’ಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ 6.89 ರ ಎಕಾನಮಿಯೊಂದಿಗೆ T20 ನಲ್ಲಿ 91 ವಿಕೆಟ್’ಗಳನ್ನು ಪಡೆದಿದ್ದಾರೆ.


2020 ರಲ್ಲಿ ಟೆಸ್ಟ್ ಚೊಚ್ಚಲ:


ವನಿಂದು ಹಸರಂಗಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 2020 ರಲ್ಲಿ ಸುದೀರ್ಘ ಸ್ವರೂಪದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಏಪ್ರಿಲ್ 2021 ರಲ್ಲಿ ತವರಿನಲ್ಲಿ ಆಡಿದ್ದಾರೆ. ವನಿಂದು ಹಸರಂಗ ಪ್ರಸ್ತುತ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್‌’ನಲ್ಲಿ (LPL) B-Luv ಕ್ಯಾಂಡಿಯನ್ನು ಮುನ್ನಡೆಸುತ್ತಿದ್ದಾರೆ.


ಪ್ರಸಕ್ತ ಟಿ20 ಟೂರ್ನಿಯಲ್ಲಿ ಹಸರಂಗ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಎಲ್‌’ಪಿಎಲ್‌’ನ ಈ ಋತುವಿನಲ್ಲಿ ಅವರು ಮೂರನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ. 15.82 ರ ಸರಾಸರಿಯಲ್ಲಿ ಮತ್ತು 5.87 ರ ಎಕಾನಮಿ ರೇಟ್‌ನಲ್ಲಿ ಒಟ್ಟು 11 ವಿಕೆಟ್‌ಗಳನ್ನು ಪಡೆದಿದ್ದಾರೆ.


ಇದನ್ನೂ ಓದಿ: “ವಿಶ್ವಕಪ್’ಗೆ ಅರ್ಹತೆ ಪಡೆಯದ ತಂಡದ ವಿರುದ್ಧ ಸೋಲು, ಇದಕ್ಕೆ ಕಾರಣ ಇವರೇ!”: ಹೆಸರು ಉಲ್ಲೇಖಿಸಿ ನಿಂದಿಸಿದ ವೆಂಕಟೇಶ್


ವಿಶ್ವದಾಖಲೆ ಬರೆದ ವನಿಂದು: ಇತ್ತೀಚೆಗೆ ಝಿಂಬಾಬ್ವೆಯಲ್ಲಿ ನಡೆದಿದ್ದ ಏಕದಿನ ವಿಶ್ವಕಪ್’​ನ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿದ್ದ ವನಿಂದು ಹಸರಂಗ ವಿಶ್ವ ದಾಖಲೆ ನಿರ್ಮಿಸಿದ್ದರು. 10 ಓವರ್ ಬೌಲಿಂಗ್ ಮಾಡಿದ್ದ ವನಿಂದು ಹಸರಂಗ 79 ರನ್​ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ