IND vs WI 3rd t20I News: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಸ್ಟಾರ್ ಸ್ಫೋಟಕ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಭರ್ಜರಿ ದಾಖಲೆ ಬರೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಇತಿಹಾಸದಲ್ಲಿ ಸೂರ್ಯಕುಮಾರ್ ಯಾದವ್ ಶ್ರೇಷ್ಠ ದಾಖಲೆ ಬರೆದಿದ್ದು, ಇದುವರೆಗೂ ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಟಿ20 ಅಂತರಾಷ್ಟ್ರೀಯ ಮಾದರಿಯ ಮಾಸ್ಟರ್ಸ್ ಎಂದು ಪರಿಗಣಿಸಲ್ಪಟ್ಟಿರುವ ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಈ ಶ್ರೇಷ್ಠ ದಾಖಲೆಯನ್ನು ಸಾಧಿಸಲು ವಿಫಲರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸ್ನೇಹ ಬದಿಗಿಟ್ಟು ತಂಡದ ಗೆಲುವಿಗಾಗಿ ಪಾಂಡ್ಯ ಮಹತ್ವದ ನಿರ್ಧಾರ: ODIನಲ್ಲಿ ದ್ವಿಶತಕ ಸಿಡಿಸಿದ ಈ ಕ್ರಿಕೆಟಿಗ ಪ್ಲೇಯಿಂಗ್ 11ನಿಂದ ಔಟ್!


ವೆಸ್ಟ್ ಇಂಡೀಸ್ ವಿರುದ್ಧ ಗಯಾನಾದಲ್ಲಿ ನಡೆದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 44 ಎಸೆತಗಳಲ್ಲಿ 83 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದ್ದವು. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಅತಿವೇಗದ 100 ಸಿಕ್ಸರ್‌’ಗಳನ್ನು ಪೂರೈಸಿದ ಮೊದಲ ಭಾರತೀಯ ಮತ್ತು ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಸೂರ್ಯಕುಮಾರ್ ಯಾದವ್ ಪಾತ್ರರಾಗಿದ್ದಾರೆ.


ಸೂರ್ಯಕುಮಾರ್ ಯಾದವ್ 49 ಟಿ20 ಅಂತಾರಾಷ್ಟ್ರೀಯ ಇನ್ನಿಂಗ್ಸ್‌’ಗಳಲ್ಲಿ 100 ಸಿಕ್ಸರ್‌’ಗಳನ್ನು ಪೂರೈಸಿದ್ದಾರೆ.


ಅನುಭವಿ ಬ್ಯಾಟ್ಸ್‌ಮನ್‌’ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಟಿ20 ಅಂತರರಾಷ್ಟ್ರೀಯ ಸ್ವರೂಪದ ಮಾಸ್ಟರ್‌ಗಳು ಎಂದು ಪರಿಗಣಿಸಲಾಗಿದೆ. ವಿರಾಟ್ ಕೊಹ್ಲಿ 104 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ಸಿಕ್ಸರ್‌’ಗಳನ್ನು ಪೂರೈಸಿದ್ದರು. ರೋಹಿತ್ ಶರ್ಮಾ 92 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಿಕ್ಸರ್‌’ಗಳ ಶತಕ ಪೂರೈಸಿದ್ದರು. ವಿಶ್ವದ ಅತಿ ವೇಗದ 100 ಟಿ20 ಅಂತಾರಾಷ್ಟ್ರೀಯ ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಎವಿನ್ ಲೂಯಿಸ್ ಹೆಸರಿನಲ್ಲಿದೆ. ಇವರು 42 ಟಿ20 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 100 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ.


ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್:


  • 182-ರೋಹಿತ್ ಶರ್ಮಾ (ಭಾರತ)

  • 173-ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್)

  • 125-ಆರನ್ ಫಿಂಚ್ (ಆಸ್ಟ್ರೇಲಿಯಾ)

  • 124-ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)

  • 123-ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್)

  • 120-ಇಯಾನ್ ಮಾರ್ಗನ್ (ಇಂಗ್ಲೆಂಡ್)

  • 117-ವಿರಾಟ್ ಕೊಹ್ಲಿ (ಭಾರತ)


ಇದನ್ನೂ ಓದಿ: ಏಕದಿನ ವಿಶ್ವಕಪ್’ಗೆ ಟೀಂ ಇಂಡಿಯಾ ಪ್ರಕಟ! ಧೋನಿ ಗರಡಿಯಲ್ಲಿ ಪಳಗಿದ 5 ಆಟಗಾರರಿಗೆ ಅವಕಾಶ ಕೊಟ್ಟ ಸಮಿತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ