14 ವರ್ಷಗಳ ಹಿಂದೆ ಇದೇ ದಿನ.. ವಿಶ್ವದಲ್ಲೇ ಯಾರೂ ಮಾಡದ ಸಾಧನೆ ಮಾಡಿದ್ದ ಸಚಿನ್ ತೆಂಡೂಲ್ಕರ್!
Sachin Tendulkar Record: ವಿಶ್ವದಾದ್ಯಂತ ಇರುವ ಟೀಂ ಇಂಡಿಯಾ ಹಾಗೂ ಕ್ರಿಕೆಟ್ ಅಭಿಮಾನಿಗಳು ಈ ದಿನವನ್ನು (ಫೆಬ್ರವರಿ 24) ಎಂದಿಗೂ ಮರೆಯಲು ಸಾಧ್ಯವಿಲ್ಲ.. ಏನು ಈ ದಿನದ ವಿಶೇಷ ಅಂತೀರಾ.. ಈ ಸ್ಟೋರಿ ಓದಿ..
Sachin Tendulkar: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕ್ರೀಡಾ ಲೋಕದಲ್ಲಿ ದೊಡ್ಡ ಮೈಲಿಗಲ್ಲಾಗಿ ಉಳಿದಿದ್ದಾರೆ.. ಇವರ ಹೆಸರಲ್ಲಿನ ಸಾವಿರಾರು ದಾಖಲೆಗಳು ಇಂದಿಗೂ ರಾರಾಜಿಸುತ್ತಿವೆ.. ಅದರಲ್ಲಿ 14 ವರ್ಷಗಳ ಹಿಂದಿನ ಈ ಸಾಧನೆಯೂ ಒಂದಾಗಿದೆ..
ಟೆಸ್ಟ್ ನಲ್ಲಿ ದ್ವಿಶತಕ ಭಾರಿಸಿದರೆ ದೊಡ್ಡ ಸಾಧನೆ ಎನ್ನುವ ಸಮಯದಲ್ಲಿ ಏಕದಿನದಲ್ಲಿ ದ್ವಿಶತಕ ಪಡೆಯುವುದು ಅನಿರೀಕ್ಷಿತವೇ ಸರಿ.. ಇಂತಹ ಅಸಾಧ್ಯವಾದ ಸಾಧನೆಯನ್ನು ಗಾಡ್ ಆಪ್ ಕ್ರಿಕೆಟ್.. ಸಚಿನ್ ತೆಂಡೂಲ್ಕರ್ ಸಾಧ್ಯವಾಗಿಸಿದ್ದರು.. ಸರಿಯಾಗಿ 14 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಗ್ವಾಲಿಯರ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ODI ಪಂದ್ಯಗಳಲ್ಲಿ 147 ಎಸೆತಗಳಲ್ಲಿ 200 ರನ್ ಗಳಿಸಿ ಅಜೇಯರಾಗಿದ್ದರು.
ಇದಪ್ಪಾ ಸಾಧನೆ ಅಂದ್ರೆ: ಗುಡಿಸಲಲ್ಲಿದ್ದ ಯಶಸ್ವಿ ಜೈಸ್ವಾಲ್ ಹೊಸ ಮನೆ ಬೆಲೆ ಎಷ್ಟು ಗೊತ್ತಾ..?
ಇದೇ ಸರಣಿಯಲ್ಲಿ ಸಚಿನ್ ಏಕದಿನದಲ್ಲಿ ದ್ವಿಶತಕ ಭಾರಿಸಿದ ಭಾರತದ ಮೊದಲ ಆಟಗಾರ ಎಂಬ ಇತಿಹಾಸವನ್ನೇ ಸೃಷ್ಟಿಸಿದ್ದರು.. ಆದರೆ ಸಚಿನ್ ಈ ಸಾಧನೆ ಮಾಡುವವರೆಗೂ ಪಾಕಿಸ್ತಾನದ ಆಟಗಾರ ಅನ್ವರ್ ಗಳಿಸಿದ 194 ರನ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಆಗಿತ್ತು. ಇದನ್ನು ಬ್ರೇಕ್ ಮಾಡಿ ಏಕೈಕ ಆಟಗಾರ ಎಂಬ ಹೆಗ್ಗಳಿಗೆ ಸಚಿನ್ ಪಾತ್ರರಾಗಿದ್ದರು.. ಇನಿಂಗ್ಸ್ ನ ಕೊನೆಯ ಓವರ್ ನ ಮೂರನೇ ಎಸೆತದಲ್ಲಿ ಸಿಂಗಲ್ ರನ್ ಗಳಿಸುವ ಮೂಲಕ ಸಚಿನ್ ಈ ಅಪರೂಪದ ಸಾಧನೆ ಮಾಡಿದ್ದರು.. ವಿಶ್ವದಲ್ಲೇ ಈ ದಾಖಲೆ ಮಾಡಿದ ಮೊದಲ ಆಟಗಾರ ಸಚಿನ್..
ಇದನ್ನೂ ಓದಿ-IND vs ENG Ranchi Test: ಬುಮ್ರಾಗೆ ರೆಸ್ಟ್.. ಆಕಾಶ್ ದೀಪ್ ಟೆಸ್ಟ್ ಕ್ರಿಕೆಟ್‌ಗೆ ಎಂಟ್ರಿ!
ಇನ್ನು ಈ ಪಂದ್ಯದಲ್ಲಿ ಸಚಿನ್ ದ್ವಿಶತಕ ಸಿಡಿಸಿದರು.. ನಂತರ ಭಾರತ ನಿಗದಿತ 50 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 401 ರನ್ ಗಳಿಸಿ.. ಭಾರತ 153 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.. ಇಷ್ಟೇ ಅಲ್ಲ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ಅವರ ದ್ವಿಶತಕದಂತೆ ಇನ್ನೂ 11 ದ್ವಿಶತಕಗಳು ದಾಖಲಾಗಿದ್ದು.. ಆ ಪಟ್ಟಿಯಲ್ಲಿ ಭಾರತದ ಏಳು ಆಟಗಾರರ ಹೆಸರಿದೆ.
ಹಿಟ್‌ಮ್ಯಾನ್ ರೋಹಿತ್ ಶರ್ಮಾ ಸೇರಿದಂತೆ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಶುಭಮನ್ ಗಿಲ್, ಇಶಾನ್ ಕಿಶನ್, ಮಾರ್ಟಿನ್ ಗಪ್ಟಿಲ್, ಕ್ರಿಸ್ ಗೇಲ್, ಫಖರ್ ಜಮಾನ್, ಗ್ಲೆನ್ ಮ್ಯಾಕ್ಸ್‌ವೆಲ್, ಪಾತುಮ್ ನಿಸ್ಸಾಂಕ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.