Team India ಏಕದಿನ ತಂಡಕ್ಕೆ ಹೊಸ ನಾಯಕ ನೇಮಕ! ಇಶಾನ್ ಕಿಶನ್ 8 ವರ್ಷ ಹಳೆಯ ಸ್ನೇಹಿತನಿಗೆ ಪಟ್ಟ!

Team India New Captain Race: ಈ ವರ್ಷ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್ ನಂತರ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕತ್ವವನ್ನು ತೊರೆಯುವುದರೊಂದಿಗೆ ನಿವೃತ್ತಿ ಘೋಷಿಸುವ ಬಲವಾದ ಸಾಧ್ಯತೆ ಇದೆ.

Written by - Bhavishya Shetty | Last Updated : Aug 14, 2023, 12:27 PM IST
    • ರೋಹಿತ್ ಶರ್ಮಾ ನಿವೃತ್ತಿ ಘೋಷಿಸುವ ಬಲವಾದ ಸಾಧ್ಯತೆ
    • ಧೋನಿಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಏಕದಿನ ಹಾಗೂ ಟಿ20 ನಾಯಕನ ಅವಶ್ಯಕತೆ
    • ಭಾರತದ ಮುಂದಿನ ODI ನಾಯಕರಾಗಬಹುದಾದ ಆ 3 ಆಟಗಾರರು ಯಾರೆಂದು ನೋಡೋಣ.
Team India ಏಕದಿನ ತಂಡಕ್ಕೆ ಹೊಸ ನಾಯಕ ನೇಮಕ! ಇಶಾನ್ ಕಿಶನ್ 8 ವರ್ಷ ಹಳೆಯ ಸ್ನೇಹಿತನಿಗೆ ಪಟ್ಟ! title=
Team India Captain

Team India New Captain Race: ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾದ ಮುಂದಿನ ಖಾಯಂ ODI ಮತ್ತು T20 ನಾಯಕನಾಗಲು ಹಾರ್ದಿಕ್ ಪಾಂಡ್ಯ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದರು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯ ಸೋಲು ಅವರ ನಾಯಕತ್ವಕ್ಕೆ ಕುತ್ತುತಂದಿದೆ. ಈ ವರ್ಷ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್ ನಂತರ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕತ್ವವನ್ನು ತೊರೆಯುವುದರೊಂದಿಗೆ ನಿವೃತ್ತಿ ಘೋಷಿಸುವ ಬಲವಾದ ಸಾಧ್ಯತೆ ಇದೆ. ಹೀಗಿರುವಾಗ ಮೈದಾನದಲ್ಲಿ ಧೋನಿಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಏಕದಿನ ಹಾಗೂ ಟಿ20 ನಾಯಕನ ಅವಶ್ಯಕತೆ ಟೀಂ ಇಂಡಿಯಾಕ್ಕೆ ಇದೆ. ಭಾರತದ ಮುಂದಿನ ODI ನಾಯಕರಾಗಬಹುದಾದ ಆ 3 ಆಟಗಾರರು ಯಾರೆಂದು ನೋಡೋಣ.

ಇದನ್ನೂ ಓದಿ: ಅಂದು ನಿವೃತ್ತಿ ಘೋಷಿಸಿದ್ದ ಧೋನಿ ಗೆಳಯನಿಗೆ ವಿಶ್ವಕಪ್ 2023ರಲ್ಲಿ ಚ್ಯಾನ್ಸ್ ಕೊಟ್ಟ ಸಮಿತಿ!

1. ರಿಷಬ್ ಪಂತ್:

ಟೀಂ ಇಂಡಿಯಾದ ನೂತನ ಏಕದಿನ ನಾಯಕನಾಗುವ ಪ್ರಬಲ ಸ್ಪರ್ಧಿಗಳಲ್ಲಿ ರಿಷಬ್ ಪಂತ್ ಕೂಡ ಒಬ್ಬರು. ಸದ್ಯ, ಅಪಘಾತದ ನಂತರ ರಿಷಬ್ ಪಂತ್ ಟೀಂ ಇಂಡಿಯಾಗೆ ಮರಳಲು ಶ್ರಮಿಸುತ್ತಿದ್ದಾರೆ. ರಿಷಭ್ ಪಂತ್ ನಾಯಕತ್ವದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಗ್ಲಿಂಪ್ಸ್‌’ಗಳನ್ನು ಸಹ ಕಾಣಬಹುದು. 25 ವರ್ಷ ವಯಸ್ಸಿನ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಇನ್ನೂ ಚಿಕ್ಕವರಾಗಿದ್ದು, ಸುದೀರ್ಘ ಕಾಲ ಭಾರತದ ಏಕದಿನ ಪಂದ್ಯಗಳನ್ನು ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದಾರೆ. ಭಾರತದ ಅತಿದೊಡ್ಡ ಮ್ಯಾಚ್ ವಿನ್ನರ್ ಕೂಡ ಹೌದು. ಇವರು ಇಶಾನ್ ಕಿಶನ್ ಗೆಳಯ. 2016ರಿಂದ ಇವರಿಬ್ಬರ ಸ್ನೇಹ ಗಟ್ಟಿಯಾಗಿದೆ.ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ರಿಷಬ್ ಪಂತ್ ಅವರ ಅತ್ಯುತ್ತಮ ಪ್ರದರ್ಶನವನ್ನು ನೋಡಿದರೆ, ಭಾರತದ ಮುಂದಿನ ODI ನಾಯಕನಾಗಿ ಅಧಿಕಾರ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.

2. ಶುಭ್ಮನ್ ಗಿಲ್:

23 ನೇ ವಯಸ್ಸಿನಲ್ಲಿ, ಶುಭ್ಮನ್ ಗಿಲ್ ಟೆಸ್ಟ್, ODI ಮತ್ತು T20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್. ಶುಭ್‌ಮನ್ ಗಿಲ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯವಿದೆ, ದೀರ್ಘಕಾಲದವರೆಗೆ ಟೀಮ್ ಇಂಡಿಯಾದಲ್ಲಿ ಓಪನಿಂಗ್ ಮಾಡುವ ಸಾಮಾರ್ಥ್ಯವೂ ಅವರಲ್ಲಿದೆ. ಶುಭ್‌ಮನ್ ಗಿಲ್ ಎಂತಹ ಬ್ಯಾಟ್ಸ್‌ಮನ್ ಎಂದು ನೋಡಿದರೆ, ಮುಂದಿನ 10 ರಿಂದ 15 ವರ್ಷಗಳ ಕಾಲ ಭಾರತಕ್ಕಾಗಿ ಕ್ರಿಕೆಟ್ ಆಡಬಹುದು. ಜೊತೆಗೆ ನಾಯಕತ್ವಕ್ಕೆ ಪ್ರಬಲ ಸ್ಪರ್ಧಿಯೂ ಹೌದು.

ಇದನ್ನೂ ಓದಿ: IND vs IRE: ಐರ್ಲೆಂಡ್ ಟಿ20 ಸರಣಿಗೆ ತಂಡ ಪ್ರಕಟ: ಟೀ ಇಂಡಿಯಾದ 6 ಸ್ಟಾರ್ ಆಟಗಾರರು ಹೊರಕ್ಕೆ!

3. ಶ್ರೇಯಸ್ ಅಯ್ಯರ್:

ಶ್ರೇಯಸ್ ಅಯ್ಯರ್ ಅವರನ್ನು ಭಾರತದ ಮುಂದಿನ ಏಕದಿನ ನಾಯಕನನ್ನಾಗಿ ಮಾಡಿದರೆ, ಅದರಿಂದ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಟೀಂ ಇಂಡಿಯಾದ ಪ್ರತಿಭಾನ್ವಿತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಭಾರತದ ಮುಂದಿನ ಏಕದಿನ ನಾಯಕನಾಗುವ ದೊಡ್ಡ ಸ್ಪರ್ಧಿ ಕೂಡ. ಮುಂಬೈನ 28 ವರ್ಷದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 2017 ರಲ್ಲಿ ಭಾರತ ತಂಡಕ್ಕಾಗಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಐಪಿಎಲ್ 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅಯ್ಯರ್ ನೇಮಕಗೊಂಡ ಅವರು, ನಂತರ ಐಪಿಎಲ್ 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌’ವರೆಗೆ ಕರೆದುಕೊಂಡು ಹೋಗಿದ್ದರು. ಐಪಿಎಲ್ 2022 ರ ಋತುವಿನಲ್ಲಿಯೂ, ಕೋಲ್ಕತ್ತಾ ನೈಟ್ ರೈಡರ್ಸ್ ಶ್ರೇಯಸ್ ಅಯ್ಯರ್ ಅವರನ್ನು ತಮ್ಮ ನಾಯಕನನ್ನಾಗಿ ಮಾಡಿತು,

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News