IPL 2022: 4 ವರ್ಷಗಳ ನಂತರ ಐಪಿಎಲ್‌ಗೆ ಸೂಪರ್‌ಸ್ಟಾರ್ ಆಟಗಾರನ ಪ್ರವೇಶ

IPL 2022 ಮಾರ್ಚ್ 26 ರಿಂದ ಪ್ರಾರಂಭವಾಗುತ್ತಿದೆ. ಈ ಐಪಿಎಲ್‌ನಲ್ಲಿ ನಾಲ್ಕು ವರ್ಷಗಳ ನಂತರ ಸ್ಟಾರ್ ಆಟಗಾರ ಮರಳಿದ್ದಾರೆ. ಈ ಆಟಗಾರ ತನ್ನ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾನೆ.

Written by - Yashaswini V | Last Updated : Mar 25, 2022, 02:04 PM IST
  • IPL 2022 ಮಾರ್ಚ್ 26 ರಿಂದ ಪ್ರಾರಂಭವಾಗುತ್ತಿದೆ
  • ಈ ಆಟಗಾರ 4 ವರ್ಷಗಳ ನಂತರ ಐಪಿಎಲ್‌ಗೆ ಮರಳಿದ್ದಾರೆ
  • ಈ ಆಟಗಾರನನ್ನು ಪಂಜಾಬ್ ಕಿಂಗ್ಸ್ 55 ಲಕ್ಷಕ್ಕೆ ಖರೀದಿಸಿದೆ
IPL 2022: 4 ವರ್ಷಗಳ ನಂತರ ಐಪಿಎಲ್‌ಗೆ ಸೂಪರ್‌ಸ್ಟಾರ್ ಆಟಗಾರನ ಪ್ರವೇಶ title=
Rishi dhawan in ipl

IPL 2022: ಐಪಿಎಲ್‌ನಲ್ಲಿ ಆಡಬೇಕೆಂಬುದು ಬಹುತೇಕ ಎಲ್ಲಾ ಕ್ರಿಕೆಟಿಗರ ಕನಸಾಗಿರುತ್ತದೆ. ಐಪಿಎಲ್‌ನಲ್ಲಿ ಆಡುವ ಮೂಲಕ ಆಟಗಾರರು ಹಣ ಮತ್ತು ಖ್ಯಾತಿ ಎರಡನ್ನೂ ಪಡೆಯುತ್ತಾರೆ. ಐಪಿಎಲ್ ಮೆಗಾ ಹರಾಜು 2022 ರಲ್ಲಿ, ಪಂಜಾಬ್ ಕಿಂಗ್ಸ್ ಬಲಿಷ್ಠ ಆಟಗಾರನನ್ನು ಖರೀದಿಸಿದೆ. ಈ ಮೂಲಕ ಈ ಆಟಗಾರ ನಾಲ್ಕು ವರ್ಷಗಳ ನಂತರ ಐಪಿಎಲ್‌ಗೆ ಮರಳುತ್ತಿದ್ದಾರೆ. 

ನಾಲ್ಕು ವರ್ಷಗಳ ನಂತರ ಐಪಿಎಲ್‌ಗೆ ಮರಳಿದ್ದಾರೆ ಈ ಸ್ಟಾರ್ ಆಟಗಾರ :
ಐಪಿಎಲ್‌ (IPL) ಮೆಗಾ ಹರಾಜಿನಲ್ಲಿ ದೇಶೀಯ ಕ್ರಿಕೆಟ್‌ನ ಸ್ಟಾರ್ ಆಟಗಾರ ರಿಷಿ ಧವನ್ ಅವರನ್ನು ಪಂಜಾಬ್ ಕಿಂಗ್ಸ್ 55 ಲಕ್ಷ ರೂ.ಗೆ ಖರೀದಿಸಿದೆ. ಧವನ್ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಧವನ್ ತಮ್ಮ ಉಗ್ರ ಬ್ಯಾಟಿಂಗ್ ಮತ್ತು ಕಿಲ್ಲರ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಸದ್ಯಕ್ಕೆ ರಿಷಿ ಧವನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರಿಷಿ ಧವನ್‌ಗೆ ಅವಕಾಶ ಸಿಕ್ಕರೆ ಇಡೀ ವಿಶ್ವದಲ್ಲೇ ಉತ್ತಮ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಬಹುದು ಎಂಬುದು ಕ್ರಿಕೆಟ್ ಪಂಡಿತರ ನಂಬಿಕೆ. 

ಇದನ್ನೂ ಓದಿ- ಈ ಮೂರು ಕಾರಣಗಳಿಂದ CSK IPL 2022 ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚು ..!

ನಾಲ್ಕು ವರ್ಷಗಳ ನಂತರ ಐಪಿಎಲ್‌ಗೆ ರೀಎಂಟ್ರಿ:
ರಿಷಿ ಧವನ್  (Rishi Dhawan) ತಮ್ಮ ಐಪಿಎಲ್ ವೃತ್ತಿಜೀವನವನ್ನು ಪಂಜಾಬ್ ಕಿಂಗ್ಸ್ ತಂಡದೊಂದಿಗೆ ಪ್ರಾರಂಭಿಸಿದರು, ಆದರೆ ನಂತರ ಅವರು ಐಪಿಎಲ್‌ನಲ್ಲಿ ಯಾವುದೇ ಪವಾಡವನ್ನು ತೋರಿಸಲು ಸಾಧ್ಯವಾಗಲಿಲ್ಲ. 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಅದೇ ಸಮಯದಲ್ಲಿ, ಅವರು ಕೊನೆಯದಾಗಿ IPL ನಲ್ಲಿ KKR ಪರ ಆಡಿದ್ದರು. ಧವನ್‌ಗೆ ಐಪಿಎಲ್‌ನಲ್ಲಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿಲ್ಲ. ರಿಷಿ ಧವನ್ 13 ಐಪಿಎಲ್ ಪಂದ್ಯಗಳಲ್ಲಿ 153 ರನ್ ಗಳಿಸಿದ್ದಾರೆ.

ಇದನ್ನೂ ಓದಿ- CSK : ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದಿಂದ ಕೆಳಗಿಳಿದ ಎಂಎಸ್ ಧೋನಿ!

ದೇಶಿ ಟೂರ್ನಿಯಲ್ಲಿ ಶಕ್ತಿ ಪ್ರದರ್ಶನ: 
ರಿಷಿ ಧವನ್ 2016ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅವರು ಮೂರು ODI ಪಂದ್ಯಗಳನ್ನು ಆಡಿದ್ದಾರೆ.   ವಿಜಯ್ ಹಜಾರೆ ಟ್ರೋಫಿ 2020-21 ಋತುವಿನಲ್ಲಿ ಹಿಮಾಚಲ ತಂಡದ ನಾಯಕ ರಿಷಿ ಧವನ್ ಅದ್ಭುತ ಆಟ ಪ್ರದರ್ಶಿಸಿದರು. ಧವನ್ 8 ಪಂದ್ಯಗಳಲ್ಲಿ 458 ರನ್ ಹಾಗೂ 17 ವಿಕೆಟ್ ಪಡೆದಿದ್ದಾರೆ. ಹಿಮಾಚಲ ತಂಡ ಚೊಚ್ಚಲ ಬಾರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಟ್ರೋಫಿ ಗೆದ್ದಿರುವುದಕ್ಕೆ ಧವನ್ ಕೊಡುಗೆ ಅಪಾರ. 2018-19ರ ರಣಜಿ ಟ್ರೋಫಿಯಲ್ಲಿ ರಿಷಿ 519 ರನ್ ಗಳಿಸಿದ್ದಾರೆ. ಅವರು ತುಂಬಾ ಕ್ಲಾಸಿಕ್ ಬ್ಯಾಟ್ ಮಾಡುತ್ತಾರೆ. ರಿಷಿ ಈ ಹಿಂದೆಯೂ ಟೀಂ ಇಂಡಿಯಾ ಪರ ಆಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News