T20 World Cup 2021: ಅಫ್ಘಾನಿಸ್ತಾನ್ ಮೇಲಿದೆ ಟೀಂ ಇಂಡಿಯಾದ ವಿಶ್ವಕಪ್ ಭವಿಷ್ಯ..!
ಸ್ಕಾಟ್ಲೆಂಡ್ ವಿರುದ್ಧ 86 ರನ್ ಗಳ ಸುಲಭ ಗುರಿಯನ್ನು ಕೇವಲ 6.3 ಓವರ್ ಗಳಲ್ಲಿ ಮುಗಿಸಿದ ಟೀಂ ಇಂಡಿಯಾ ರನ್ ರೇಟ್(+1.619)ಲೆಕ್ಕಾಚಾರದಲ್ಲಿ ಉತ್ತಮ ಸ್ಥಿತಿಯಲ್ಲಿದೆ.
ನವದೆಹಲಿ: ಇಂದು ಸಂಜೆ ಅಬುಧಾಬಿಯ ಶೇಕ್ ಜಾಯೆದ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೇಲೆ ಟೀಂ ಇಂಡಿಯಾದ ವಿಶ್ವಕಪ್(T20 World Cup 2021) ಭವಿಷ್ಯ ನಿಂತಿದೆ. ಗ್ರೂಪ್ A ವಿಭಾಗದಲ್ಲಿ ಈಗಾಗಲೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿವೆ. ಗ್ರೂಪ್ B ವಿಭಾಗದಲ್ಲಿ ಆಡಿದ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ್ ತಂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ.
ಆಡಿರುವ 4 ಪಂದ್ಯಗಳ ಪೈಕಿ 3 ಗೆಲುವು ಸಾಧಿಸಿರುವ ಕೇನ್ ವಿಲಿಯಮ್ಸನ್(Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವು ಭಾನುವಾರ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಗೆಲುವಿಗಾಗಿ ಸೆಣಸಾಟ ನಡೆಸಲಿದೆ. ಭಾರತ ಮತ್ತು ಅಫ್ಘಾನಿಸ್ತಾನ್ ಆಡಿದ 4 ಪಂದ್ಯಗಳಲ್ಲಿ ತಲಾ 2 ಗೆಲುವು ಮತ್ತು ಸೋಲು ಕಂಡಿವೆ. ರನ್ ರೇಟ್ ಆಧಾರದಲ್ಲಿ ಅಫ್ಘಾನ್ ತಂಡಕ್ಕಿಂತಲೂ ಮೇಲಿರುವ ವಿರಾಟ್ ಕೊಹ್ಲಿ ಪಡೆ ಇಂದಿನ ಪಂದ್ಯದ ಫಲಿತಾಂಶದ ಮೇಲೆ ಗಮನ ಕೇಂದ್ರೀಕರಿಸಿದೆ.
ಸ್ಕಾಟ್ಲೆಂಡ್ ವಿರುದ್ಧ ಗೆಲುವು: ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದೇವೆಂದ ವಿರಾಟ್ ಕೊಹ್ಲಿ..!
ನ್ಯೂಜಿಲೆಂಡ್ ವಿರುದ್ಧ ಇಂದು ಅಫ್ಘಾನಿಸ್ತಾನ್(New Zealand vs Afghanistan) ಗೆಲುವು ಸಾಧಿಸಿದರೆ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲು ಸುವರ್ಣಾವಕಾಶ ಸಿಗಲಿದೆ. ಇಲ್ಲದಿದ್ದರೆ ನಾಳೆ ನಮಿಬಿಯಾ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಿ ಕೊಹ್ಲಿ ಪಡೆ ಗಂಟುಮೂಟೆ ಕಟ್ಟಬೇಕಾಗುತ್ತದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾದ ಸೆಮಿಫೈನಲ್ ಪ್ರವೇಶಿಸುವ ಕನಸು ನನಸಾಗಬೇಕಾದ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆಲ್ಲಲೇಬೇಕು.
ಕೋಟ್ಯಂತರ ಭಾರತೀಯ ಕ್ರಿಕೆಟ್ ಪ್ರೇಮಿಗಳು ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ್(NZ vs AFG) ಗೆಲ್ಲಬೇಕೆಂದು ಪ್ರಾರ್ಥಿಸುತ್ತಿದ್ದಾರೆ. ಇಂದಿನ ಮಹತ್ವದ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಲು ಹವಣಿಸುತ್ತಿರುವ ಕಿವೀಸ್ ಪಡೆ ಬಲಿಷ್ಠವಾಗಿದೆ. ಅಫ್ಘಾನಿಸ್ತಾನ್ ತಂಡಕ್ಕೆ ಮಣ್ಣುಮುಕ್ಕಿಸಲು ನ್ಯೂಜಿಲೆಂಡ್ ತಂಡವು ಬೌಲಿಂಗ್ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಆದರೆ ದುರ್ಬಲ ತಂಡವೆನಿಸಿಕೊಂಡರೂ ಅಫ್ಘಾನಿಸ್ತಾನ್ ಅಚ್ಚರಿ ಫಲಿತಾಂಶ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಈ ಪಂದ್ಯವು ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Shane Warne: ಮಾಡೆಲ್ ಗೆ ಅಶ್ಲೀಲ ಸಂದೇಶ ಕಳುಹಿಸಿ ಹೋಟೆಲ್ ರೂಂಗೆ ಬಾ ಎಂದ ಶೇನ್ ವಾರ್ನ್..!
ಸ್ಕಾಟ್ಲೆಂಡ್ ವಿರುದ್ಧ 86 ರನ್ ಗಳ ಸುಲಭ ಗುರಿಯನ್ನು ಕೇವಲ 6.3 ಓವರ್ ಗಳಲ್ಲಿ ಮುಗಿಸಿದ ಟೀಂ ಇಂಡಿಯಾ(Team India) ರನ್ ರೇಟ್(+1.619)ಲೆಕ್ಕಾಚಾರದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ನ್ಯೂಜಿಲೆಂಡ್(+1.277) ಮತ್ತು ಅಫ್ಘಾನಿಸ್ತಾನ್(+1.481) ರನ್ ರೇಟ್ ಹೊಂದಿವೆ. ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಗೆದ್ದರೆ ನಾಳಿನ ಪಂದ್ಯದಲ್ಲಿ ನಮಿಬಿಯಾ ವಿರುದ್ಧ ಭಾರತ ಉತ್ತಮ ರನ್ ರೇಟ್ ನಲ್ಲಿ ಗೆಲ್ಲಬೇಕು. ಅಂದರೆ ಸಮಿಫೈನಲ್ ಹಾದಿ ಸುಗಮವಾಗಲಿದೆ. ಒಟ್ನಲ್ಲಿ ಟೀಂ ಇಂಡಿಯಾದ ವಿಶ್ವಕಪ್ ಭವಿಷ್ಯವು ಅಫ್ಘಾನಿಸ್ತಾನ್(Afghanistan) ಕೈಯಲ್ಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದರೆ ಟೀಂ ಇಂಡಿಯಾಗೆ ಬೇರೆ ಆಯ್ಕೆಗಳಿಲ್ಲ. ಲೀಗ್ ನಲ್ಲಿಯೇ ಗಂಟುಮೂಟೆ ಕಟ್ಟಬೇಕಾದ ಪರಿಸ್ಥಿತಿ ಇದೆ. ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ತುಂಬಾ ನೋವಿನ ಸಂಗತಿಯಾಗಿದೆ. ಹೀಗಾಗಿ ಅವರು ಕಿವೀಸ್ ಪಡೆ ಸೋಲಬೇಕೆಂದು ಪಾರ್ಥಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ