Suryakumar Yadav Century : ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ಅಬ್ಬರದಿಂದ ಗೆದ್ದುಕೊಂಡಿತ್ತು, ಆದರೆ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿದ್ದಿಸಿದ್ದಾರೆ, ಆದರೆ ಸೂರ್ಯಕುಮಾರ್ ಕೇವಲ 1 ರನ್ ನಿಂದ ದಾಖಲೆಯೊಂದನ್ನು ಮಿಸ್ ಮಾಡಿಕೊಂಡಿದ್ದಾರೆ. ಪಂದ್ಯದಲ್ಲಿ ಸೂರ್ಯಕುಮಾರ್ ಇನ್ನೂ ಒಂದು ರನ್ ಗಳಿಸಿದ್ದರೆ ಕ್ಯಾಪ್ಟನ್ ರೋಹಿತ್ ಶರ್ಮಾ ದಾಖಲೆ ಮುರಿಯುತ್ತಿದ್ದರು. 


COMMERCIAL BREAK
SCROLL TO CONTINUE READING

ಈ ದಾಖಲೆಯನ್ನು ಕಳೆದುಕೊಂಡ ಸೂರ್ಯ


ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 6 ಸಿಕ್ಸರ್ ಒಳಗೊಂಡ 117 ರನ್ ಗಳಿಸಿದರು. ಇವರ ಇನ್ನಿಂಗ್ಸ್ ನೋಡಿ ಎದುರಾಳಿ ಬೌಲರ್‌ಗಳು ಬೆರಳು ಕಚ್ಚಿಕೊಂಡಿದ್ದಾರೆ. ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಶ್ರೀಲಂಕಾ ವಿರುದ್ಧ ಕೇವಲ 43 ಎಸೆತಗಳಲ್ಲಿ 118 ರನ್ ಗಳಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಸೂರ್ಯಕುಮಾರ್ ಯಾದವ್ ಕೇವಲ 117 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ, ಅವರು ಕೇವಲ ಒಂದು ರನ್‌ನಿಂದ ವಿಶ್ವ ದಾಖಲೆ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.


ಇದನ್ನೂ ಓದಿ : ಟೀಂ ಇಂಡಿಯಾ ಸೋಲಿಗೆ ಈ ಸ್ಟಾರ್‌ ಆಟಗಾರನೇ ಕಾರಣ! ಅಭಿಮಾನಿಗಳ ಆಕ್ರೋಶ


ಮೂರನೇ ಟಿ20 ಪಂದ್ಯದಲ್ಲಿ ಭಾರತವನ್ನು ಗೆಲ್ಲಲು ಇಂಗ್ಲೆಂಡ್ 216 ರನ್‌ಗಳ ಗುರಿಯನ್ನು ಹೊಂದಿತ್ತು, ಇದಕ್ಕೆ ಟೀಂ ಇಂಡಿಯಾದ ಅಗ್ರ ಮೂರು ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾದರು. ಆ ನಂತರ ಸೂರ್ಯಕುಮಾರ್ ಯಾದವ್ ರನ್ ಗಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಮೈದಾನದ ಪ್ರತಿಯೊಂದು ಕಡೆ ಸ್ಟ್ರೋಕ್ ಮಾಡಿದರು. ಅವರ ಬ್ಯಾಟಿಂಗ್ ಗೆ ಬ್ರಿಟಿಷ್ ಅಭಿಮಾನಿಗಳು ಕೂಡ ಹದಿ ಹೊಗಳಿದ್ದಾರೆ. ಸೂರ್ಯಕುಮಾರ್ 48 ಎಸೆತಗಳಲ್ಲಿ ಶತಕ ಸಿಡಿಸಿದರು.


5ನೇ ಟೀಂ ಇಂಡಿಯಾ ಆಟಗಾರನಾಗಿ ಸೂರ್ಯಕುಮಾರ್


ಸೂರ್ಯಕುಮಾರ್ ಯಾದವ್ ಕ್ರಿಕೆಟ್‌ನ ಅತ್ಯಂತ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಐದನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸುರೇಶ್ ರೈನಾ ಮತ್ತು ದೀಪಕ್ ಹೂಡಾ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ ವೈಟ್ ಬಾಲ್ ಕ್ರಿಕೆಟ್ ನಲ್ಲಿ 4 ಶತಕ ಸಿಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್‌ಗೆ ಫೇಮಸ್. ಯಾವುದೇ ಪಿಚ್‌ನಲ್ಲೂ ವಿಕೆಟ್ ಪಡೆಯುವ ಸಾಮರ್ಥ್ಯ ಅವರಲ್ಲಿದೆ.


ಇದನ್ನೂ ಓದಿ : ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಕಾರಣವಾದ್ರಾ ಈ ಆಟಗಾರರು!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ