IPL 2024 : ಐಪಿಎಲ್ 2024ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.ನಾಳೆಯಿಂದ  ಪಂದ್ಯಾವಳಿ ಆರಂಭವಾಗಲಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯವು ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ ಈ ಬಾರಿಯ ಐಪಿಎಲ್‌ ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡಲಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಭಾರತೀಯ ಸೂಪರ್‌ಸ್ಟಾರ್ ಮತ್ತೆ ಐಪಿಎಲ್ ಅಖಾಡಕ್ಕೆ ಇಳಿಯಲಿದ್ದಾರೆ. ನಾಳೆ ನಡೆಯುವ ಮೊದಲ ಪದ್ಯದಲ್ಲಿಯೇ ಅವರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.  


COMMERCIAL BREAK
SCROLL TO CONTINUE READING

ಹೌದು, ನಾವಿಲ್ಲಿ ಹೇಳುತ್ತಿರುವುದು ಕಾಮೆಂಟರಿ ಕಿಂಗ್ ಎನಿಸಿಕೊಂಡಿರುವ ನವಜೋತ್ ಸಿಂಗ್ ಸಿಧು ಬಗ್ಗೆ. ದಶಕಗಳ ಬಳಿಕ ಮತ್ತೆ ತಮ್ಮ ವಾಕ್ಚಾತುರ್ಯದ ಮೂಲಕ ಪ್ರೇಕ್ಷಕರಿಗೆ  ಮನರಂಜನೆ ನೀಡಲಿದ್ದಾರೆ ಸಿಧು. ಸಿಧು ತಮ್ಮ ಅತ್ಯುತ್ತಮ ಕಾಮೆಂಟರಿಗೆ ಹೆಸರುವಾಸಿಯಾಗಿದ್ದಾರೆ. ಸದಾ ಕವನಗಳ ಮೂಲಕ ಜನಮನ ಸೆಳೆಯುವ ನವಜೋತ್ ಸಿಂಗ್ ಸಿಧು ಮತ್ತೊಮ್ಮೆ ಕ್ರಿಕೆಟ್‌ಗೆ ಮರಳಲು ಸಿದ್ಧರಾಗಿದ್ದಾರೆ. ಐಪಿಎಲ್ 17ನೇ ಸೀಸನ್ ನಲ್ಲಿ ಮತ್ತೊಮ್ಮೆ ತಮ್ಮ  ಕಾಮೆಂಟರಿ ಮೂಲಕ ಮ್ಯಾಜಿಕ್ ಮಾಡಲಿದ್ದಾರೆ. ಮಾಜಿ ಕ್ರಿಕೆಟಿಗ ಸಿಧು ಕಾಮೆಂಟರಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ನಾಳೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮೊದಲ ಪಂದ್ಯದಲ್ಲಿಯೇ ಕಾಮೆಂಟರಿ ಮಾಡಲಿದ್ದಾರೆ. 


ಇದನ್ನೂ ಓದಿ : IPL 2024: ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್‌ 5 ಭಾರತೀಯ ಆಟಗಾರರು!


ಸುಮಾರು ಒಂದು ದಶಕದವರೆಗೆ ಕಾಮೆಂಟರಿಯಿಂದ ದೂರ ಉಳಿದಿದ್ದ ಸಿಧು 2019 ರವರೆಗೆ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡಿದ್ದರು. ವಿವಾದದ ನಂತರ ಅವರನ್ನು ಕಾರ್ಯಕ್ರಮದಿಂದ ಕೈ ಬಿಡಲಾಯಿತು. ನಂತರ ಸಿಧು ಮತ್ತೆ ಸಂಪೂರ್ಣವಾಗಿ ರಾಜಕೀಯದತ್ತ ತಮ್ಮ ಗಮನ ಹರಿಸಿದ್ದರು. ಆದರೆ ಇದೀಗ ಮತ್ತೆ ಕಾಮೆಂಟರಿ ಲೋಕಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾರೆ. 


2001ರಲ್ಲಿ ಕಾಮೆಂಟರಿಗೆ ಪಾದಾರ್ಪಣೆ ಮಾಡಿದ ಸಿಧು : 
60 ವರ್ಷದ ಸಿಧು ಭಾರತೀಯ ಕ್ರಿಕೆಟ್‌ನ ಕಾಮೆಂಟೆಟರ್ ಗಳಲ್ಲಿ ಒಬ್ಬರು. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾಮೆಂಟರಿ ಮಾಡುವುದರ ಜೊತೆಗೆ ಸಿಧು ಐಪಿಎಲ್‌ನಲ್ಲಿ ಪ್ರಸಾರಕರಿಗಾಗಿಯೂ ಕೆಲಸ ಮಾಡಿದ್ದಾರೆ. 2001ರಲ್ಲಿ ಭಾರತದ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಸಿಧು ಕಾಮೆಂಟೇಟರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಸಿಧು ಶೀಘ್ರದಲ್ಲೇ ತಮ್ಮ ಹಾಸ್ಯದ ಒನ್-ಲೈನರ್‌ಗಳಿಗೆ ಪ್ರಸಿದ್ಧರಾದರು.


ಇದನ್ನೂ ಓದಿ : ವಿರಾಟ್, ರೋಹಿತ್ ಅಲ್ಲ.. ಈ ಇಬ್ಬರು ಯುವ ಆಟಗಾರರು ಈ ಬಾರಿ ಐಪಿಎಲ್‌ನಲ್ಲಿ ಮಿಂಚಲಿದ್ದಾರೆ: ಡಿವಿಲಿಯರ್ಸ್ ಭವಿಷ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.