Suryakumar Yadav IND vs SL 3rd ODI: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಜನವರಿ 15 ರಂದು ತಿರುವನಂತಪುರದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪ್ರಸ್ತುತ 2-0 ಮುನ್ನಡೆಯಲ್ಲಿದೆ. ಆದ್ದರಿಂದ ಕೊನೆಯ ODI ಗೆ ನಾಯಕ ರೋಹಿತ್ ಶರ್ಮಾ ಸ್ಟಾರ್ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಅವರಿಗೆ ಪ್ಲೇಯಿಂಗ್ 11 ರಲ್ಲಿ ಅವಕಾಶ ನೀಡಬಹುದು ಎಂದು ನಂಬಲಾಗಿದೆ. ಈ ಸರಣಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Sandeep Lamichhane: ಸ್ಟಾರ್ ಕ್ರಿಕೆಟಿಗನ ಮೇಲೆ ಅತ್ಯಾಚಾರ ಆರೋಪ: 20 ಲಕ್ಷ ಖರ್ಚು ಮಾಡಿ ಜಾಮೀನು ಪಡೆದ ಆಟಗಾರ


ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ನಾಯಕ ರೋಹಿತ್ ಅವರ ಮೊದಲ ಆಯ್ಕೆ ಶ್ರೇಯಸ್ ಅಯ್ಯರ್ ಆಗಿದ್ದರು. ಆದರೆ ಅವರು ಈ ಎರಡೂ ಪಂದ್ಯಗಳಲ್ಲಿ ನಾಯಕನ ನಂಬಿಕೆಯನ್ನು ಉಳಿಸಿಕೊಳ್ಳಲಿ ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಸರಣಿಯ ಕೊನೆಯ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್ ಪ್ಲೇಯಿಂಗ್ 11 ರ ಭಾಗವಾಗಬಹುದು. ಸದ್ಯ ಅವರೂ ಅತ್ಯಂತ ಮಾರಕ ಫಾರ್ಮ್‌ನಲ್ಲಿದ್ದಾರೆ. ತಮ್ಮ ಕೊನೆಯ ಅಂತಾರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಶತಕವನ್ನೂ ಗಳಿಸಿದ್ದರು.


ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 24 ಎಸೆತಗಳನ್ನು ಎದುರಿಸಿ ಕೇವಲ 28 ರನ್‌ಗಳ ಕೊಡುಗೆ ನೀಡಿದರು. ಈ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಕೇವಲ 3 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಸರಣಿಯ ಎರಡನೇ ಪಂದ್ಯದಲ್ಲಿ, ಶ್ರೇಯಸ್ ಅಯ್ಯರ್ 33 ಎಸೆತಗಳಲ್ಲಿ 28 ರನ್ಗಳ ಇನ್ನಿಂಗ್ಸ್ ಅನ್ನು ಆಡಿದರು, ಇದರಲ್ಲಿ 5 ಬೌಂಡರಿಗಳು ಹೊರಬಂದಿದ್ದವು. ಶ್ರೇಯಸ್ ಅಯ್ಯರ್ ಅವರ ಈ ಕಳಪೆ ಪ್ರದರ್ಶನ ಈಗ ಅವರಿಗೆ ಅವಕಾಶ ವಂಚನೆ ಮಾಡಬಹುದು.


2022 ರಲ್ಲಿ ಅದ್ಭುತ ಪ್ರದರ್ಶನ:


2022 ರ ವರ್ಷವು ಶ್ರೇಯಸ್ ಅಯ್ಯರ್ ಅವರಿಗೆ ಬಹಳ ಸ್ಮರಣೀಯವಾಗಿದೆ. ಕಳೆದ ವರ್ಷ 17 ಏಕದಿನ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ 724 ರನ್ ಗಳಿಸಿದ್ದರು. ಆ ವರ್ಷ ಭಾರತದ ಪರ ODIಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಶ್ರೇಯಸ್ ಅಯ್ಯರ್ ಇದುವರೆಗೆ ಟೀಮ್ ಇಂಡಿಯಾ ಪರ 7 ಟೆಸ್ಟ್, 42 ODI ಮತ್ತು 49 T20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಈ ವರ್ಷದ ಆರಂಭ ಅವರಿಗೆ ಚೆನ್ನಾಗಿಲ್ಲ.


ಇದನ್ನೂ ಓದಿ: IND vs SL: ಟೀಂ ಇಂಡಿಯಾದ ಅನುಭವಿಯ ಆರೋಗ್ಯದಲ್ಲಿ ದಿಢೀರ್ ಏರುಪೇರು: ತಡರಾತ್ರಿ ಮನೆಗೆ ಹಿಂತಿರುಗಿದ ಆಟಗಾರ


ಸೂರ್ಯಕುಮಾರ್ ಯಾದವ್ ಈ ಸಮಯದಲ್ಲಿ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರು. ಟೀಂ ಇಂಡಿಯಾ ಪರ ಇದುವರೆಗೆ 16 ಏಕದಿನ ಹಾಗೂ 45 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ ಸೂರ್ಯಕುಮಾರ್ ಯಾದವ್ 32.0 ಸರಾಸರಿಯಲ್ಲಿ 384 ರನ್ ಗಳಿಸಿದ್ದರೆ, ಟಿ20ಯಲ್ಲಿ 3 ಶತಕ ಸೇರಿದಂತೆ 46.41 ಸರಾಸರಿಯಲ್ಲಿ 1578 ರನ್ ಗಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.