T20 World Cup 2021: ಫೈನಲ್ ಆಡುವ ತಂಡಗಳ ಬಗ್ಗೆ ಬೆನ್ ಸ್ಟೋಕ್ಸ್ ಭವಿಷ್ಯ
‘ಎ’ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ‘ಬಿ’ ಗುಂಪಿನಲ್ಲಿ ಪಾಕಿಸ್ತಾನ ತಲಾ 3 ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ರೇಸ್ನಲ್ಲಿಅಗ್ರಸ್ಥಾನದಲ್ಲಿವೆ.
ನವದೆಹಲಿ: ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 8 ವಿಕೆಟ್ ಗಳಿಂದ ಬಗ್ಗುಬಡಿಯುವ ಮೂಲಕ ಇಂಗ್ಲೆಂಡ್(England) ತಂಡ ಸೆಮಿಫೈನಲ್ ಟಿಕೆಟ್ ಖಾತ್ರಿಪಡಿಸಿಕೊಂಡಿದೆ. ‘ಎ’ ಗುಂಪಿನಲ್ಲಿ ತಾನಾಡಿರುವ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡವು ಪ್ರಸಕ್ತ ಟಿ-20 ವಿಶ್ವಕಪ್ ಟೂರ್ನಿ(T20 World Cup 2021)ಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ.
ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯ ತಂಡಗಳಿಗೆ ಸೋಲಿನ ರುಚಿ ತೋರಿಸಿರುವ ಇಂಗ್ಲೆಂಡ್ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಈಗ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಫೈನಲ್ ನಲ್ಲಿ ಆಡುವ ತಂಡಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ‘ಎ’ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ‘ಬಿ’ ಗುಂಪಿನಲ್ಲಿ ಪಾಕಿಸ್ತಾನ(Pakistan) ತಲಾ 3 ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ರೇಸ್ನಲ್ಲಿಅಗ್ರಸ್ಥಾನದಲ್ಲಿವೆ. ಸದ್ಯ ಸೆಮಿಫೈನಲ್ ಎಂಟ್ರಿಗೆ ಬಲಿಷ್ಠ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ.
ಇದನ್ನೂ ಓದಿ: T20 World Cup 2021 : ಗೇಮ್ ಪ್ಲಾನ್ ಸಿದ್ಧಪಡಿಸಿದ ಕೊಹ್ಲಿ : ಭಾರತ vs ನ್ಯೂಜಿಲೆಂಡ್ 'ಗೇಮ್ ಓವರ್' ಹೀಗಿರಲಿದೆ!
Semifinals)ನಲ್ಲಿ ಮುಖಾಮುಖಿಯಾಗಲಿವೆ, ಯಾರು ಫೈನಲ್ ಪ್ರವೇಶಿಸುತ್ತಾರೆಂಬುದರ ಬಗ್ಗೆ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ಕುತೂಹಲ ಮೂಡಿಸಿದೆ. ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿರುವ ಬೆನ್ ಸ್ಟೋಕ್ಸ್ ಎಲ್ಲಾ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರಂತೆ. ಪ್ರಸ್ತುತ ತಂಡಗಳ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಯಾವ್ಯಾವ ತಂಡಗಳು ಫೈನಲ್ ಆಡಲಿದ್ದಾರೆಂಬುದರ ಬಗ್ಗೆ ಸ್ಟೋಕ್ಸ್ ಸುಳಿವು ನೀಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ‘ಇಂಗ್ಲೆಂಡ್ vs ಪಾಕಿಸ್ತಾನ್ ಫೈನಲ್??’ ಎಂದು ಸ್ಟೋಕ್ಸ್ ಬರೆದಿರುವುದು ಸಖತ್ ವೈರಲ್ ಆಗಿದೆ.
ಸ್ಟೋಕ್ಸ್(Ben Stokes) ಪ್ರಕಾರ ಈ ಬಾರಿ ಗ್ರೂಪ್ 1 ರಿಂದ ಇಂಗ್ಲೆಂಡ್ ಮತ್ತು ಗ್ರೂಪ್ 2 ರಿಂದ ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಿಸಲಿದೆ. ಈಗಾಗಲೇ ತಲಾ 3 ಗೆಲುವು ಸಾಧಿಸಿರುವ ಉಭಯ ತಂಡಗಳು ಬಾಕಿ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಲಿವೆ. ಬಳಿಕ ಬಲಿಷ್ಠ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿ ವಿಶ್ವಕಪ್ ಚಾಂಪಿಯನ್ ಆಗಲು ಸೆಣಸಾಡಲಿವೆ ಅಂತಾ ಸ್ಟೋಕ್ಸ್ ಟ್ವೀಟ್ ನಲ್ಲಿ ಸುಳಿವು ನೀಡಿದ್ದಾರೆ. ಲೀಗ್ ಹಂತದಲ್ಲಿಯೇ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಹೀಗಾಗಿ ಈ ಎರಡು ತಂಡಗಳೇ ಫೈನಲ್ ಪ್ರವೇಶಿಸಲಿವೆ ಅಂತಾ ಸ್ಟೋಕ್ಸ್ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: T20 WORLD CUP 2021: ಪ್ಲೇಯಿಂಗ್ 11ನಲ್ಲಿ ಈ ಆಟಗಾರನಿಗೆ ಅವಕಾಶ ನೀಡಲು ಕೊಹ್ಲಿ ಏನು ಬೇಕಾದರೂ ಮಾಡಬಹುದು
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ