ನವದೆಹಲಿ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಟಿ-20 ವಿಶ್ವಕಪ್ ಫೈನಲ್ ಪಂದ್ಯ(T20 World Cup 2021 Final)ದಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಚೊಚ್ಚಲ ಟ್ರೋಫಿಯನ್ನು ಎತ್ತಿಹಿಡಿಯಿತು. ಭಾರತ, ಪಾಕಿಸ್ತಾನ ಅಥವಾ ಇಂಗ್ಲೆಂಡ್ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ಇಡೀ ಜಗತ್ತು ನಿರೀಕ್ಷಿಸಿತ್ತು. ಆದರೆ ಹ್ಯಾಟ್ರಿಕ್ ಸಹಿತ 5 ಬಾರಿ ಏಕದಿನ ವಿಶ್ವ ಚಾಂಪಿಯನ್ ಆಗಿರುವ ಆಸೀಸ್ ಆಶ್ಚರ್ಯಕರವಾಗಿ ಗೆಲ್ಲುವ ಮೂಲಕ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದೆ. ಆಸ್ಟ್ರೇಲಿಯಾದ ಈ ವಿಶ್ವಕಪ್ ಗೆಲುವಿಗೆ ದೊಡ್ಡ ಕಾರಣವೆಂದರೆ ಕೆಲ ಪ್ರಬಲ ಮ್ಯಾಚ್ ವಿನ್ನರ್‌ಗಳು. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅಂತಹ ಒಬ್ಬ ಮ್ಯಾಚ್ ವಿನ್ನರ್‌ಗಾಗಿ ತಂಡಗಳು ಕೋಟಿ ಕೋಟಿ ರೂ. ಖರ್ಚು ಮಾಡಲು ಸಿದ್ಧವಾಗಿವೆ.


COMMERCIAL BREAK
SCROLL TO CONTINUE READING

ಈ ಆಸೀಸ್ ಆಟಗಾರ ದುಬಾರಿ ಮೊತ್ತಕ್ಕೆ ಸೇಲ್ ಆಗಬಹುದು


[[{"fid":"222284","view_mode":"default","fields":{"format":"default","field_file_image_alt_text[und][0][value]":"IPL-2022-2.jpg","field_file_image_title_text[und][0][value]":"IPL-2022-2.jpg"},"type":"media","field_deltas":{"1":{"format":"default","field_file_image_alt_text[und][0][value]":"IPL-2022-2.jpg","field_file_image_title_text[und][0][value]":"IPL-2022-2.jpg"}},"link_text":false,"attributes":{"alt":"IPL-2022-2.jpg","title":"IPL-2022-2.jpg","class":"media-element file-default","data-delta":"1"}}]]


IPL 2022ರ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ಮಾರಕ ಆಲ್‌ರೌಂಡರ್ ಮಿಚೆಲ್ ಮಾರ್ಷ್(Mitchell Marsh) ಮೇಲೆ ಅತ್ಯಂತ ದುಬಾರಿ ಮೌಲ್ಯಕ್ಕೆ ಬಿಡ್ ಆಗಬಹುದು ಎಂದು ಹೇಳಲಾಗುತ್ತಿದೆ. ಹೌದು, ಈ ಆಲ್ ರೌಂಡರ್ ಆಟಗಾರ ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನಲ್ಲಿ ಅತಿದೊಡ್ಡ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.  ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ತಂಡಗಳು ಕೂಡ ಈ ಆಟಗಾರನ ಮೇಲೆ ಕಣ್ಣಿಟ್ಟಿದ್ದು, ದೊಡ್ಡ ಮೊತ್ತವನ್ನು ಖರ್ಚು ಮಾಡಲು ಸಿದ್ಧವಾಗಿವೆ. ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಮಾರ್ಷ್ 50 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಇನ್ನಿಂಗ್ಸ್‌ ನಲ್ಲಿ 8 ಬೌಂಡರಿಗಳು ಮತ್ತು 4 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಕಿವೀಸ್ ಬೌಲರ್ ಗಳಿಗೆ ಮನಬಂದಂತೆ ದಂಡಿಸಿದ ಮಾರ್ಷ್ ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನಸೆಳೆದಿದ್ದಾರೆ. ಹೀಗಾಗಿ ಈ ಆಟಗಾರನ ಮೇಲೆ ಫ್ರಾಂಚೈಸಿಗಳು ಕಣ್ಣಿಟ್ಟಿವೆ.


ಇದನ್ನೂ ಓದಿ: ವಿರಾಟ್ ಕೊಹ್ಲಿ ಬಗ್ಗೆ ಶಾಹೀದ್ ಆಫ್ರೀದಿ ಹೇಳಿದ್ದೇನು ಗೊತ್ತೇ ?


ಅದ್ಭುತ ಫಾರ್ಮ್‌ನಲ್ಲಿರುವ ಮಾರ್ಷ್


ಮಿಚೆಲ್ ಮಾರ್ಷ್ ಇತ್ತೀಚೆಗೆ ಅದ್ಭುತ ಫಾರ್ಮ್‌ನಲ್ಲಿರುವ ಆಟಗಾರರಾಗಿದ್ದಾರೆ. ಎದುರಾಳಿ ತಂಡಗಳ ವಿರುದ್ಧ ಅವರು ಅತ್ಯಂತ ಅಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ್ದಾರೆ. ಬಲಿಷ್ಠ ತಂಡಗಳ ಪ್ರಮುಖ ಆಟಗಾರರ ವಿಕೆಟ್ ಗಳನ್ನು ಪಡೆದಯುವುದರ ಜೊತೆಗೆ ಬ್ಯಾಟಿಂಗ್ ನಲ್ಲಿಯೂ ಮಿಂಚುವ ಮೂಲಕ ತಮ್ಮ ತಂಡಕ್ಕೆ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಮಿಚೆಲ್ ಮಾರ್ಷ್ ಟಿ-20 ವಿಶ್ವಕಪ್(ICC T20 World Cup)ನ 5 ಇನ್ನಿಂಗ್ಸ್‌ ಗಳಲ್ಲಿ 2 ಅರ್ಧ ಶತಕ ಸೇರಿದಂತೆ 185 ರನ್ ಗಳಿಸಿದ್ದಾರೆ. ಟಿ-20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದಾಗ ಕೂಡ ಮಾರ್ಷ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡವು 4-1ರಿಂದ ಸೋತಿತು. ಆದರೆ ಈ ಪಂದ್ಯಾವಳಿಯಲ್ಲಿ ಮಾರ್ಷ್ 3 ಅರ್ಧ ಶತಕಗಳನ್ನು ಗಳಿಸಿದ್ದರು. ಬಾಂಗ್ಲಾದೇಶ ಪ್ರವಾಸದಲ್ಲಿಯೂ ಅವರು ಆಲ್ ರೌಂಡರ್ ಆಗಿ ಮಿಂಚಿದ್ದರು.


ಮೆಗಾ ಹರಾಜಿನಲ್ಲಿ ಸದ್ದು ಮಾಡಲಿರುವ ಮಿಚೆಲ್ ಮಾರ್ಷ್   


ಐಪಿಎಲ್ ಹರಾಜಿನಲ್ಲಿ(IPL 2022 Mega Auction) ಎಲ್ಲ ತಂಡಗಳ ಗಮನ ಸದಾ ಆಸ್ಟ್ರೇಲಿಯಾ ಆಟಗಾರರ ಮೇಲಿರುತ್ತದೆ. ಇದಕ್ಕೆ ಕಾರಣ ಆಸೀಸ್ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆಂದು. ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿನಲ್ಲಿಯೂ ಇದೇ ರೀತಿ ಫಲಿತಾಂಶ ಬರುವ ಸಾಧ್ಯತೆ ಇದೆ. ಎಲ್ಲಾ ತಂಡಗಳು ಮಿಚೆಲ್ ಮಾರ್ಷ್ ಮೇಲೆ ಕೋಟಿ ಕೋಟಿ ರೂ. ಸುರಿಯಲು ಸಿದ್ಧವಾಗಿವೆ. ಹೀಗಾಗಿ ಈ ಆಟಗಾರನು ಐಪಿಎಲ್ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಹರಾಜು ಆಗಬಹುದು ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ: ಐಸಿಸಿ ಹಾಲ್ ಆಫ್ ಫೇಮ್‌ಗೆ ಮಹೇಲಾ ಜಯವರ್ಧನಾ, ಶಾನ್ ಪೊಲಾಕ್, ಜಾನೆಟ್ ಬ್ರಿಟಿನ್ ಸೇರ್ಪಡೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.