ನವದೆಹಲಿ : ಐಪಿಎಲ್ 2022 ನಾಳೆಯಿಂದ ಕ್ರಿಕೆಟ್ ಜಗತ್ತನ್ನು ಅಲುಗಾಡಿಸಲು ಸಿದ್ಧವಾಗಿದೆ. ಈ ವರ್ಷ ಮತ್ತೊಮ್ಮೆ ಅಭಿಮಾನಿಗಳು 10 ತಂಡಗಳು ಪರಸ್ಪರ ಸ್ಪರ್ಧಿಸುವುದನ್ನು ಕಣ್ತುಂಬಿಕೊಳ್ಳಲು. ಈ ವರ್ಷ ಅನೇಕ ಯುವ ಆಟಗಾರರನ್ನು ನೋಡಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಐಪಿಎಲ್‌ಗೂ ಮುನ್ನ ಭವಿಷ್ಯ ನುಡಿದಿದ್ದಾರೆ. ಈ ವರ್ಷ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ಗವಾಸ್ಕರ್ ಹೆಸರಿಸಿದ್ದಾರೆ.


COMMERCIAL BREAK
SCROLL TO CONTINUE READING

ಭವಿಷ್ಯ ನುಡಿದ ಗವಾಸ್ಕರ್


ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಐಪಿಎಲ್ 2022 ಸಿಸನ್‌ ನಲ್ಲಿ ಸೂರ್ಯಕುಮಾರ್ ಯಾದವ್(Suryakumar Yadav) ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಲು ಉತ್ತಮ ಅವಕಾಶವಿದೆ ಎಂದು ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಐದು ಬಾರಿಯ ಚಾಂಪಿಯನ್ ಆಗಿರುವ, ಮುಂಬೈ ಇಂಡಿಯನ್ಸ್ ಮಾರ್ಚ್ 27 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಕಳೆದ ಐಪಿಎಲ್ ಸಿಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಮೇಲೆ ಎಲ್ಲರ ಕಣ್ಣುಗಳು ಇವೆ.


ಇದನ್ನೂ ಓದಿ : IPL 2022: 4 ವರ್ಷಗಳ ನಂತರ ಐಪಿಎಲ್‌ಗೆ ಸೂಪರ್‌ಸ್ಟಾರ್ ಆಟಗಾರನ ಪ್ರವೇಶ


ಹಾಡಿ ಹೊಗಳಿದ ಗವಾಸ್ಕರ್


,“ಸೂರ್ಯಕುಮಾರ್ ಯಾದವ್ ಅವರು ಕಳೆದ ಸಿಸನ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ ಮತ್ತು ಐಪಿಎಲ್ 2022(IPL 2022) ರಲ್ಲಿ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಋತುವಿನಲ್ಲಿ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಲು ಉತ್ತಮ ಅವಕಾಶ ಇದಾಗಿದೆ. ಟಿ20 ವಿಶ್ವಕಪ್‌ಗೆ ಭಾರತ ತಂಡವು ಐಪಿಎಲ್‌ನ ಪ್ರದರ್ಶನದ ಮೇಲೆ ಹೆಚ್ಚಾಗಿ ನಿರ್ಧರಿಸಲ್ಪಡುತ್ತದೆ. ಹೀಗಾಗಿ ಆಸ್ಟ್ರೇಲಿಯಾಕ್ಕೆ ತೆರಳಲಿರುವ ತಂಡದಲ್ಲಿ ಆಯ್ಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಲು ಯಾದವ್ ಅವರಿಗೆ ಈ ಅದ್ಭುತ ಅವಕಾಶ ಸಿಕ್ಕಿದೆ.


ವಾರ್ನರ್ ಬಗ್ಗೆ  ಹೇಳಿದ್ದು ಹೀಗೆ?


ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಬಗ್ಗೆ ಮಾತನಾಡಿದ ಗವಾಸ್ಕರ್, 'ವಾರ್ನರ್ ಅವರ ವೃತ್ತಿಜೀವನದ ಈ ಹಂತದಲ್ಲಿ, ಅವರು ತಮ್ಮನ್ನು ಹೊರತುಪಡಿಸಿ ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ. ಕಳೆದ ವರ್ಷ ಅವರಿಗೆ ಉತ್ತಮವಾಗಿಲ್ಲ, ಆದರೆ ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಬ್ಯಾಟ್‌ನೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಾರೆ.


ಇದನ್ನೂ ಓದಿ : ಈ ಮೂರು ಕಾರಣಗಳಿಂದ CSK IPL 2022 ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.