ವಿರಾಟ್, ರೋಹಿತ್ ಅಲ್ಲ.. ಈ ಇಬ್ಬರು ಯುವ ಆಟಗಾರರು ಈ ಬಾರಿ ಐಪಿಎಲ್‌ನಲ್ಲಿ ಮಿಂಚಲಿದ್ದಾರೆ: ಡಿವಿಲಿಯರ್ಸ್ ಭವಿಷ್ಯ

Indian Premier League 2024: ಇಂಡಿಯನ್ ಪ್ರೀಮಿಯರ್ ಲೀಗ್​ 17ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೇ ಶುರುವಾಗಿದೆ. ಮಾರ್ಚ್ 22 ರಿಂದ IPL 2024 ಟೂರ್ನಿ ಪ್ರಾರಂಭಗೊಳ್ಳಲಿದೆ. 

Written by - Chetana Devarmani | Last Updated : Mar 21, 2024, 08:06 AM IST
  • ಇಂಡಿಯನ್ ಪ್ರೀಮಿಯರ್ ಲೀಗ್​ 17ನೇ ಆವೃತ್ತಿ
  • ಮಾರ್ಚ್ 22 ರಿಂದ IPL 2024 ಟೂರ್ನಿ ಪ್ರಾರಂಭ
  • ಇಬ್ಬರು ಯುವ ಆಟಗಾರರ ಬಗ್ಗೆ ಡಿವಿಲಿಯರ್ಸ್ ಭವಿಷ್ಯ
ವಿರಾಟ್, ರೋಹಿತ್ ಅಲ್ಲ.. ಈ ಇಬ್ಬರು ಯುವ ಆಟಗಾರರು ಈ ಬಾರಿ ಐಪಿಎಲ್‌ನಲ್ಲಿ ಮಿಂಚಲಿದ್ದಾರೆ: ಡಿವಿಲಿಯರ್ಸ್ ಭವಿಷ್ಯ   title=

ab de villiers on yashasvi jaiswal: ಇಂಡಿಯನ್ ಪ್ರೀಮಿಯರ್ ಲೀಗ್​ 17ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೇ ಶುರುವಾಗಿದೆ. ಮಾರ್ಚ್ 22 ರಿಂದ IPL 2024 ಟೂರ್ನಿ ಪ್ರಾರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ನಡುವೆ ಹಣಾಹಣಿ ನಡೆಯಲಿದೆ. ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. 

ಐಪಿಎಲ್ 2024 ರಲ್ಲಿ ಅನೇಕ ಆಟಗಾರರ ಮೇಲೆ ಜನರು ನಿರೀಕ್ಷೆಯಿಟ್ಟಿದ್ದಾರೆ. ಅದೇ ಸಮಯದಲ್ಲಿ ಅಭಿಮಾನಿಗಳು ಲೆಜೆಂಡರಿ ಆಟಗಾರರ ಮೇಲೆ ಅತಿಯಾದ ಭರವಸೆ ಹೊಂದಿರುತ್ತಾರೆ. ಆದರೆ ಮಾಜಿ RCB ಆಟಗಾರ ಎಬಿ ಡಿವಿಲಿಯರ್ಸ್ ಈ ಲೀಗ್‌ನಲ್ಲಿ ಇಬ್ಬರು ಯುವ ಆಟಗಾರರ ಮೇಲೆ ಭರವಸೆ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಪರ ಎಲ್ಲಾ ಮೂರು ಫಾರ್ಮೆಟ್‌ಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ ಈ ಇಬ್ಬರು ಐಪಿಎಲ್‌ 2024 ರಲ್ಲಿ ಮಿಂಚಲಿದ್ದಾರೆ ಎಂದಿದ್ದಾರೆ. 

ಇದನ್ನೂ ಓದಿ: ನನ್ನನ್ನು ಕಿಂಗ್ ಅಲ್ಲ ವಿರಾಟ ಅಂತ ಕರೆಯಿರಿ..' RCB ಆನ್ ಬಾಕ್ಸ್ ಇವೆಂಟ್ ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ಕೊಹ್ಲಿ

ಯಶಸ್ವಿ ಜೈಸ್ವಾಲ್ ಮೇಲೆ ಡಿವಿಲಿಯರ್ಸ್‌ ಭರವಸೆ : 

ಇತ್ತೀಚೆಗಷ್ಟೇ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಿದ್ದರು. ಈ ಐಪಿಎಲ್‌ ಸರಣಿಯಲ್ಲಿ ಜೈಸ್ವಾಲ್ ಹಲವು ದಾಖಲೆ ಮುರಿಯುವ ನಿರೀಕ್ಷೆಯಿದೆ. ಜೈಸ್ವಾಲ್ ಐಪಿಎಲ್‌ನಲ್ಲು ಶತಕ ಸಿಡಿಸಿ, ದಾಖಲೆ ರಚಿಸುವ ಭರವಸೆ ಇದೆ. ಜೈಸ್ವಾಲ್ ಅವರು ಐಪಿಎಲ್ 2023 ರಲ್ಲಿ ತಮ್‌ ಆಟದಿಂದ ಕ್ರಿಕೆಟ್‌ ಪ್ರೇಮಿಗಳ ಮನಗೆದ್ದರು. ಇದೀಗ ಜೈಸ್ವಾಲ್ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಕಳೆದ ಐಪಿಎಲ್‌ ಋತುವಿನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ್ದ ಜೈಸ್ವಾಲ್ ಈ ಸೀಸನ್‌ ನಲ್ಲಿಯೂ 600ಕ್ಕೂ ಹೆಚ್ಚು ರನ್ ಗಳಿಸುವ ಭರವಸೆಯನ್ನು ಡಿವಿಲಿಯರ್ಸ್ ವ್ಯಕ್ತಪಡಿಸಿದ್ದಾರೆ.

ಅವರಿಂದ ಶ್ರೇಷ್ಠ ಬ್ಯಾಟಿಂಗ್ ನಿರೀಕ್ಷಿಸುತ್ತಿದ್ದೇನೆ : 

ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಜೈಸ್ವಾಲ್ ಬಗ್ಗೆ ಮಾತನಾಡಿದ್ದಾರೆ, "ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಯಶಸ್ವಿ ಜೈಸ್ವಾಲ್ ಸಾಕಷ್ಟು ಆತ್ಮವಿಶ್ವಾಸವನ್ನು ಪಡೆದಿದ್ದಾರೆ. ಇದು ಐಪಿಎಲ್‌ನಲ್ಲಿ ಅವರ ಅದ್ಭುತ ಪ್ರದರ್ಶನಕ್ಕೆ ಕಾರಣವಾಗಲಿದೆ. ಅವರಿಂದ ಶ್ರೇಷ್ಠ ಬ್ಯಾಟಿಂಗ್ ನಿರೀಕ್ಷಿಸುತ್ತಿದ್ದೇನೆ. ಈ ಋತುವಿನಲ್ಲಿ 600ಕ್ಕೂ ಹೆಚ್ಚು ರನ್‌ಗಳನ್ನು ನಿರೀಕ್ಷಿಸುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: "ಇದು RCB ಹೊಸ ಅಧ್ಯಾಯ" ಖಡಕ್‌ ಆಗಿ ಕನ್ನಡದಲ್ಲೇ ಮಾತನಾಡಿದ ಕಿಂಗ್‌ ಕೊಹ್ಲಿ!! ವಿಡಿಯೋ ವೈರಲ್‌ 

ಬೌಲಿಂಗ್ ನಿಂದಲೂ ಸ್ಟಬ್ಸ್ ಪ್ರಭಾವ ಬೀರಬಲ್ಲರು: 

ಡೆಲ್ಲಿ ಕ್ಯಾಪಿಟಲ್ಸ್‌ನ ಟ್ರಿಸ್ಟಾನ್ ಸ್ಟಬ್ಸ್ ಬಗ್ಗೆಯೂ ಡಿವಿಲಿಯರ್ಸ್ ಮಾತನಾಡಿದ್ದಾರೆ. "ಸೌತ್‌ ಆಫ್ರಿಕಾ ಟಿ20 ಸ್ಟಬ್ಸ್‌ಗೆ ತುಂಬಾ ಒಳ್ಳೆಯ ಶಕ್ತಿ ನೀಡಿದೆ. ಕಳೆದ ವರ್ಷ ಅವರು ಫಾರ್ಮ್‌ನಲ್ಲಿರಲಿಲ್ಲ. ಈ ವರ್ಷ ಅವರು ತಮ್ಮಲ್ಲಿ ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ.  ಅವರು ಏನು ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. ಅವರು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ. ತಮ್ಮ ಬಾಲಿಂಗ್ ನಿಂದಲೂ ಸ್ಟಬ್ಸ್ ಪ್ರಭಾವ ಬೀರಬಲ್ಲರು. ಇಂತಹ ಸಂದರ್ಭದಲ್ಲಿ ಅವರ ಮೇಲೂ ನನಗೆ ಒಂದು ನಿರೀಕ್ಷೆಯಿದೆ" ಎಂದಿದ್ದಾರೆ.

ಐಪಿಎಲ್​ ಉದ್ಘಾಟನಾ ಸಮಾರಂಭದ ಲೈವ್ ಸ್ಟ್ರೀಮಿಂಗ್ :

ಐಪಿಎಲ್ ಉದ್ಘಾಟನಾ ಸಮಾರಂಭ ಮಾರ್ಚ್ 22 ರಂದು ಸಂಜೆ 6:30 ಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್​ ಮೈದಾನದಲ್ಲಿ ಪ್ರಾರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮತ್ತು ಜಿಯೋ ಸಿನಿಮಾದಲ್ಲಿ ಐಪಿಎಲ್ 2024ರ ಉದ್ಘಾಟನಾ ಸಮಾರಂಭ ಪ್ರಸಾರವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News