India vs West Indies: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯು ಜುಲೈ 12 ರಿಂದ ಪ್ರಾರಂಭವಾಗಲಿದೆ. ಡೊಮಿನಿಕಾದಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಟಗಾರನೊಬ್ಬ ಅವಕಾಶ ಪಡೆಯದೆ ಉಳಿಯುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹೊಟ್ಟೆ ಕೊಬ್ಬಿಗೆ ಕಾರಣಗಳು ಮತ್ತು ಸಲಹೆಗಳು ಇಲ್ಲಿವೆ..! ತಪ್ಪದೇ ತಿಳಿಯಿರಿ


ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಈ ಆಟಗಾರ ಪ್ಲೇಯಿಂಗ್ XI ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್, 3 ODI ಮತ್ತು 5 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಾಗಿದೆ. ಇನ್ನು ಈ ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇರುವುದು ಬೇರಾರು ಅಲ್ಲ, ಸ್ಟಾರ್ ಓಪನರ್ ಶುಭ್ಮನ್ ಗಿಲ್.


ಜುಲೈ 12 ರಿಂದ ಡೊಮಿನಿಕಾದಲ್ಲಿ ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ, ಯಶಸ್ವಿ ಜೈಸ್ವಾಲ್ ಕಾರಣದಿಂದ ಶುಭ್ಮನ್ ಗಿಲ್ ಪ್ಲೇಯಿಂಗ್ XI ನಿಂದ ಹೊರಗುಳಿಯಬೇಕಾಗಬಹುದು. ಯಶಸ್ವಿ ಜೈಸ್ವಾಲ್ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆರಂಭಿಕರಾಗಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸುವ ಅವಕಾಶವನ್ನು ಪಡೆಯಬಹುದು. ಯಶಸ್ವಿ ಜೈಸ್ವಾಲ್ ಅವರ ದಾಖಲೆಯನ್ನು ನೋಡಿದರೆ, ಆರಂಭಿಕ ಪಂದ್ಯದಲ್ಲಿ ಶುಭ್ಮನ್ ಗಿಲ್ ಬದಲಿಗೆ ಆಯ್ಕೆಯಾಗುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.


ಶುಭ್ಮನ್ ಗಿಲ್ ಕಳೆದ ತಿಂಗಳು ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಳಪೆ ಸೋಲು ಕಂಡಿದ್ದರು. ಈ ಮಹತ್ವದ ಪಂದ್ಯದಲ್ಲಿ ಕೇವಲ 13 ಮತ್ತು 18 ರನ್‌ ಗಳು ಶುಬ್‌ಮನ್ ಗಿಲ್ ಅವರ ಬ್ಯಾಟ್‌ನಿಂದ ಗಳಿಸಲ್ಪಟ್ಟವು. ಹೀಗಾಗಿ ಭಾರತೀಯ ಟೆಸ್ಟ್ ತಂಡದಲ್ಲಿ ಶುಭಮನ್ ಗಿಲ್ ಬದಲಿಗೆ ಯಶಸ್ವಿ ಜೈಸ್ವಾಲ್ ಅವಕಾಶ ಪಡೆಯಬಹುದು.


21ರ ಹರೆಯದ ಯಶಸ್ವಿ ಜೈಸ್ವಾಲ್ ಅವರ ದಾಖಲೆಗಳನ್ನು ನೋಡಿದರೆ, ಈ ಬ್ಯಾಟ್ಸ್‌ಮನ್ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 80.21 ರ ಅದ್ಭುತ ಬ್ಯಾಟಿಂಗ್ ಸರಾಸರಿಯಲ್ಲಿ 9 ಶತಕ ಮತ್ತು 2 ಅರ್ಧ ಶತಕಗಳನ್ನು ಒಳಗೊಂಡಂತೆ 1845 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆಯಲ್ಲಿ ಯಶಸ್ವಿ ಜೈಸ್ವಾಲ್ ಅವರ ಅತ್ಯುತ್ತಮ ಸ್ಕೋರ್ 265 ರನ್.


ಇದನ್ನೂ ಓದಿ: ಇನ್ನೇಕೆ ಹೇರ್ ಡೈ..? ಈ 3 ಎಲೆಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಕಪ್ಪಾಗುತ್ತೆ!


ಭಾರತದ ವೆಸ್ಟ್ ಇಂಡೀಸ್ ಪ್ರವಾಸವು ಜುಲೈ 12 ರಿಂದ ಪ್ರಾರಂಭವಾಗಲಿದ್ದು ಆಗಸ್ಟ್ 13 ರವರೆಗೆ ನಡೆಯಲಿದೆ. ಜುಲೈ 12 ರಿಂದ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.