Gavaskar on Shivam Dube : ಅಫ್ಘಾನಿಸ್ತಾನ ವಿರುದ್ಧದ ಟಿ 20 ಸರಣಿಯಲ್ಲಿ ಶಿವಂ ದುಬೆ ಅವರ ಅದ್ಭುತ ಆಟದ ಕಾರಣದಿಂದ ಭಾರತ ಗೆಲುವು ಸಾಧಿಸುವುದು ಸಾಧ್ಯವಾಯಿತು. ಮಾತ್ರವಲ್ಲ ಶಿವಂ ದುಬೆ ಅವರನ್ನು 2024ರ ಟಿ 20 ವಿಶ್ವಕಪ್‌ಗೆ ಪ್ರಬಲ ಸ್ಪರ್ಧಿಯನ್ನಾಗಿ ಮಾಡಿದೆ. ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಬಗ್ಗೆ ಇನ್ನೂ ಗೊಂದಲ ಬಗೆಹರಿದಿಲ್ಲ. ಈ ಮಧ್ಯೆ, ಶಿವಂ ದುಬೆ ಅವರ ನಿರಂತರ ಉತ್ತಮ ಮತ್ತು ಪ್ರಭಾವಶಾಲಿ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರ ನಡುವೆ ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಪಾಂಡ್ಯ ಫಿಟ್ ಆಗಿದ್ದರೂ ಶಿವಂ ದುಬೆ ಅವರನ್ನು ತಂಡದಿಂದ ಕೈಬಿಡುವುದು ಹೇಗೆ ಎನ್ನುವ ಸವಾಲು ಈಗ  ಆಯ್ಕೆದಾರರಿಗೆ ಎದುರಾಗಿದೆ. ಈ ಬಗ್ಗೆ ಸುನಿಲ್ ಗವಾಸ್ಕರ್ ಕೂಡಾ ಮಾತನಾಡಿದ್ದಾರೆ. 


COMMERCIAL BREAK
SCROLL TO CONTINUE READING

ಗವಾಸ್ಕರ್ ಹೇಳಿದ್ದೇನು ? : 
ಒಂದು ವೇಳೆ ಹಾರ್ದಿಕ್ ಪಾಂಡ್ಯ ಫಿಟ್ ಆಗಿದ್ದರೂ, ಶಿವಂ ದುಬೆ ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಪ್ರಯತ್ನವನ್ನು ಶಿವಂ ಈಗಾಗಲೇ ಮಾಡಿದ್ದಾರೆ.  ಶಿವಂ ದುಬೆ ಈ ರೀತಿ ಪ್ರದರ್ಶನ ನೀದುತ್ತಿರುವಾಗ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರ ಯಾರಿಗೇ ಆದರೂ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಒಂದು ವೇಳೆ ಆಯ್ಕೆಗಾರರು ಅವರನ್ನು ಕೈಬಿಡಬೇಕು ಎಂದು ನಿರ್ಧರಿಸಿದರೆ, ಅದು ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದಾರೆ.  


ಇದನ್ನೂ ಓದಿ : ಧರ್ಮದ ಗೋಡೆ ದಾಟಿ ಒಬ್ಬಳನ್ನೇ ಎರಡು ಭಾರೀ ಮದುವೆಯಾದ ಸ್ಟಾರ್‌ ಕ್ರಿಕೆಟರ್‌ ಈತ!


ಎರಡೂ ಪಂದ್ಯಗಳಲ್ಲಿ ಅದ್ಭುತ ಇನ್ನಿಂಗ್ಸ್  : 
ಮೊಹಾಲಿಯಲ್ಲಿ ದುಬೆ ಅಜೇಯ 60 ರನ್ ಗಳಿಸುವ ಮೂಲಕ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಶಿವಂ ದುಬೆ ಅದ್ಭುತ ಪ್ರದರ್ಶನದ ಕಾರಣದಿಂದಲೇ  ಭಾರತ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸುವುದು ಸಾಧ್ಯವಾಯಿತು. ಈ ಪಂದ್ಯದಲ್ಲಿ ಶಿವಂ  ದುಬೆ  ಆಲ್‌ರೌಂಡ್ ಪ್ರದರ್ಶನ ನೀಡಿದ್ದಾರೆ. 


 ಆಟವನ್ನು ಅರ್ಥಮಾಡಿಕೊಂಡಿರುವ ದುಬೆ : 
ಅಂತರಾಷ್ಟ್ರೀಯ ಮಟ್ಟದಲ್ಲಿ ದುಬೆ ಹೊಸ ಆತ್ಮವಿಶ್ವಾಸವನ್ನು ಗವಾಸ್ಕರ್ ಶ್ಲಾಘಿಸಿದ್ದಾರೆ.   ದುಬೆ ತಮ್ಮ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ತುಂಬಾ ಆರಾಮ ದಾಯಕವಾಗಿಯೇ ತಮ್ಮ ಆಟವನ್ನು ಮುಂದುವರೆಸುತ್ತಾರೆ. ಅವರು ಯಾರನ್ನೂ ನಕಲು ಮಾಡದೆ ತಮ್ಮದೇ ಆದ ಆಟವನ್ನು ಆಡುತ್ತಿದ್ದಾರೆ. ಇದೀಗ ದುಬೆ ಕುರಿತು ಸಂಚಲನ ತೀವ್ರಗೊಂಡಿದ್ದು, ಹಾರ್ದಿಕ್ ಫಿಟ್ ಆದ ನಂತರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಸಾಧ್ಯವೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.  


ಇದನ್ನೂ ಓದಿ : Yuvraj Sigh: ಮುಂಬೈ ಇಂಡಿಯನ್ಸ್ ನಾಯಕತ್ವ ಬದಲಾವಣೆಗೆ ಇದುವೇ ಪ್ರಮುಖ ಕಾರಣ: ಯುವರಾಜ್ ಸಿಂಗ್ ಹೇಳಿದ ಸತ್ಯವೇನು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ