India vs Pakistan Huge Brawl: ಭಾರತ ಆಯೋಜಿಸಿರುವ ಸಫ್ (South Asian Football Federation) ಫುಟ್ಬಾಲ್ ಪಂದ್ಯಾವಳಿ ಜೂನ್ 21 ರಂದು ಅಂದರೆ ನಿನ್ನೆ ರಾತ್ರಿ ಆರಂಭವಾಗಿದೆ. ಮೊದಲ ದಿನ ಎರಡು ಪಂದ್ಯಗಳು ನಡೆದಿದ್ದು, ಮೊದಲ ಪಂದ್ಯದಲ್ಲಿ ಕುವೈತ್ ಮತ್ತು ನೇಪಾಳ ತಂಡಗಳು ಸೆಣಸಾಡಿದರೆ, ಎರಡನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಿತು.
ಇದನ್ನೂ ಓದಿ: 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಈ ಕಿಲಾಡಿ Team Indiaಗೆ ಎಂಟ್ರಿ: ಬುಮ್ರಾ ಸ್ಥಾನಕ್ಕೆ ಬರುತ್ತಾ ಕುತ್ತು!
ಸುಮಾರು ಐದು ವರ್ಷಗಳ ನಂತರ ಎರಡೂ ದೇಶಗಳ ಫುಟ್ಬಾಲ್ ತಂಡಗಳು ಮುಖಾಮುಖಿಯಾಗಿವೆ. ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಕ್ರಿಕೆಟ್ ಆಗಿರಲಿ, ಫುಟ್ ಬಾಲ್ ಆಗಿರಲಿ ಹೈವೋಲ್ಟೇಜ್ ಆಗಿರುತ್ತದೆ. ಅಂತೆಯೇ ನಿನ್ನೆ ನಡೆದ ಈ ಪಂದ್ಯದಲ್ಲಿ ಉಭಯ ದೇಶಗಳ ಆಟಗಾರರು ಸೆಣಸಾಡುತ್ತಿರುವ ದೃಶ್ಯ ಕಂಡು ಬಂತು.
ಭಾರತದ ಸ್ಟಾರ್ ಫುಟ್ಬಾಲ್ ಆಟಗಾರ ಮತ್ತು ಹಾಲಿ ತಂಡದ ನಾಯಕ ಸುನಿಲ್ ಛೆಟ್ರಿ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತವು ಬುಧವಾರ ನಡೆದ SAFF ಫುಟ್ಬಾಲ್ ಚಾಂಪಿಯನ್‌ಶಿಪ್ ನಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 4-0 ಅಂತರದ ಜಯ ಸಾಧಿಸಿತು. ಇದರೊಂದಿಗೆ ಅಂತಾರಾಷ್ಟ್ರೀಯ ಫುಟ್‌ಬಾಲ್ ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಏಷ್ಯಾದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಛೆಟ್ರಿ ಪಾತ್ರರಾಗಿದ್ದಾರೆ. ಛೆಟ್ರಿ ಇದುವರೆಗೆ ಒಟ್ಟು 90 ಗೋಲು ಗಳಿಸಿದ್ದಾರೆ. ಮತ್ತೊಂದೆಡೆ ಇರಾನ್ ನ ಅಲ್ ದೇಯ್ 109 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಪಂದ್ಯದ ಆರಂಭದಿಂದಲೂ ಭಾರತ ಮೇಲುಗೈ ಸಾಧಿಸಿತ್ತು. ತಂಡದಿಂದ ನಿರಂತರ ಗೋಲುಗಳು ದಾಖಲಾಗುತ್ತಿದ್ದವು. ಇದೇ ವೇಳೆ ಪಾಕಿಸ್ತಾನದ ಆಟಗಾರನೊಬ್ಬ ಭಾರತದ ಕೋಚ್ ಜೊತೆ ಜಗಳವಾಡುತ್ತಿದ್ದ ದೃಶ್ಯ ಕಂಡು ಬಂತು. ಬಾಲ್ ಅಂಕಣದ ಹೊರಗೆ ಹೋಯಿತು, ಅಲ್ಲಿಯೇ ಭಾರತೀಯ ಕೋಚ್ ನಿಂತಿದ್ದರು. ಅವರನ್ನು ಕಂಡಾಗ ಪಾಕಿಸ್ತಾನಿ ಆಟಗಾರ ಆತನಿಗೆ ಏನನ್ನೋ ಹೇಳಲು ಶುರುಮಾಡಿದ್ದಾನೆ. ತಕ್ಷಣವೇ ಇತರ ಪಾಕಿಸ್ತಾನಿ ಆಟಗಾರರು ಕೋಚ್ ಜೊತೆ ವಾದಿಸಲು ಬಂದರು. ಪಾಕಿಸ್ತಾನ ತಂಡದ ಕೋಚ್ ಕೂಡ ಈ ಹೋರಾಟಕ್ಕೆ ಧುಮುಕಿದ್ದು ಕಂಡುಬಂತು. ಪಾಕ್ ಆಟಗಾರರು ಸುತ್ತುವರಿದಿದ್ದ ಕೋಚ್ ಅನ್ನು ನೋಡಿದ ಭಾರತೀಯ ಆಟಗಾರರು ನೆರವಿಗೆ ಬಂದರು. ಸ್ವಲ್ಪ ಸಮಯದ ನಂತರ ಗಲಭೆ ಶಾಂತವಾಯಿತು.
Stimac in Action 😅 #indianfootball #SAFF2023 #SAFFChampionship #INDvsPAK #INDPAK full vedio :https://t.co/K1LFpPptfW pic.twitter.com/eV1MYgcgte
— Karthik ks (@RudraTrilochan) June 21, 2023
ಇದನ್ನೂ ಓದಿ: IND vs WI: ನಡೆಯುವುದಿಲ್ಲ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ! ಹೊರಬಿತ್ತು ಆಘಾತಕಾರಿ ಅಪ್ಡೇಟ್
ಈ ವಿವಾದದ ನಂತರ, ಮ್ಯಾಚ್ ರೆಫರಿ ಕ್ರಮ ಕೈಗೊಂಡರು. ಭಾರತೀಯ ಕೋಚ್ ಸ್ಟಿಮ್ಯಾಕ್ ಅವರಿಗೆ ರೆಡ್ ಕಾರ್ಡ್ ತೋರಿಸಿ ಮೈದಾನದಿಂದ ಹೊರಗಟ್ಟಿದರು. ಇದರೊಂದಿಗೆ ಪಾಕ್ ಕೋಚ್ ಶಹಜಾದ್ ಅನ್ವರ್ ಕೂಡ ರೆಫರಿ ಕ್ರಮಕ್ಕೆ ಬಲಿಯಾಗಬೇಕಾಯಿತು. ಅವರಿಗೆ ಎಲ್ಲೋ ಕಾರ್ಡ್ ತೋರಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ