ODI World Cup 2023 Qualifiers: ODI ವಿಶ್ವಕಪ್ 2023 ಈ ವರ್ಷದ ಅಕ್ಟೋಬರ್-ನವೆಂಬರ್‌ ನಲ್ಲಿ ಭಾರತವು ಆತಿಥ್ಯ ವಹಿಸಲಿದೆ. ಪ್ರಸ್ತುತ ಹರಾರೆಯಲ್ಲಿ ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯುತ್ತಿದ್ದು, ಇದರಲ್ಲಿ ಒಬ್ಬ ಆಟಗಾರನ ಫ್ಲಾಪ್ ಶೋ ನಡೆಯುತ್ತಿದೆ. ಈ ಆಟಗಾರ ಭಾರತೀಯ ಮೂಲದವನು ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 33 ಎಸೆತ, 14 ಸಿಕ್ಸರ್, 9 ಬೌಂಡರಿ! ಅತೀ ವೇಗವಾಗಿ ಶತಕ ಸಿಡಿಸಿ ತಲ್ಲಣ ಮೂಡಿಸಿದ್ದು ಭಾರತದ ಈ ಕಿಲಾಡಿ!


ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಈ ಆಟಗಾರನ ಫ್ಲಾಪ್-ಶೋ


ಏಕದಿನ ವಿಶ್ವಕಪ್‌ ನ 8 ತಂಡಗಳು ನಿಗದಿಯಾಗಿದ್ದು, ಅರ್ಹತಾ ಪಂದ್ಯಗಳು ಕೇವಲ 2 ಸ್ಥಾನಗಳಿಗೆ ಮಾತ್ರ ನಡೆಯುತ್ತಿವೆ. ಜಿಂಬಾಬ್ವೆಯಲ್ಲಿ 10 ತಂಡಗಳ ನಡುವೆ ಅರ್ಹತಾ ಪಂದ್ಯಗಳು ನಡೆಯುತ್ತಿವೆ. ಇದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಂದರೆ ಯು ಎಸ್ ಎ ತಂಡವೂ ಆಡುತ್ತಿದೆ. ಈ ತಂಡವು ಏಕದಿನ ವಿಶ್ವಕಪ್‌ ನಲ್ಲಿ ಸ್ಥಾನ ಪಡೆಯಲು ಮೊದಲ ಬಾರಿಗೆ ಅರ್ಹತಾ ಸುತ್ತಿಗೆ ಪ್ರವೇಶಿಸಿದೆ. ಆದರೆ, ವಿವಿಧ ದೇಶಗಳ ಆಟಗಾರರಿಂದ ತುಂಬಿರುವ ಈ ತಂಡದ ಪ್ರದರ್ಶನ ತೀರಾ ಕಳಪೆಯಾಗಿದೆ. USA ತಂಡದ ಆಟಗಾರನ ಫ್ಲಾಪ್-ಶೋ ಮುಂದುವರಿದಿದೆ. ಇದೀಗ ಅವರ ಪ್ರದರ್ಶನದಂತೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೂ ಸವಾಲಿನ ಸಂಗತಿ.


ಭಾರತೀಯ ಮೂಲದ ಸುಶಾಂತ್ ಮೊದಾನಿ ಅಮೆರಿಕ ತಂಡದಲ್ಲಿ ಸ್ಥಾನ ಪಡೆದಿದ್ದರೂ ಬ್ಯಾಟ್‌ ನಿಂದ ಪ್ರಭಾವಿತರಾಗಲು ಸಾಧ್ಯವಾಗಿಲ್ಲ. ಅಮೆರಿಕವು ಅರ್ಹತಾ ಪಂದ್ಯಗಳಿಗೆ (ವಿಶ್ವಕಪ್ 2023) ಪ್ಲೇಯಿಂಗ್-11 ರಲ್ಲಿ ಸುಶಾಂತ್ ಮೊದಾನಿಯನ್ನು ಸೇರಿಸಿದೆ. ಆದರೆ ಅವರು ಮೊದಲ ಮೂರು ಪಂದ್ಯಗಳಲ್ಲಿ ನಿರಾಶೆಗೊಳಿಸಿದ್ದಾರೆ. ಈ ಮೂಲಕ ತಂಡದ ನಂಬಿಕೆಗೆ ಮೋಸ ಎಸಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 14 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನಂತರ ನೇಪಾಳ ವಿರುದ್ಧದ ಎರಡನೇ ಪಂದ್ಯದಲ್ಲಿ 42 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ನೆದರ್ಲೆಂಡ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಖಾತೆ ತೆರೆಯದೆ ಔಟಾದರು.


ಇದನ್ನೂ ಓದಿ:  5 ವರ್ಷಗಳ ಬಳಿಕ ನಡೆದ ಭಾರತ-ಪಾಕ್ ಪಂದ್ಯದಲ್ಲಿ ಹೊಡೆದಾಡಿಕೊಂಡ ಕೋಚ್-ಆಟಗಾರರು! ವಿಡಿಯೋ


34 ವರ್ಷದ ಸುಶಾಂತ್ ಅವರು 5 ಜನವರಿ 1989 ರಂದು ಮಹಾರಾಷ್ಟ್ರದ ಜಲ್ನಾದಲ್ಲಿ ಜನಿಸಿದರು. ಅವರು 2021 ರಲ್ಲಿ ಅಮೆರಿಕ ತಂಡಕ್ಕೆ ಪಾದಾರ್ಪಣೆ ಮಾಡಿದರು. ಸುಶಾಂತ್ ಇದುವರೆಗೆ 28 ​​ODI ಮತ್ತು 5 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ODIಗಳಲ್ಲಿ, ಅವರು ಶತಕ ಮತ್ತು 5 ಅರ್ಧ ಶತಕಗಳ ಸಹಾಯದಿಂದ 761 ರನ್ ಗಳಿಸಿದ್ದಾರೆ, ಆದರೆ T20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ಅರ್ಧಶತಕದೊಂದಿಗೆ 93 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು ಟಿ 20 ಅಂತರರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿದ್ದು, ಒಂದು ವಿಕೆಟ್ ಪಡೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ