Sunil Gavaskar 74th Birthday: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಇಂದು ತಮ್ಮ 74 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸುನಿಲ್ ಗವಾಸ್ಕರ್ ಅವರು 10 ಜುಲೈ 1949 ರಂದು ಮುಂಬೈನಲ್ಲಿ ಜನಿಸಿದರು. ಗವಾಸ್ಕರ್ ಟೀಂ ಇಂಡಿಯಾಗಾಗಿ ಎಷ್ಟೆಲ್ಲಾ ದಾಖಲೆ ಬರೆದರೂ ಸಹ, ಅವರು ತಮ್ಮ ವೃತ್ತಿಜೀವನದಲ್ಲಿ ಮಾಡಿದ ಆ ಒಂದು ತಪ್ಪಿನಿಂದಾಗಿ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 21 ವರ್ಷದಿಂದ ಟೆಸ್ಟ್ ಸರಣಿಯಲ್ಲಿ Team Indiaವನ್ನು ಸೋಲಿಸಲು ಹವಣಿಸುತ್ತಿದೆ ಈ ತಂಡ! ಆದ್ರೆ ಸೋತಿದ್ದು ಅವರೇ…


ಮೊದಲ ODI ವಿಶ್ವಕಪ್ 1975 ರಲ್ಲಿ ಪ್ರಾರಂಭವಾಯಿತು. ಆಗ ODI ಕ್ರಿಕೆಟ್ ಹೊಸದಾಗಿತ್ತು ಮತ್ತು ಕ್ರಿಕೆಟಿಗರು ಟೆಸ್ಟ್ ಆಡಿದಂತೆ ಆಡುತ್ತಿದ್ದರಂತೆ. ಇನ್ನೊಂದು ವಿಚಾರ ಎಂದರೆ ಆಗ 60 ಓವರ್‌ ಗಳ ಏಕದಿನ ಪಂದ್ಯ ನಡೆಯುತ್ತಿತ್ತು. ಮೊದಲ ಏಕದಿನ ವಿಶ್ವಕಪ್‌ ನ ಮೊದಲ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್‌ ನಲ್ಲಿ ನಡೆದಿತ್ತು. ಜೂನ್ 7, 1975 ರಂದು, ಈ ಪಂದ್ಯವನ್ನು ಕ್ರಿಕೆಟ್‌ ನ ಮೆಕ್ಕಾ ಎಂದು ಕರೆಯಲಾಗುವ ಲಾರ್ಡ್ಸ್‌ನಲ್ಲಿ ಆಡಲಾಯಿತು. ನಂತರ ಬೇಸಿಗೆ ಕಾಲ ನಡೆಯುತ್ತಿದ್ದು, ಮೊದಲು ಆಡುತ್ತಿದ್ದ ಇಂಗ್ಲೆಂಡ್ 60 ಓವರ್‌ ಗಳಲ್ಲಿ ನಾಲ್ಕು ವಿಕೆಟ್‌ ಗೆ 334 ರನ್‌ ಗಳ ದೊಡ್ಡ ಸ್ಕೋರ್ ಗಳಿಸಿತು. ಇದು ಆ ಸಮಯದಲ್ಲಿ ಏಕದಿನ ಕ್ರಿಕೆಟ್‌ ನಲ್ಲಿ ಅತಿದೊಡ್ಡ ಸ್ಕೋರ್ ಆಗಿತ್ತು. ಇಂಗ್ಲೆಂಡ್ ಇನ್ನಿಂಗ್ಸ್‌ ನಲ್ಲಿ ಡೆನ್ನಿಸ್ ಅಮಿಸ್ (137) ಶತಕ ಮತ್ತು ಕೀತ್ ಫ್ಲೆಚರ್ (68) ಅರ್ಧಶತಕದ ಕೊಡುಗೆ ನೀಡಿದರು. ಇದರ ನಂತರ, ಕ್ರಿಸ್ ಓಲ್ಡ್ ಕೇವಲ 30 ಎಸೆತಗಳಲ್ಲಿ ಅದ್ಭುತ ಅರ್ಧಶತಕ ಗಳಿಸಿದರು.


ಪಂದ್ಯಾವಳಿಯು ನಂತರ ಎಂಟು ತಂಡಗಳನ್ನು ಒಳಗೊಂಡಿತ್ತು, ಅದನ್ನು ಎರಡು ಗುಂಪುಗಳಲ್ಲಿ ಇರಿಸಲಾಯಿತು, ಪಂದ್ಯಾವಳಿಯ ಸ್ವರೂಪದಲ್ಲಿ ಎರಡು ತಂಡಗಳು ಮುಂದಿನ ಸುತ್ತಿಗೆ (ಸೆಮಿಫೈನಲ್) ಹೋಗಲು ಸಮಾನ ಅಂಕಗಳನ್ನು ಪಡೆದಿದ್ದರೆ, ಉತ್ತಮ ನೆಟ್ ರನ್ ರೇಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತಿತ್ತು. ಅಂದರೆ, ಭಾರತ ಸೋಲಿನ ನಡುವೆಯೂ ಗರಿಷ್ಠ ರನ್ ಗಳಿಸಲು ಪ್ರಯತ್ನಿಸಬೇಕಿತ್ತು. ಭಾರತದ ಇನ್ನಿಂಗ್ಸ್ ಆರಂಭಿಸಿದ ಸುನಿಲ್ ಗವಾಸ್ಕರ್ ಆ ದಿನ ಅವರದೇ ರಾಗದಲ್ಲಿ,  ಟೆಸ್ಟ್‌ನಂತೆ ODIಗಳನ್ನು ಆಡಲು ಪ್ರಾರಂಭಿಸಿದರು. ಇದರಿಂದ ಕೋಪಗೊಂಡ ಭಾರತೀಯ ಪ್ರೇಕ್ಷಕರು ಮೈದಾನಕ್ಕಿಳಿದು ಗಲಾಟೆ ಮಾಡಲು ಶುರು ಮಾಡಿದ್ದರು.  


ಸುನಿಲ್ ಗವಾಸ್ಕರ್ ನಿರಂತರವಾಗಿ ನಿಧಾನಗತಿಯಲ್ಲಿ ಆಡುತ್ತಿರುವುದನ್ನು ಕಂಡ ಭಾರತೀಯ ಪ್ರೇಕ್ಷಕರ ಅಸಮಾಧಾನವು ಎಷ್ಟು ಹೆಚ್ಚಾಯಿತು ಎಂದರೆ ಕೆಲವರು ಮೈದಾನದಲ್ಲಿ ಅವರ ಬಳಿಗೆ ಓಡಿ ಬಂದು ಅವರ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದರು. ಮತ್ತೊಂದೆಡೆ, ಪೆವಿಲಿಯನ್‌ ನಲ್ಲಿ ಕುಳಿತಿದ್ದ ಗವಾಸ್ಕರ್ ಅವರ ಸಹ ಆಟಗಾರರ ಮುಖದಲ್ಲಿ ನಿರಾಶೆ ಸ್ಪಷ್ಟವಾಗಿ ಗೋಚರಿಸಿಸುತ್ತಿತ್ತು.


ತಮಾಷೆಯೆಂದರೆ ಗವಾಸ್ಕರ್ ಈ ಇನ್ನಿಂಗ್ಸ್‌ ನಲ್ಲಿ 174 ಎಸೆತಗಳಲ್ಲಿ ಔಟಾಗದೆ ಕೇವಲ 36 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 20.69 ಆಗಿತ್ತು. ಅವರ ಇನ್ನಿಂಗ್ಸ್‌ ನಿಂದಾಗಿ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಗಿ 202 ರನ್‌ ಗಳಿಂದ ಸೋಲನುಭವಿಸಿತು.


ತಂಡದ ಆಯ್ಕೆಯಿಂದ ಅಸಮಾಧಾನ!


ಈ ವೇಳೆ ಟೀಂ ಇಂಡಿಯಾದ ಮ್ಯಾನೇಜರ್ ಜಿಎಸ್ ರಾಮ್‌ ಚಂದ್ ಡೈಲಿ ಎಕ್ಸ್‌ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, 'ನಾನು ಇಲ್ಲಿಯವರೆಗೆ ನೋಡಿದ ಎಲ್ಲಾ ಪಂದ್ಯಗಳಲ್ಲಿ ಇದು ಅತ್ಯಂತ ನಾಚಿಕೆಗೇಡಿನ ಪ್ರದರ್ಶನವಾಗಿದೆ. ಶಾಟ್ ಹೊಡೆಯಲು ವಿಕೆಟ್ ತುಂಬಾ ನಿಧಾನವಾಗಿತ್ತು. ಆದರೆ ಈ ಪಿಚ್‌ನಲ್ಲಿ ಇಂಗ್ಲೆಂಡ್ 334 ರನ್ ಗಳಿಸಿದ್ದರೆ ಹೀಗೆ ಹೇಳುವುದು ಮೂರ್ಖತನ. ತಂಡದಲ್ಲಿ ನಿರಾಸೆ ಇದೆ. ದೇಶದ ಪ್ರತಿಷ್ಠೆ ಬಹಳ ಮುಖ್ಯ, ಇದನ್ನು ಹೀಗೆ ಕಳೆದುಕೊಳ್ಳಲು ಸಾಧ್ಯವಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದರು.


ವಿಶ್ವಕಪ್‌ ನ ಆಯ್ಕೆ ಸಮಿತಿಯು ವೇಗದ ಬೌಲರ್‌ ಗಳಿಗಿಂತ ಸ್ಪಿನ್ನರ್‌ ಗಳಿಗೆ ಆದ್ಯತೆ ನೀಡಿತ್ತು ಎಂಬುದು ಗವಾಸ್ಕರ್ ಅಸಮಾಧಾನಕ್ಕೆ ಕಾರಣವಾಗಿತ್ತು. ಜೊತೆಗೆ ವೆಂಕಟರಾಘವನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿರುವುದು ಅವರಿಗೆ ಅತೃಪ್ತಿ ತಂದಿದೆ ಎಂಬುದು ಮತ್ತೊಂದು ವದಂತಿ. ಆಗ ಗವಾಸ್ಕರ್ ಅವರು ಈ ಇನ್ನಿಂಗ್ಸ್ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳಲಿಲ್ಲ, ಆದರೆ ಹಲವು ವರ್ಷಗಳ ನಂತರ ಅವರು ತಮ್ಮ ಜೀವನದ ಅತ್ಯಂತ ಕೆಟ್ಟ ಇನ್ನಿಂಗ್ಸ್ ಎಂದು ಒಪ್ಪಿಕೊಂಡರು.


ಆದರೆ ಅದೇ ಸಮಯದಲ್ಲಿ ಅವರು 'ಔಟ್ ಆಫ್ ಫಾರ್ಮ್' ಆಗಲು ಕಾರಣ ಏನು ಎಂಬುದನ್ನು ಸಹ ಹೇಳಿದ್ದರು. “ಪಂದ್ಯದ ವೇಳೆ ನಾನೂ ಕೂಡ ಔಟ್ ಆಗಲು ಯತ್ನಿಸಿದೆ ಆದರೆ ಔಟ್ ಆಗಲಿಲ್ಲ” ಎಂದರು.


ಆ ಸಂದರ್ಭದಲ್ಲಿ ಇತರ ಸಹ ಆಟಗಾರರು ಸಹ ಗವಾಸ್ಕರ್ ಅವರ ಇನ್ನಿಂಗ್ಸ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು. ಪಂದ್ಯದ ನಂತರ ಗವಾಸ್ಕರ್ ಡ್ರೆಸ್ಸಿಂಗ್ ರೂಮ್ ತಲುಪಿದಾಗ, ಯಾವುದೇ ಸಹ ಆಟಗಾರರು ಅವರೊಂದಿಗೆ ಮಾತನಾಡಲಿಲ್ಲ ಎಂದು ಹೇಳಲಾಗಿತ್ತು.


ಇದನ್ನೂ ಓದಿ:  “ವಿಶ್ವಕಪ್ ಸೆಮಿಫೈನಲ್’ಗೆ ಈ 4 ತಂಡಗಳು ಎಂಟ್ರಿಯಾಗಲಿವೆ…”: ಭವಿಷ್ಯ ನುಡಿದ ಸೌರವ್ ಗಂಗೂಲಿ


ಸುನಿಲ್ ಗವಾಸ್ಕರ್ ತಮ್ಮ ವೃತ್ತಿಜೀವನದಲ್ಲಿ 125 ಟೆಸ್ಟ್ ಪಂದ್ಯಗಳಲ್ಲಿ 10,122 ರನ್ ಗಳಿಸಿದ್ದಾರೆ. ಇದರಲ್ಲಿ 34 ಶತಕಗಳು ಮತ್ತು 45 ಅರ್ಧ ಶತಕಗಳು ಸೇರಿವೆ. ಸುನಿಲ್ ಗವಾಸ್ಕರ್ 108 ಏಕದಿನ ಪಂದ್ಯಗಳಲ್ಲಿ 3092 ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.