21 ವರ್ಷದಿಂದ ಟೆಸ್ಟ್ ಸರಣಿಯಲ್ಲಿ Team Indiaವನ್ನು ಸೋಲಿಸಲು ಹವಣಿಸುತ್ತಿದೆ ಈ ತಂಡ! ಆದ್ರೆ ಸೋತಿದ್ದು ಅವರೇ…

Indian Cricket Team: ಟೀಮ್ ಇಂಡಿಯಾ ವಿದೇಶಿ ನೆಲದಲ್ಲಿ ಅನೇಕ ಐತಿಹಾಸಿಕ ಸರಣಿಗಳನ್ನು ಗೆದ್ದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಫೈನಲ್‌ ಗೆ ಪ್ರವೇಶಿಸಿದ ಏಕೈಕ ತಂಡ ಭಾರತ.

Written by - Bhavishya Shetty | Last Updated : Jul 9, 2023, 09:05 AM IST
    • ಟೀಮ್ ಇಂಡಿಯಾ ವಿದೇಶಿ ನೆಲದಲ್ಲಿ ಅನೇಕ ಐತಿಹಾಸಿಕ ಸರಣಿಗಳನ್ನು ಗೆದ್ದಿದೆ
    • ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾವನ್ನು ಸೋಲಿಸಲು ಒಂದು ತಂಡ ಹವಣಿಸುತ್ತಿದೆ
    • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಫೈನಲ್‌ ಗೆ ಪ್ರವೇಶಿಸಿದ ಏಕೈಕ ತಂಡ ಭಾರತ
21 ವರ್ಷದಿಂದ ಟೆಸ್ಟ್ ಸರಣಿಯಲ್ಲಿ Team Indiaವನ್ನು ಸೋಲಿಸಲು ಹವಣಿಸುತ್ತಿದೆ ಈ ತಂಡ! ಆದ್ರೆ ಸೋತಿದ್ದು ಅವರೇ… title=
India vs West Indies

Indian Cricket Team: ಕಳೆದ ಕೆಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್‌ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಭಾರತ ತಂಡವನ್ನು ಟೆಸ್ಟ್ ಸರಣಿಯಲ್ಲಿ ಸೋಲಿಸುವುದು ದೊಡ್ಡ ತಂಡಗಳಿಗೂ ಕೆಲವೊಮ್ಮೆ ಅಸಾಧ್ಯದ ರೀತಿ ತೋರುತ್ತದೆ. ಇನ್ನು ಟೀಮ್ ಇಂಡಿಯಾ ವಿದೇಶಿ ನೆಲದಲ್ಲಿ ಅನೇಕ ಐತಿಹಾಸಿಕ ಸರಣಿಗಳನ್ನು ಗೆದ್ದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಫೈನಲ್‌ ಗೆ ಪ್ರವೇಶಿಸಿದ ಏಕೈಕ ತಂಡ ಭಾರತ. ಇಷ್ಟೇ ಅಲ್ಲ, ಕಳೆದ 21 ವರ್ಷಗಳಿಂದ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾವನ್ನು ಸೋಲಿಸಲು ಒಂದು ತಂಡ ಹವಣಿಸುತ್ತಿದೆ. ಆದರೆ ಆ ತಂಡಕ್ಕೆ ಭಾರತವನ್ನು ಸೋಲಿಸಲೂ ಆಗದೆ ಬ್ಯಾಕ್ ಟು ಬ್ಯಾಕ್ ಎಂಬಂತೆ ವಿಫಲಾಗಿ ಪೇಚಿಗೆ ಸಿಲುಕಿದೆ.

ಇದನ್ನೂ ಓದಿ: 20 ವರ್ಷಗಳ ಬಳಿಕ ಈ ರಾಶಿಗೆ ಕೋಟ್ಯಾಧಿಪತಿ ಯೋಗ: ಉದ್ಯೋಗಿಗಳಿಗೆ ಬಡ್ತಿ- ಹೆಜ್ಜೆಹೆಜ್ಜೆಗೂ ಧನಲಕ್ಷ್ಮೀ ಜೊತೆ ನಿಲ್ಲುವಳು!

ಭಾರತೀಯ ಕ್ರಿಕೆಟ್ ತಂಡ (ಟೀಂ ಇಂಡಿಯಾ) 1 ತಿಂಗಳ ವಿರಾಮದ ನಂತರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಜುಲೈ 12 ರಿಂದ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಕಳೆದ ಎರಡು ದಶಕಗಳಿಂದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸುತ್ತಿದೆ.. 21 ವರ್ಷಗಳಿಂದ ಒಂದೇ ಒಂದು ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಸೋಲಿಸಲು ವಿಂಡೀಸ್ ಗೆ ಸಾಧ್ಯವಾಗಿಲ್ಲ.

ಟೀಂ ಇಂಡಿಯಾ ಕೊನೆಯ ಬಾರಿಗೆ 2002 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. 2002 ರ ನಂತರ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಒಟ್ಟು 8 ಟೆಸ್ಟ್ ಸರಣಿಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ನಾಲ್ಕು ಸರಣಿಗಳು ಭಾರತದಲ್ಲಿ ಮತ್ತು 4 ವೆಸ್ಟ್ ಇಂಡೀಸ್‌ ನಲ್ಲಿ ನಡೆದಿವೆ. ಈ ಎಲ್ಲಾ ಟೆಸ್ಟ್ ಸರಣಿಗಳಲ್ಲಿ ಟೀಂ ಇಂಡಿಯಾ ಗೆದ್ದಿದೆ. ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನೆಲದಲ್ಲಿ ಒಟ್ಟು 51 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ 9 ಪಂದ್ಯಗಳನ್ನು ಗೆದ್ದಿದೆ ಮತ್ತು 16 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ ಮತ್ತು 26 ಪಂದ್ಯಗಳು ಡ್ರಾಗೊಂಡಿವೆ.

ಭಾರತೀಯ ಕ್ರಿಕೆಟ್ ತಂಡವು 1952 ರಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತು. 1970 ರಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 12 ಟೆಸ್ಟ್ ಸರಣಿಗಳು ನಡೆದಿವೆ. ಈ ಪೈಕಿ ಟೀಂ ಇಂಡಿಯಾ 5 ಮತ್ತು ವೆಸ್ಟ್ ಇಂಡೀಸ್ 7 ಸರಣಿಗಳನ್ನು ಗೆದ್ದಿದೆ.

ಮೊದಲ ಟೆಸ್ಟ್ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ

ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್ (ಉಪನಾಯಕ), ಅಲಿಕ್ ಅಥಾನಾಜ್, ಟಾಗೆನರಿನ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಮೆಕೆಂಜಿ, ರೇಮನ್ ವಾರ್ರಿಕ್ ರೀಫರ್, ಜೋಮೆಲ್ ವಾರ್ರಿಕ್ ರೀಫರ್, ಕೆಮರ್ ವಾರ್ರಿಕ್.

ಇದನ್ನೂ ಓದಿ: ವಿಶ್ವ ಕಪ್ ಕ್ರಿಕೆಟ್ ಗಾಗಿ ಭಾರತಕ್ಕೆ ಬರುವುದಿಲ್ಲವೇ ಪಾಕ್ ತಂಡ? ಪ್ರಧಾನಿ ಶಹಬಾಜ್ ಶರೀಫ್ ಕೈಗೊಂಡ ನಿರ್ಧಾರ ಇಲ್ಲಿದೆ

ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತೀಯ ಟೆಸ್ಟ್ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಿತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್ ಮತ್ತು ನವದೀಪ್ ಸೈನಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News